Animal teaser ರಿಲೀಸ್: ʼಡಾರ್ಲಿಂಗ್ʼ ಎಂದು ರಶ್ಮಿಕಾಗೆ ಶುಭಕೋರಿದ ದೇವರಕೊಂಡ
Team Udayavani, Sep 28, 2023, 3:27 PM IST
ಹೈದರಾಬಾದ್: ರಣ್ಬೀರ್ ಕಪೂರ್ ಅವರ ʼಅನಿಮಲ್ʼ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಪ್ಯಾನ್ ಇಂಡಿಯಾ ಪ್ರೇಕ್ಷಕರು ಟೀಸರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಲವು ಸ್ಟಾರ್ ಗಳು ರಣ್ಭೀರ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿ, ಅವರ ಸಿನಿಮಾದ ಟೀಸರ್ ನ್ನು ಹಂಚಿಕೊಂಡಿದ್ದಾರೆ.
ʼಅನಿಮಲ್ʼ ಸಿನಿಮಾದಲ್ಲಿ ನಾಯಕಿಯಗಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಕಾಣಿಸಿಕೊಳ್ಳಲಿದ್ದಾರೆ. ಅವರು ʼಗೀತಾಂಜಲಿʼ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼಅನಿಮಲ್ʼ ಚಿತ್ರದ ಟೀಸರ್ ನೋಡಿ ನಟ ವಿಜಯ್ ದೇವರಕೊಂಡ ಅವರು ಶುಭಾಶಯವನ್ನು ಕೋರಿದ್ದಾರೆ.
ಟ್ವಿಟರ್ ನಲ್ಲಿ ʼಅನಿಮಲ್ʼ ಚಿತ್ರದ ಟೀಸರ್ ನೋಡಿ ದೇವರಕೊಂಡ ಅವರು ʼಡಾರ್ಲಿಂಗ್ಸ್ʼ ಎಂದು ಬರೆದುಕೊಂಡು ರಶ್ಮಿಕಾ ಹಾಗೂ ಸಂದೀಪ್ ವಂಗಾ ಅವರ ಸಿನಿಮಾಕ್ಕೆ ಶುಭಕೋರಿದ್ದಾರೆ.
ʼಅನಿಮಲ್ʼ ಲಿಂಕ್ ಹಂಚಿಕೊಂಡು, “ನನ್ನ ಡಾರ್ಲಿಂಗ್ಸ್ ಗಳಾದ ಸಂದೀಪ್ ವಂಗಾ ರಶ್ಮಿಕಾ ಅವರಿಗೆ ಶುಭಕೋರುತ್ತಿದ್ದೇನೆ. ನನ್ನ ಮೆಚ್ಚಿನ ರಣ್ಬೀರ್ ಕಪೂರ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಎಂದು ಬರೆದುಕೊಂಡಿದ್ದಾರೆ.
ಸಂದೀಪ್ ವಂಗಾ ಅವರೊಂದಿಗೆ ʼಅರ್ಜುನ್ ರೆಡ್ಡಿʼ ಸಿನಿಮಾದಲ್ಲಿ ದೇವರಕೊಂಡ ಕೆಲಸ ಮಾಡಿದ್ದು, ಇತ್ತ ರಶ್ಮಿಕಾ ಜೊತೆ ʼಗೀತಾ ಗೋವಿಂದಂʼ ʼಡಿಯರ್ ಕಾರ್ಮೆಡ್ʼ ಸಿನಿಮಾ ದೇವರಕೊಂಡ ನಟಿಸಿದ್ದಾರೆ. ರಶ್ಮಿಕಾ ಹಾಗೂ ದೇವರಕೊಂಡ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲ ಸಮಯದಲ್ಲಿ ಹರಿದಾಡುತ್ತಿದೆ.
ರಶ್ಮಿಕಾ – ದೇವರಕೊಂಡ ಆತ್ಮೀಯವಾಗಿದ್ದು, ಇಬ್ಬರು ಅನೇಕ ಬಾರಿ ಜೊತೆಯಾಗಿಯೇ ಸುತ್ತಾಡಿಕೊಂಡಿರುವುದು ಸುದ್ದಿಯಾಗಿತ್ತು.
ಸದ್ಯ ರಶ್ಮಿಕಾ ʼಪುಷ್ಪ-2ʼ ಸಿನಿಮಾದ ಮೇಲೆ ಭಾರೀ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ದೇವರಕೊಂಡ ಇತ್ತೀಚೆಗೆ ʼಖುಷಿʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
Wishing my Darlings @imvangasandeep @iamRashmika ❤️ And my fav RK the very best and Happy Birthday! #AnimalTeaserhttps://t.co/O7zYnKIlA1
— Vijay Deverakonda (@TheDeverakonda) September 28, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.