ಐಶ್ವರ್ಯಾ ನನ್ನ ಅಮ್ಮ, ಐವಿಎಫ್ ಮೂಲಕ ಹುಟ್ಟಿದೆ: ಆಂಧ್ರ ತರುಣ
Team Udayavani, Jan 3, 2018, 12:35 PM IST
ಮುಂಬಯಿ : ಆಂಧ್ರ ಪ್ರದೇಶದ ಯುವಕ ಸಂಗೀತ್ ಕುಮಾರ್ ಎಂಬಾತ “ನನ್ನ ಅಮ್ಮ ಬೇರೆ ಯಾರೂ ಅಲ್ಲ; ಬಾಲಿವುಡ್ ನಟಿ, ವಿಶ್ವ ಸುಂದರಿ, ಐಶ್ವರ್ಯಾ ರೈ ಬಚ್ಚನ್ ” ಹೇಳಿಕೊಂಡಿದ್ದಾನೆ.
“ನಾನು ಐಶ್ವರ್ಯಾ ರೈಬಚ್ಚನ್‌ಗೆ 1988ರಲ್ಲಿ ಲಂಡನ್‌ನಲ್ಲಿ ಐವಿಎಫ್ (ಇನ್ ವಿಟ್ರೋ ಫರ್ಟಿಲೈಸೇಶನ್) ಮೂಲಕ ಜನಿಸಿದೆ; ನನ್ನನ್ನು ಪಾಲಿಸಿ ಪೋಷಿಸಿದವರು ಐಶ್ವರ್ಯಾ ಅವರ ಹೆತ್ತವರಾದ ವೃಂದಾ ಮತ್ತು ಕೃಷ್ಣ ರೈ’ ಎಂದು ಸಂಗೀತ್ ಕುಮಾರ್ ಹೇಳಿಕೊಂಡಿದ್ದಾನೆ. ಈತನ ಹೇಳಿಕೆಯನ್ನು ಪಿಂಕ್‌ವಿಲಾ ವರದಿ ಮಾಡಿದೆ.
“ನನ್ನ ತಂದೆ ನನ್ನನ್ನು ಅನಂತರ ವಿಶಾಖಪಟ್ಟಣಕ್ಕೆ ಕರೆತಂದರು; ಅಲ್ಲಿಯ ಬಳಿಕ ನಾನು ಅವರೊಂದಿಗೆ ಇದ್ದೇನೆ” ಎಂದು 29ರ ಹರೆಯದ ಸಂಗೀತ್ ಕುಮಾರ್ ಹೇಳಿದ್ದಾನೆ.
“ಐಶ್ವರ್ಯಾ ರೈ ನನ್ನ ಅಮ್ಮ ಎಂಬುದನ್ನು ಸಾಬೀತು ಪಡಿಸುವ ದಾಖಲೆ ಪತ್ರಗಳ ನಾಶಕ್ಕೆ ನನ್ನ ಸಂಬಂಧಿಕರೇ ಕಾರಣ’ ಎಂದು ಸಂಗೀತ್ ಕುಮಾರ್ ದೂರಿದ್ದಾನೆ.
ಸಂಗೀತ್ ಕುಮಾರ್ ನ ಈ ಹೇಳಿಕೆಗೆ ಐಶ್ವರ್ಯಾ ರೈ ಪ್ರತಿಕ್ರಿಯಿಸುವರೇ; ಪ್ರತಿಕ್ರಿಯಿಸಿದಲ್ಲಿ ಅದು ಹೇಗಿದ್ದೀತು ಎಂಬ ಕುತೂಹಲ ಈಗ ಉಂಟಾಗಿದೆ.
ಪ್ರಸಿದ್ಧ ಸಿನಿಮಾ ಹೀರೋ, ಹೀರೋಯಿನ್‌ಗಳನ್ನು ನನ್ನ ಪತಿ, ಪತ್ನಿ ಎಂದು ಹೇಳಿಕೊಂಡವರ ಬಗ್ಗೆ ನಾವು ಈ ಹಿಂದೆಲ್ಲ ಓದಿದ್ದೇವೆ; ಆದರೆ ಪ್ರಸಿದ್ಧ ನಟಿ ಯೊಬ್ಬಳಿಗೆ ತಾನು ಐವಿಎಫ್ ಮೂಲಕ ಜನಿಸಿದೆ; ಆಕೆಯ ನನ್ನ ತಾಯಿ ಎಂದು ಹೇಳಿಕೊಂಡ ಪ್ರಕರಣ ಬಹುಷಃ ಇದೇ ಮೊದಲು ಇದ್ದೀತು !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.