ಬಾಲಿವುಡ್ ಗಾಸಿಪ್; ನಟ ರಣಬೀರ್ ಕಪೂರ್, ಅಲಿಯಾ ಭಟ್ ಡೇಟಿಂಗ್!
Team Udayavani, Feb 2, 2018, 4:28 PM IST
ಮುಂಬೈ: ಹಿರಿಯ ನಿರ್ದೇಶಕ ಮಹೇಶ್ ಭಟ್ ಪುತ್ರಿ ಅಲಿಯಾ ಭಟ್ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ಜೋಡಿ ತೆರೆ ಮೇಲೆ ಪತಿ, ಪತ್ನಿಯರಾಗಿ ನಟಿಸಿದ್ದರೆ, ಮತ್ತೊಂದೆಡೆ ನಿಜ ಜೀನವದಲ್ಲೂ ಕೈಹಿಡಿಯಲಿದ್ದಾರೆ ಎಂಬ ಗುಸುಗುಸು ಸುದ್ದಿ ಹರಿದಾಡುತ್ತಿದೆ.
ಇತ್ತೀಚೆಗೆ ರಣಬೀರ್, ಅಲಿಯಾ ಇಬ್ಬರೂ ಜೊತೆ, ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ.
ಸ್ಪೋಟ್ ಬಾಯ್ ಇ ಡಾಟ್ ಕಾಮ್ ಪ್ರಕಾರ, ಅಲಿಯಾ ಮತ್ತು ರಣಬೀರ್ ನಡುವಿನ ಮಾತುಕತೆ ಇದಕ್ಕೆ ಮತ್ತಷ್ಟು ಇಂಬು ಕೊಟ್ಟಿದೆ ಎಂದು ಹೇಳಿದೆ. ಶೂಟಿಂಗ್ ಇಲ್ಲದ ವೇಳೆ ರಣಬೀರ್ ಅಲಿಯಾ ಸುತ್ತಮುತ್ತಲೇ ತಿರುಗುತ್ತಿರುವುದಾಗಿ ವರದಿ ವಿವರಿಸಿದೆ.
ಇತ್ತೀಚೆಗೆ ಇಬ್ಬರೂ ರಹಸ್ಯವಾಗಿ ಮಾತುಕತೆ ನಡೆಸಲು ಶುರು ಮಾಡಿದ್ದಾರೆ ಎಂಬುದು ಹೊಸ ಸುದ್ದಿ. “ರಾಕ್ ಸ್ಟಾರ್” ಸಿನಿಮಾದ ಹೀರೋ ಕಳೆದ ವಾರ ರಾತ್ರಿ 11ಗಂಟೆ ಸುಮಾರಿಗೆ ಅಲಿಯಾ ಭಟ್ ಳನ್ನು ಮನೆಗೆ ಡ್ರಾಪ್ ಕೊಟ್ಟಿದ್ದು, ಆತ ಬೆಳಗ್ಗೆ 7ಗಂಟೆಗೆ ಮನೆಯಿಂದ ನಿರ್ಗಮಿಸಿರುವುದಾಗಿ ವರದಿ ಹೇಳಿದೆ.
ತನಗೆ ರಣಬೀರ್ ಕಪೂರ್ ಅಂದ್ರೆ ತುಂಬಾ ಇಷ್ಟ, ನಾನು ಆತನನ್ನೇ ಮದುವೆಯಾಗುವುದು. ಆತ ಕತ್ರಿನಾ ಕೈಫ್ ಜತೆ ಡೇಟಿಂಗ್ ಮಾಡುತ್ತಿದ್ದಾನೆ ಎಂದೆಲ್ಲಾ ಹೇಳುತ್ತಾರೆ, ಆದರೆ ನಾನು ಆತನನ್ನೇ ಮದುವೆಯಾಗಬೇಕು ಎಂದು ಅಲಿಯಾ ಭಟ್ ಕಾಫಿ ವಿತ್ ಕರಣ್ ಸರಣಿಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ವೇಳೆ ಖುಲ್ಲಂಖುಲ್ಲಾ ಮಾತನಾಡಿದ್ದನ್ನು ನೆನಪಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.