ಚಕ್ಡಾ ಎಕ್ಸ್ ಪ್ರೆಸ್: ಭಾರತೀಯ ಮಹಿಳಾ ಕ್ರಿಕೆಟರ್ ಬಯೋಪಿಕ್ ನಲ್ಲಿ ಅನುಷ್ಕಾ ಶರ್ಮಾ ಮಿಂಚು
Team Udayavani, Jan 6, 2022, 11:55 AM IST
ಬಾಲಿವುಡ್ ನಲ್ಲಿ ಕ್ರೀಡಾ ತಾರೆಗಳ ಬಯೋಪಿಕ್ ಗಳು ಹೆಚ್ಚಾಗುತ್ತಿದೆ. ಭಾರತ ವನಿತಾ ಕ್ರಿಕೆಟ್ ತಂಡದ ನಾಯಕ ಮಿಥಾಲಿ ರಾಜ್ ಅವರ ಜೀವನಾಧಾರಿತ ಕಥೆ ‘ಶಾಬಾಷ್ ಮಿಥು’ ಚಿತ್ರದಲ್ಲಿ ತಾಪ್ಸಿ ಪನ್ನು ನಟಿಸಿದರೆ, ಇದೀಗ ಅನುಷ್ಕಾ ಶರ್ಮಾ ಅವರೀಗ ಮತ್ತೋರ್ವ ಮಹಿಳಾ ಕ್ರಿಕೆಟರ್ ರ ಬಯೋಪಿಕ್ ನ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಭಾರತೀಯ ವನಿತಾ ಕ್ರಿಕೆಟ್ ನ ಲೆಜೆಂಡರಿ ಬೌಲರ್ ಜೂಲನ್ ಗೋಸ್ವಾಮಿ ಅವರ ಪಾತ್ರದಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ. ಚಿತ್ರಕ್ಕೆ ‘ಚಕ್ಡಾ ಎಕ್ಸ್ ಪ್ರೆಸ್’ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ:ಜೋಹಾನ್ಸ್ ಬರ್ಗ್ ಟೆಸ್ಟ್ ನಲ್ಲಿ ಜಸ್ಪ್ರೀತ್- ಜೆನ್ಸನ್ ಜಗಳ; ಓಡಿ ಬಂದ ಅಂಪೈರ್: ವಿಡಿಯೋ ನೋಡಿ
ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿರುವ ಅನುಷ್ಕಾ, “ಇದು ನಿಜವಾಗಿಯೂ ವಿಶೇಷವಾದ ಚಿತ್ರ, ಯಾಕೆಂದರೆ ಇದು ಅದ್ಭುತ ತ್ಯಾಗದ ಕಥೆಯಾಗಿದೆ. ಚಕ್ಡಾ ಎಕ್ಸ್‌ಪ್ರೆಸ್ ಮಾಜಿ ಭಾರತೀಯ ನಾಯಕಿ ಜೂಲನ್ ಗೋಸ್ವಾಮಿ ಅವರ ಜೀವನದಿಂದ ಪ್ರೇರಿತವಾಗಿದೆ ಮತ್ತು ಇದು ಮಹಿಳಾ ಕ್ರಿಕೆಟ್ ಜಗತ್ತಿನಲ್ಲಿ ಕಣ್ಣು ತೆರೆಸಲಿದೆ. ಜೂಲನ್ ಕ್ರಿಕೆಟರ್ ಆಗಲು ಮತ್ತು ಜಾಗತಿಕ ವೇದಿಕೆಯಲ್ಲಿ ತನ್ನ ದೇಶವನ್ನು ಹೆಮ್ಮೆಪಡಲು ನಿರ್ಧರಿಸಿದ ಸಮಯದಲ್ಲಿ, ಮಹಿಳೆಯರಿಗೆ ಕ್ರೀಡೆಯನ್ನು ಆಡುವ ಬಗ್ಗೆ ಯೋಚಿಸುವುದು ತುಂಬಾ ಕಠಿಣವಾಗಿತ್ತು. ಈ ಚಲನಚಿತ್ರವು ಆಕೆಯ ಜೀವನವನ್ನು ಮತ್ತು ಮಹಿಳಾ ಕ್ರಿಕೆಟ್ ಅನ್ನು ರೂಪಿಸಿದ ಹಲವಾರು ನಿದರ್ಶನಗಳ ತೋರಿಸುತ್ತದೆ” ಎಂದು ಬರೆದುಕೊಂಡಿದ್ದಾರೆ.
It is a really special film because it is essentially a story of tremendous sacrifice. Chakda Xpress is inspired by the life and times of former Indian captain Jhulan Goswami and it will be an eye-opener into the world of women’s cricket. pic.twitter.com/eRCl6tLvEu
— Anushka Sharma (@AnushkaSharma) January 6, 2022
ಚಕ್ಡಾ ಎಕ್ಸ್‌ಪ್ರೆಸ್ ಚಿತ್ರವು ಅನುಷ್ಕಾ ಶರ್ಮಾ ಮಗಳು ವಮಿಕಾ ಹುಟ್ಟಿದ ನಂತರ ಅವರ ಮೊದಲ ಚಿತ್ರವಾಗಿದೆ. 2018ರಲ್ಲಿ ಜೀರೋ ಚಿತ್ರದಲ್ಲಿ ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ಚಕ್ಡಾಎಕ್ಸ್ ಪ್ರೆಸ್ ಚಿತ್ರವನ್ನು ಪ್ರಾಸಿತ್ ರಾಯ್ ನಿರ್ದೇಶನ ಮಾಡುತ್ತಿದ್ದು, ಕ್ಲೀನ್ ಸ್ಟೇಟ್ ಫಿಲಂಸ್ ನಿರ್ಮಾಣ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.