Television: ಖ್ಯಾತ ನಟಿ ಬಳಿಕ ಮತ್ತೋರ್ವ ನಟ ನಿಧನ; 3 ದಿನದಲ್ಲಿ ಮೂರು ಸಾವು ಕಂಡ ಕಿರುತೆರೆ
Team Udayavani, May 24, 2023, 10:36 AM IST
ಮುಂಬಯಿ: ಕಿರುತೆರೆ ರಂಗಕ್ಕೆ ಇಂದು ಕರಾಳ ದಿನ. ನಟಿ ವೈಭವಿ ಉಪಾಧ್ಯಾಯ ಅಪಘಾತದಲ್ಲಿ ಮೃತಪಟ್ಟ ಸುದ್ದಿ ಕೇಳಿ ಆಘಾತದಲ್ಲಿದ್ದ ಜನರಿಗೆ ಇದೀಗ ಮತ್ತೋರ್ವ ಖ್ಯಾತ ನಟ ಮೃತಪಟ್ಟಿರುವ ಸುದ್ದಿ ಮತ್ತಷ್ಟು ಆಘಾತವನ್ನೀಡಿದೆ.
ಟಿವಿ ಲೋಕದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ನಿತೇಶ್ ಪಾಂಡೆ (51) ಹೃದಯ ಸ್ತಂಭನ ಉಂಟಾಗಿ ಮುಂಬಯಿನಲ್ಲಿ ನಿಧನರಾಗಿದ್ದಾರೆ.
1990 ರಲ್ಲಿ ರಂಗಭೂಮಿಯಲ್ಲಿ ನಟಿಸುವ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ಅವರು 1995 ರಲ್ಲಿ ಬಂದ ʼತೇಜಸ್ʼ ಸಿನಿಮಾದಲ್ಲಿ ಪತ್ತೇದಾರಿ ಪಾತ್ರವೊಂದರಲ್ಲಿ ನಟಿಸಿ ಗಮನ ಸೆಳೆದಿದ್ದರು. ಆ ಬಳಿಕ ಕಿರುತೆರೆಯಲ್ಲಿ ಸಾಲು ಸಾಲಾಗಿ ಧಾರಾವಾಹಿಗಳಲ್ಲಿ ನಟಿಸಿದರು. ʼಮಂಜಿಲೀನ್ ಅಪ್ನಿ ಅಪ್ನಿʼ, ʼಅಸ್ತಿತ್ವ ಏಕ್ ಪ್ರೇಮ್ ಕಹಾನಿʼ, ʼಸಾಯಾ, ಜುಸ್ತಜೂʼ ದುರ್ಗೇಶ್ ನಂದಿನಿ ಮುಂತಾದ ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.
ʼಓಂ ಶಾಂತಿ ಓಂʼ ,ʼಬದಾಯಿ ದೋʼ ಮುಂತಾದ ಸಿನಿಮಾದಲ್ಲೂ ಅವರು ನಟಿಸಿದ್ದಾರೆ. ಡ್ರೀಮ್ ಕ್ಯಾಸಲ್ ಪ್ರೊಡಕ್ಷನ್ಸ್ ಎಂಬ ಹೆಸರಿನ ಸ್ವತಂತ್ರ ನಿರ್ಮಾಣ ಸಂಸ್ಥೆಯನ್ನೂ ಅವರು ನಡೆಸುತ್ತಿದ್ದರು.
ʼಖೋಸ್ಲಾ ಕಾ ಘೋಸ್ಲಾʼದಲ್ಲಿನ ಅವರ ಅಭಿನಯ ಅಪಾರ ಜನರನ್ನು ರಂಜಿಸಿತ್ತು. ʼಅನುಪಮಾʼ ಮತ್ತು ʼಪ್ಯಾರ್ ಕಾ ದರ್ದ್ ಹೈ ಮೀಟಾ ಮೀಟಾ ಪ್ಯಾರಾ ಪ್ಯಾರಾʼ ಧಾರಾವಾಹಿಯಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು.
ಉತ್ತರಾಖಂಡದ ಅಲ್ಮೋರಾ ಕುಮಾನ್ ಮೂಲದವರಾದ ಅವರು ಕಳೆದ 25 ವರ್ಷದಿಂದ ಕಿರುತೆರೆಯಲ್ಲಿ ಕೆಲಸ ಮಾಡಿಕೊಂಡಿದ್ದರು.
ಕಿರುತೆರೆ ರಂಗಕ್ಕೆ ಈ ವಾರ ಅತ್ಯಂತ ಕರಾಳ ವಾರ ಎಂದರೆ ತಪ್ಪಾಗದು. ಮೇ. 22 ರಂದು ಆದಿತ್ಯ ಸಿಂಗ್ ರಜಪೂತ್ ವಾಶ್ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಆ ಬಳಿಕ ಅಪಘಾತದಲ್ಲಿ ನಟಿ ವೈಭವಿ ಉಪಾಧ್ಯಾಯ ಮೃತಪಟ್ಟಿದ್ದಾರೆ. ಇದೀಗ ನಟ ನಿತೇಶ್ ಪಾಂಡೆ ನಿಧನರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.