ಫಿಲ್ಮ್ ಛೇಂಬರ್ ಮುಂಭಾಗ ನಟಿ ಶ್ರೀರೆಡ್ಡಿ ಅರೆನಗ್ನ ಪ್ರತಿಭಟನೆ!
Team Udayavani, Apr 7, 2018, 3:02 PM IST
ಹೈದರಾಬಾದ್:ತೆಲುಗು ಸಿನಿಮಾ ರಂಗದಲ್ಲಿನ ಕಾಸ್ಟಿಂಗ್ ಕೌಚ್(ಲೈಂಗಿಕ ಕಿರುಕುಳ) ನಿಲ್ಲಿಸಬೇಕೆಂದು ಆಗ್ರಹಿಸಿ ತೆಲುಗು ನಟಿ ಶ್ರೀರೆಡ್ಡಿ ಶನಿವಾರ ಬೆಳಗ್ಗೆ ತೆಲುಗು ಫಿಲ್ಮ್ ಛೇಂಬರ್ ಮುಂಭಾಗ ಅರೆನಗ್ನವಾಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ತದನಂತರ ಪೊಲೀಸರು ನಟಿ ಶ್ರೀರೆಡ್ಡಿಯನ್ನು ವಶಕ್ಕೆ ತೆಗೆದುಕೊಂಡಿದ್ದರು.
ತೆಲುಗು ಸಿನಿಮಾದ ಹಲವಾರು ನಿರ್ಮಾಪಕರು ಮತ್ತು ನಿರ್ದೇಶಕರು ಲೈಂಗಿಕ ಕಿರುಕುಳ ನೀಡಿರುವುದಾಗಿ ಶ್ರೀರೆಡ್ಡಿ ಆರೋಪಿಸಿದ್ದಾರೆ. ಏತನ್ಮಧ್ಯೆ ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸಿರುವ ಶ್ರೀರೆಡ್ಡಿಗೆ ಸಿನಿಮಾ ಕಲಾವಿದರ ಸಂಘದ(ಎಂಎಎ) ಸದಸ್ಯತ್ವ ನೀಡಲು ನಿರಾಕರಿಸಲಾಗಿದೆ.
ಸಿನಿಮಾದಲ್ಲಿ ಅವಕಾಶ ಕೊಡುವ ಮುನ್ನ ನಗ್ನ ಪೋಟೋ ಮತ್ತು ವಿಡಿಯೋ ಕಳುಹಿಸಲು ತೆಲುಗು ಸಿನಿಮಾ ರಂಗದ ಹಲವು ಮಂದಿ ಬೇಡಿಕೆ ಇಟ್ಟಿದ್ದರು. ಅದರಂತೆ ಫೋಟೋ ಮತ್ತು ವಿಡಿಯೋ ಕಳುಹಿಸಿರುವುದಾಗಿ ಶ್ರೀರೆಡ್ಡಿ ತಿಳಿಸಿದ್ದಾರೆ. ಆದರೆ ನಗ್ನ ಪೋಟೋ ಮತ್ತು ವಿಡಿಯೋ ನೋಡಿದರೆ ವಿನಃ ಸಿನಿಮಾದಲ್ಲಿ ನಟಿಸಲು ಯಾವುದೇ ಅವಕಾಶ ಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲ ತನ್ನಿಂದ ಲೈವ್ ನಗ್ನ ವಿಡಿಯೋಕ್ಕಾಗಿ ಬೇಡಿಕೆ ಇಟ್ಟಿದ್ದರು. ಸಿನಿಮಾಗಳಲ್ಲಿ ನಟಿಸುವ ನಟಿಯರಿಗೆ ಲೈಂಗಿಕ ಕಿರುಕುಳ ನೀಡುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇಂತಹ ಕಾಸ್ಟಿಂಗ್ ಕೌಚ್ ತೆಲುಗು ಸಿನಿಮಾ ರಂಗದಲ್ಲಿ ನಿಲ್ಲಬೇಕೆಂದು ಶ್ರೀರೆಡ್ಡಿ ಆಗ್ರಹಿಸಿದ್ದಾರೆ.
ಸಿನಿಮಾ ರಂಗದಲ್ಲಿನ ಕಾಸ್ಟಿಂಗ್ ಕೌಚ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಶ್ರೀರೆಡ್ಡಿ ಬೆಳಗ್ಗೆ ಸಲ್ವಾರ್ ಕಮೀಜ್ ಹಾಕಿಕೊಂಡು ಫಿಲ್ಮ್ ಛೇಂಬರ್ ಎದುರು ಬಂದಿದ್ದು, ಬಳಿಕ ವಿಡಿಯೋ ಕ್ಯಾಮರಾದ ಎದುರಲ್ಲೇ ತನ್ನ ಬಟ್ಟೆಯನ್ನು ಕಳಚಿ, ಕೈಯನ್ನು ಎದೆಗೆ ಅಡ್ಡ ಹಿಡಿದು, ಅಂಡರ್ ವೇರ್ ನಲ್ಲಿ ನೆಲದ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದರು.! ನನ್ನ ನೋವನ್ನು ಹೊರಹಾಕಲು ನನಗೆ ಉಳಿದಿರುವ ದಾರಿ ಇದೊಂದೇ. ಒಂದು ವೇಳೆ ತೆಲುಗು ನಿರ್ಮಾಪಕರು ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡದೆ ಹೋದರೆ ಮುಂದೆ ಇನ್ನಷ್ಟು ಪರಿಣಾಮಕಾರಿಯಾಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Mika Singh: ಮಿಕಾ ಹಾಡಿಗೆ ಫಿದಾ..ಪಾಕ್ ಅಭಿಮಾನಿಯಿಂದ 3 ಕೋಟಿ ರೂ. ವಾಚ್, ಚಿನ್ನ ಗಿಫ್ಟ್
Actress: ಸಲ್ಮಾನ್,ಶಾರುಖ್ ಬಳಿಕ ಖ್ಯಾತ ನಟಿಗೆ ಜೀವ ಬೆದರಿಕೆ.. 50 ಲಕ್ಷ ರೂ. ಡಿಮ್ಯಾಂಡ್
Oscars 2025: ಆಸ್ಕರ್‌ಗೆ ಎಂಟ್ರಿ ಆಗಿರುವ ʼಲಾಪತಾ ಲೇಡೀಸ್ʼ ಚಿತ್ರದ ಟೈಟಲ್ ಬದಲಾವಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.