Bollywood: 9 ವರ್ಷದ ಸಲ್ಲು – ಅರಿಜಿತ್ ಮುನಿಸಿಗೆ ಕೊನೆ? ಟೈಗರ್ ಮನೆಗೆ ಭೇಟಿ ಕೊಟ್ಟ ಗಾಯಕ
Team Udayavani, Oct 5, 2023, 3:03 PM IST
ಮುಂಬಯಿ: ಬಾಲಿವುಡ್ ಕಾ ಭಾಯಿ ಸಲ್ಮಾನ್ ಖಾನ್ ಸಿನಿರಂಗದಲ್ಲಿ 35 ವರ್ಷಗಳನ್ನು ಪೊರೈಸಿದ್ದಾರೆ. ಈ ನಡುವೆ ಅವರ ಬಹು ನಿರೀಕ್ಷಿತ ʼಟೈಗರ್-3ʼ ಸಿನಿಮಾದ ಕುರಿತು ಇತ್ತೀಚೆಗೆ ಅಪ್ಡೇಟ್ ಹೊರಬಿದ್ದಿದೆ.
ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಅವರು ನವ ಕಲಾವಿದರ ಜೊತೆಯಾಗಿ ನಿಂತಿದ್ದಾರೆ. ಸಾಮಾನ್ಯವಾಗಿ ಸಲ್ಲುಭಾಯಿ ಜೊತೆ ಯಾರೂ ಕೂಡ ಕಿರಿಕ್ ಮಾಡಲು ಹೋಗುವುದಿಲ್ಲ ಯಾಕೆಂದರೆ ಅದರ ಪರಿಣಾಮ ಆ ಕಲಾವಿದರ ವೃತ್ತಿ ಬದುಕಿನ ಮೇಲೆ ಬೀಳುತ್ತದೆ. ಇದಕ್ಕಿರುವ ಒಂದು ಕಾರಣ ಜನಪ್ರಿಯ ಗಾಯಕ ಅರಿಜಿತ್ ಸಿಂಗ್.
ಏನಿದು ಅರಿಜಿತ್ ಸಿಂಗ್ – ಸಲ್ಮಾನ್ ಖಾನ್ ಮುನಿಸು? : ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಅರಿಜಿತ್ ಸಿಂಗ್ ಮಾತನಾಡಿದ ರೀತಿಯಿಂದಾಗಿ ಅರಿಜಿತ್ ಅವರ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಿತ್ತು.
2014 ರಲ್ಲಿ ಸಲ್ಮಾನ್ ಖಾನ್ ಅವರು ಪ್ರಶಸ್ತಿ ಸಮಾರಂಭವೊಂದನ್ನು ನಿರೂಪಣೆ ಮಾಡುತ್ತಿದ್ದರು. ಈ ನಡುವೆ ಅರಿಜಿತ್ ಅವರ ಹಾಡೊಂದಕ್ಕೆ ಪ್ರಶಸ್ತಿ ಬಂದಿದೆ. ಇದಕ್ಕೆ ಸಲ್ಮಾನ್ ಖಾನ್ ಅವರು ಅರಿಜಿತ್ ಸಿಂಗ್ ಅವರ ಹೆಸರು ಕರೆದುವೇದಿಕೆಗೆ ಕರೆದಿದ್ದರು. ಎರಡು ಮೂರು ಬಾರಿ ಅರಿಜಿತ್ ಅವರ ಹೆಸರು ಕರೆದ ಬಳಿಕ ಅರಿಜಿತ್ ವೇದಿಕೆಗೆ ಬಂದಿದ್ದರು. ಇದಕ್ಕೆ ಸಲ್ಮಾನ್ ಖಾನ್ ತಮಾಷೆಗೆ “ನೀವು ನಿದ್ರೆ ಮಾಡುತ್ತಿದ್ರಾ? ಎಂದಿದ್ದರು. ಆದರೆ ಅರಿಜಿತ್ ಇದಕ್ಕೆ ಅರಿಜಿತ್ “ನೀವು(ನಿರೂಪಕರು) ನಿದ್ರೆ ಬರುವಂತೆ ಮಾಡಿದ್ರಿ” ಎಂದು ಹೇಳಿದ್ದರು.
ಇದನ್ನೂ ಓದಿ: Raj Kundra: ನನ್ನ ಕೆಲಸ ಬಟ್ಟೆ ತೆಗೆಯು.. ವೇದಿಕೆಯಲ್ಲಿ 18+ ಜೋಕ್ ಹೇಳಿದ ರಾಜ್ ಕುಂದ್ರಾ
ಅದಕ್ಕೆ ಸಲ್ಮಾನ್ ಖಾನ್ ಪ್ರತಿಕ್ರಿಯಿಸಿ, “ ಇದು ನಮ್ಮ ಸಮಸ್ಯೆ ಅಲ್ಲ, ‘ತುಮ್ ಹಿ ಹೋ’ ಹಾಡು ಪ್ಲೇ ಆಗುತ್ತಲೇ ಇದ್ದರೆ..” ಎಂದು ಹೇಳಿದ್ದರು.
ವೇದಿಕೆಯಲ್ಲಿ ನಡೆದ ಈ ಸಂಭಾಷಣೆ ವೇದಿಕೆಯ ಆಚೆ ಸಲ್ಮಾನ್ ಖಾನ್ ಅವರನ್ನು ಕೆರಳಿಸಿತ್ತು. ಅರಿಜಿತ್ ಅವರ ಮಾತು ಸಲ್ಮಾನ್ ಖಾನ್ ಅವರಿಗೆ ಅವಮಾನದಂತಾಗಿತ್ತು. ಈ ಕಾರಣದಿಂದ ʼಟೈಗರ್ʼ ಗಾಯಕನ ಮೇಲೆ ಗರಂ ಆಗಿದ್ದರು.
ಸಲ್ಮಾನ್ ಖಾನ್ ಅವರು ತನ್ನ ಸಿನಿಮಾವಾದ ‘ಸುಲ್ತಾನ್’ ಮತ್ತು ‘ಬಜರಂಗಿ ಭಾಯಿಜಾನ್’ ದಲ್ಲಿ ಅರಿಜಿತ್ ಅವರ ಹಾಡುಗಳನ್ನು ತೆಗೆದು ಹಾಕುವಂತೆ ಹೇಳಿದ್ದರು. ಸಲ್ಮಾನ್ ಖಾನ್ ಅವರ ಸಿಟ್ಟನ್ನು ಅರಿತ ಅರಿಜಿತ್ ಅನೇಕ ಬಾರಿ ಸಲ್ಲು ಬಳಿ ಕ್ಷಮೆ ಕೇಳಿದ್ದರು. 2016 ರಲ್ಲಿ ಬಹಿರಂಗವಾಗಿ ಗಾಯಕ ಸಲ್ಮಾನ್ ಬಳಿ ಕ್ಷಮೆ ಕೇಳಿದ್ದರು.
ಇದಾಗಿ 9 ವರ್ಷಗಳು ಕಳೆದಿದೆ. ನಿಧಾನವಾಗಿ ಅರಿಜಿತ್ ಸಿಂಗ್ ಬಿಟೌನ್ ನಲ್ಲಿ ಮತ್ತೆ ಮಿಂಚುತ್ತಿದ್ದಾರೆ. ಇದೀಗ ಸಲ್ಮಾನ್ ಖಾನ್ ಅವರ ನಿವಾಸದ ಬಳಿ ಅರಿಜಿತ್ ಕಾಣಿಸಿಕೊಂಡಿದ್ದಾರೆ. ಬುಧವಾರ(ಅ.4 ರಂದು) ಅರಿಜಿತ್ ಸಿಂಗ್ ಅವರು ಸಲ್ಮಾನ್ ಖಾನ್ ಅವರ ಮುಂಬಯಿ ನಿವಾಸದಿಂದ ಹೊರಗೆ ಬರುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ʼಟೈಗರ್-3ʼ ಸಿನಿಮಾಕ್ಕಾಗಿ ಸಲ್ಮಾನ್ ಅವರ ಜೊತೆ ಮತ್ತೆ ಅರಿಜಿತ್ ಸಿಂಗ್ ಜೊತೆಯಾಗಲಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಅರಿಜಿತ್ ಅವರ ಸಲ್ಲು ಮನೆ ಭೇಟಿಯ ವಿಡಿಯೋ ಸೋಶಿಯಲ್ ವೈರಲ್ ಆಗಿದೆ.
Arijit singh Spotted at #SalmanKhan‘s house Today. What’s happening?? #Tiger3 #Tiger3Trailerpic.twitter.com/tLPKUnEN2p
— MASS (@Freak4Salman) October 4, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.