ಮೋಹಕ ನಟಿ, ರಾಜ್ ಜತೆ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಮಾಧವಿ ನಟನೆಗೆ ಗುಡ್ ಬೈ ಹೇಳಿದ್ಯಾಕೆ?

ದಾಸರಿ ರಾವ್ ಒಮ್ಮೆ ಮಾಧವಿಯ ಭರತನಾಟ್ಯವನ್ನು ವೀಕ್ಷಿಸಿದ್ದರು. ಆಗ ಆಕೆಯ ವಯಸ್ಸು ಬರೇ 13 ವರ್ಷ

ನಾಗೇಂದ್ರ ತ್ರಾಸಿ, Dec 28, 2019, 7:38 PM IST

Madhavi

ಬದುಕು, ಯಶಸ್ಸು, ಕೀರ್ತಿ ಮನುಷ್ಯನನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ಅದಕ್ಕೆ ಹಲವಾರು ನಟ, ನಟಿಯರು, ರಾಜಕಾರಣಿಗಳು, ಯಶಸ್ವಿ ಉದ್ಯಮಿಗಳು ಕೂಡಾ ಹೊರತಲ್ಲ. ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಒರಿಯಾ ಭಾಷೆಗಳಲ್ಲಿ ನಟಿಸಿದ್ದ ಮೋಹಕ ನಟಿ ಮಾಧವಿ ಶರ್ಮಾ ಸಾಕ್ಷಿ!

1976ರಿಂದ 1996ರವರೆಗೆ ಸುಮಾರು 20ವರ್ಷಗಳ ಸಿನಿ ಪ್ರಯಾಣದಲ್ಲಿ ಮಾಧವಿ 300 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿಯೂ ಕನ್ನಡ ಸಿನಿ ಪ್ರೇಕ್ಷಕರಿಗೆ ಮಾಧವಿ ಚಿರಪರಿಚಿತ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗೆ ಸಿನಿಮಾರಂಗದಲ್ಲಿ ಉತ್ತುಂಗದಲ್ಲಿದ್ದಾಗಲೇ ಮಾಧವಿ ದಿಢೀರನೆ ಮದುವೆ ನಿರ್ಧಾರಕ್ಕೆ ಬಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಮೇಲೆ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿದವರು ಇಂದಿಗೂ ನಟನೆಯಿಂದ ದೂರ ಉಳಿದುಬಿಟ್ಟಿದ್ದಾರೆ. ಸುಮಾರು 21 ವರ್ಷಗಳಿಂದ ಬೆಳ್ಳಿಪರದೆಯಿಂದ ದೂರವಾಗಿರುವ ಚೆಂದುಳ್ಳಿ ನಟಿ ಮಾಧವಿ ಈಗೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಸಿನಿಮಾಸಕ್ತರಲ್ಲಿ ಸಹಜವಾಗಿಯೇ ಮೂಡುವ ಪ್ರಶ್ನೆಯಾಗಿದೆ.

1962ರ ಆಗಸ್ಟ್ 12ರಂದು ಹೈದರಾಬಾದ್ ನಲ್ಲಿ ಮಾಧವಿ ಜನಿಸಿದ್ದರು. ಶಶಿರೇಖಾ ಮತ್ತು ಗೋವಿಂದ ಸ್ವಾಮಿ ದಂಪತಿಯ ಪುತ್ರಿಯ ಈಕೆ. ಬಾಲ್ಯದಲ್ಲಿಯೇ ಭರತನಾಟ್ಯ ಮತ್ತು ಫೋಕ್ ಡ್ಯಾನ್ಸ್ ತರನೇತಿ ಪಡೆದಿದ್ದ ಈಕೆ ಬಾಲ್ಯದಲ್ಲಿಯೇ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದ ಹೆಗ್ಗಳಿಕೆ ಮಾಧವಿಯದ್ದು. 1980ರ ದಶಕದ ಬಹುಬೇಡಿಕೆಯ ನಟಿ ಈಕೆ. ಆದರೆ ಸ್ಯಾಂಡಲ್ ವುಡ್, ತಮಿಳು, ತೆಲುಗಿನಲ್ಲಿ ಭರ್ಜರಿ ಸದ್ದು ಮಾಡಿದ್ದ ಮಾಧವಿ ಹಲವು ವರ್ಷಗಳ ಕಾಲ ಯಾವುದೇ ಸುದ್ದಿ ಮಾಡದೇ ನಿಗೂಢವಾಗಿ ಇದ್ದು ಬಿಟ್ಟಿದ್ದರು.

ಮಾಧವಿ ಪ್ರತಿಭೆಯನ್ನು ಗಮನಿಸಿದ್ದು ದಾಸರಿ ನಾರಾಯಣ ರಾವ್:

ಭಾರತೀಯ ಸಿನಿಮಾ ರಂಗದ ಪ್ರತಿಷ್ಠಿತ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ರಾಜಕಾರಣಿ ದಾಸರಿ ನಾರಾಯಣ ರಾವ್ ಒಮ್ಮೆ ಮಾಧವಿಯ ಭರತನಾಟ್ಯವನ್ನು ವೀಕ್ಷಿಸಿದ್ದರು. ಆಗ ಆಕೆಯ ವಯಸ್ಸು ಬರೇ 13 ವರ್ಷ! ನಂತರ ತಮ್ಮ ತೆಲುಗು ಸಿನಿಮಾ ಥೋರುಪು ಪಡಾಮಾರಾದಲ್ಲಿ ನಟನೆಗೆ ಆಫರ್ ಕೊಟ್ಟು ಬಿಟ್ಟಿದ್ದರು. ಈ ಚಿತ್ರದಲ್ಲಿನ ನಟನೆಯಲ್ಲಿ ಮಾಧವಿ ಜನರ ಮನಗೆದ್ದುಬಿಟ್ಟಿದ್ದಳು. ಈ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಮಾಧವಿಗೆ ಕನ್ನಡ, ತಮಿಳು, ಮಲಯಾಳಂ, ತೆಲುಗು, ಹಿಂದಿ, ಬೆಂಗಾಲಿ ಹಾಗೂ ಒರಿಯಾ ಭಾಷೆಗಳ ಸಿನಿಮಾಗಳಲ್ಲಿ ನಟಿಸುವಂತೆ ಬೇಡಿಕೆ ಬರಲು ಆರಂಭಿಸಿದ್ದವು.

ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ ಜತೆ ಹಲವು ಸಿನಿಮಾಗಳಲ್ಲಿ ಮಾಧವಿ ನಟಿಸಿದ್ದರು. ಚಿರಂಜೀವಿ ಜತೆಗಿನ ಮೊದಲ ಸಿನಿಮಾ 1982ರ ಇಂಟ್ಲೋ ರಾಮಯ್ಯ ವೀಧಿಲೂ ಕೃಷ್ಣಯ್ಯ ತೆಲುಗು ಸಿನಿಮಾದಲ್ಲಿ ಅಭಿನಯಿಸಿದ್ದು. ತದನಂತರ ಕೈದಿ ಚಿತ್ರದಲ್ಲಿ ನಟಿಸಿದ್ದು ಇದು ಸೂಪರ್ ಹಿಟ್ ಆಗಿತ್ತು. 1978ರಲ್ಲಿ ಕೆ.ಚಾಲಚಂದಿರ ಅವರ ಮರೋ ಚರಿತ ಚಿತ್ರದಲ್ಲಿ ಮಾಧವಿಗೆ ಪೋಷಕ ಪಾತ್ರ ನೀಡಿದ್ದರು. ಈ ಸಿನಿಮಾ 1981ರಲ್ಲಿ ಬಾಲಿವುಡ್ ನಲ್ಲಿ ಏಕ್ ದುಜೆ ಕೇ ಲಿಯೇ ಹೆಸರಿನಲ್ಲಿ ರಿಮೇಕ್ ಆಗಿತ್ತು. 1981ರಲ್ಲಿ ತೆರೆಕಂಡಿದ್ದ ಕೆ.ಬಾಲಚಂದಿರ್ ಅವರ ತಿಲ್ಲು ಮುಲ್ಲು ಸಿನಿಮಾದಲ್ಲಿ ಸೂಪರ್ ಸ್ಟಾರ್ ರಜನಿ ಜತೆ ಮಾಧವಿ ನಟಿಸಿದ್ದರು. 1990ರಲ್ಲಿ ಬಾಲಿವುಡ್ ನ ಅಗ್ನಿಪಥ್ ನಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಜತೆ ಅಭಿನಯಿಸಿದ್ದರು.

ಡಾ.ರಾಜ್ ಜತೆ ಹಲವು ಸಿನಿಮಾಗಳಲ್ಲಿ ನಟನೆ:

ತಮಿಳು, ತೆಲುಗಿನಲ್ಲಿ ಹೆಸರು ಮಾಡಿದ್ದ ಮಾಧವಿ ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅದರಲ್ಲಿಯೂ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಜತೆ ಮಾಧವಿ ಹಾಲು ಜೇನು, ಭಾಗ್ಯದ ಲಕ್ಷ್ಮಿ ಬಾರಮ್ಮ, ಅನುರಾಗ ಅರಳಿತು, ಶ್ರುತಿ ಸೇರಿದಾಗ, ಜೀವನ ಚೈತ್ರ, ಆಕಸ್ಮಿಕ, ಒಡಹುಟ್ಟಿದವರು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಹಾಲು ಜೇನು ಮತ್ತು ಮಲಯ ಮಾರುತ ಸಿನಿಮಾ ಮಾಧವಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ಅಲ್ಲದೇ ಡಾ.ವಿಷ್ಣುವರ್ಧನ್, ಅನಂತ್ ನಾಗ್, ಅಂಬರೀಶ್ ಜತೆಯೂ ಮಾಧವಿ ನಟಿಸಿದ್ದರು.

ಮಲಯಾಳಂನಲ್ಲಿಯೂ ಖ್ಯಾತ ನಟರಾದ ಮಮ್ಮುಟ್ಟಿ, ಮೋಹನ್ ಲಾಲ್ ಜತೆ ನಟಿಸಿದ್ದ ಹೆಗ್ಗಳಿಕೆ ಮಾಧವಿ ಅವರದ್ದಾಗಿದೆ.ತಮ್ಮ ಅದ್ಭುತ ನಟನೆಗಾಗಿ ರಾಜ್ಯ ಮತ್ತು ರಾಷ್ಟ್ರಪ್ರಶಸ್ತಿಯನ್ನು ಮಾಧವಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಸ್ವಾಮಿ ರಾಮ ಅನುಯಾಯಿ ಜತೆ ವಿವಾಹ:

ಬರೋಬ್ಬರಿ ಎರಡು ದಶಕಗಳ ಕಾಲ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ತಮ್ಮ ಕುಟುಂಬ ಸದಸ್ಯರೊಡನೆ ಚರ್ಚಿಸಿ ಮದುವೆಯಾಗುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದರು. ಅದರಂತೆ ತಮ್ಮ ಧಾರ್ಮಿಕ ಗುರು ಸ್ವಾಮಿ ರಾಮ ಅವರ ನಿರ್ದೇಶನದಂತೆ ಅವರ ಅನುಯಾಯಿ, ಔಷಧೀಯ ವಸ್ತುಗಳ ಮಾರಾಟ ಉದ್ಯಮಿ ರಾಲ್ಫಾ ಶರ್ಮಾ ಅವರ ಜತೆ 1996ರ ಫೆಬ್ರುವರಿ 14ರಂದು ಹಸೆಮಣೆ ಏರಿದ್ದರು.

ಮದುವೆ ನಂತರ ನ್ಯೂಜೆರ್ಸಿಗೆ:

ರಾಲ್ಫಾ ಶರ್ಮಾ ಜತೆ ವಿವಾಹವಾದ ನಂತರ ಮಾಧವಿ ಪತಿ ಜತೆ ನ್ಯೂಜೆರ್ಸಿಗೆ ತೆರಳಿದ್ದರು. ಅಲ್ಲಿಯೇ ವಾಸವಾಗಿದ್ದ ದಂಪತಿಗೆ ಟಿಫಾನಿ (13), ಪ್ರಿಸಿಲ್ಲಾ (9) ಹಾಗೂ ಎವೆಲಿನ್ (6) ಸೇರಿ ಮೂವರು ಮಕ್ಕಳು. ಮಾಧವಿ ಈಗ ಆಧ್ಯಾತ್ಮಿಕದತ್ತ ಒಲವು ಹೊಂದಿದ್ದು, ಆಂಧ್ರಪ್ರದೇಶದ ಅದೋನಿಯಲ್ಲಿ ಗುರು ಸ್ವಾಮಿ ರಾಮ ಅವರ ಸ್ಮರಣಾರ್ಥ ವೃದ್ಧಾಶ್ರಮ ಕಟ್ಟುವ ಯೋಚನೆಯಲ್ಲಿದ್ದಾರೆ. ನೀವು ಮತ್ತೆ ಸಿನಿಮಾದಲ್ಲಿ ನಟಿಸಲು ಬಯಸುತ್ತೀರಾ ಎಂಬ ಪ್ರಶ್ನೆಗೆ ತಾನು ಮತ್ತೆ ಚಿತ್ರರಂಗಕ್ಕೆ ಮರಳುವುದಿಲ್ಲ ಎಂದು ಮಾಧವಿ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.

ಟಾಪ್ ನ್ಯೂಸ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

IPL 2025-27: BCCI announces dates for next three IPL seasons

IPL 2025-27: ಮುಂದಿನ ಮೂರು ಐಪಿಎಲ್ ಸೀಸನ್‌ ನ ದಿನಾಂಕ ಪ್ರಕಟಿಸಿದ ಬಿಸಿಸಿಐ

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

AI world: ಕ್ರಿಮಿನಲ್‌ಗ‌ಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್‌!

5-video

ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು

Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್‌ ನಲ್ಲೇ ಪರದಾಡಿದ ಬ್ಯಾಟರ್‌ ಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

7-dharmasthala

Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

6-siruguppa

Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ

Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.