ಡಿ.16ಕ್ಕೆ ಬರಲಿದೆ ದುಬಾರಿ ಸಿನಿಮಾ “ಅವತಾರ್-2′
ಜಗತ್ತಿನ ಸಿನಿಮಾ ಇತಿಹಾಸದಲ್ಲೇ ಹೆಚ್ಚು ವೆಚ್ಚದಲ್ಲಿ ನಿರ್ಮಾಣಗೊಂಡ ಸಿನಿಮಾ
Team Udayavani, Dec 14, 2022, 7:30 AM IST
ನವದೆಹಲಿ: ಜಗತ್ತಿನಲ್ಲಿ ಅತ್ಯಂತ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾಗಿರುವ ಸಿನಿಮಾ ಯಾವುದು? ಬಾಹುಬಲಿ, ಆರ್‌ಆರ್‌ಆರ್? ಅಲ್ಲವೇ ಅಲ್ಲ. ಡಿ.16ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿರುವ “ಅವತಾರ್- ದ ವೇ ಆಫ್ ವಾಟರ್’. ಅದರ ನಿರ್ಮಾಣ ವೆಚ್ಚವೇ 3,351 ಕೋಟಿ ರೂ. ಆರಂಭದಲ್ಲಿ ಅದರ ವೆಚ್ಚ 2,555 ಕೋಟಿ ರೂ. ಎಂದು ಅಂದಾಜು ಮಾಡಲಾಗಿತ್ತು.
ಹೀಗಾಗಿ, ಹಾಲಿವುಡ್‌ನ ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಅವರು ನಿರ್ದೇಶಿಸಿದ ಸಿನಿಮಾವೇ ಜಗತ್ತಿನಲ್ಲಿ ಇದುವರೆಗೆ ನಿರ್ಮಾಣಗೊಂಡ ಸಿನಿಮಾ ಎಂದು ಹಲವು ರೀತಿಯ ವಿಶ್ಲೇಷಣೆಗಳು ನಡೆದಿವೆ.
ಇನ್ನು ದೇಶಕ್ಕೆ ಸಂಬಂಧಿಸಿದಂತೆ ಹೇಳುವುದಿದ್ದರೆ, 3 ಸಾವಿರ ಸಿನಿಮಾ ಪರದೆಗಳಲ್ಲಿ “ಅವತಾರ್-2′ ನೋಡಲು ಲಭ್ಯವಾಗಲಿದೆ. ಜತೆಗೆ ಬಾಕ್ಸ್ ಆಫೀಸ್ ಗಳಿಕೆಯನ್ನೂ ಮೀರಿಸಲಿದೆ ಎಂಬ ಲೆಕ್ಕಾಚಾರ ನಡೆದಿದೆ. ಇತ್ತೀಚೆಗೆ ತೆರೆಕಂಡ “ಅವೇಂಜರ್ಸ್: ಎಂಡ್‌ಗೆಮ್’ ಎಂಬ ಸಿನಿಮಾ ಬಿಡುಗಡೆಯಾಗಿದ್ದ ಮೊದಲ ದಿನ ದೇಶದ ಮಾರುಕಟ್ಟೆಯಲ್ಲಿ 53 ಕೋಟಿ ರೂ. ಗಳಿಸಿತ್ತು. ಒಟ್ಟಾರೆಯಾಗಿ ಅದು 370 ಕೋಟಿ ರೂ.ಗಳನ್ನು ಗಲ್ಲಾ ಪೆಟ್ಟಿಗೆಯಲ್ಲಿ ಬಾಚಿಕೊಂಡಿತ್ತು.
ಯಶಸ್ವಿಯಾಗಬಹುದೇ?
ಅದ್ಧೂರಿಯಲ್ಲಿ ಅದ್ಧೂರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಿನಿಮಾ ಜಗತ್ತಿನ ಮಾರುಕಟ್ಟೆಯಿಂದ ಲಾಭ ಪಡೆದುಕೊಳ್ಳಬಹುದೇ ಎಂಬ ಚರ್ಚೆಗಳೂ ಶುರುವಾಗಿವೆ. 2019ರಲ್ಲಿ ತೆರೆ ಕಂಡಿದ್ದ ಸಿನಿಮಾದ ಮೊದಲ ಭಾಗ 18,957 ಕೋಟಿ ರೂ. ಬಾಚಿಕೊಂಡಿತ್ತು.
ಹಂಚಿಕೆ ಯಾರು?
ದೇಶದಲ್ಲಿ ಟ್ವೆಂಟಿಯತ್ ಸೆಂಚುರಿ ಸ್ಟುಡಿಯೋಸ್ ಇಂಡಿಯಾ ಸಿನಿಮಾದ ಹಂಚಿಕೆ ಹೊಣೆ ಹೊತ್ತುಕೊಂಡಿದೆ. ದೇಶದಲ್ಲಿ ಈಗಾಗಲೇ 2.4 ಲಕ್ಷ ಟಿಕೆಟ್ ಮಾರಾಟ ಮಾಡಿ 8 ಕೋಟಿ ರೂ. ಮೊತ್ತ ಸಂಗ್ರಹಿಸಲಾಗಿದೆ.
ಕನ್ನಡದಲ್ಲೂ ನೋಡಬಹುದು:
ಅಂದ ಹಾಗೆ ಹೊಸ ಸಿನಿಮಾವನ್ನು ಕನ್ನಡದಲ್ಲೂ ನೋಡಲು ಅವಕಾಶ ಇದೆ. ಸಿನಿಮಾವನ್ನೂ ಕನ್ನಡದಲ್ಲೂ ಬಿಡುಗಡೆ ಮಾಡಬೇಕು ಎಂದು ಜಾಲತಾಣಗಳಲ್ಲಿ ಒತ್ತಾಯ ನಡೆದಿತ್ತು. ಅದಕ್ಕೆ ಮನ್ನಣೆ ನೀಡಿರುವ ಟ್ವೆಂಟಿಯತ್ ಸೆಂಚುರಿ ಸ್ಟುಡಿಯೋಸ್ ಇಂಡಿಯಾ ಸಿನಿಮಾವನ್ನು ಕನ್ನಡದಲ್ಲಿ ಡಬ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Singham Again vs Bhool Bhulaiyaa 3: ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ ಗೆದ್ದವರು ಯಾರು?
Movies: ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಿ ಕೈ ಸುಟ್ಟುಕೊಂಡ ಸ್ಟಾರ್ ಸಿನಿಮಾಗಳು
Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ
Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್ ಅರ್ಜುನ್ʼ
Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್ ಹಿಟ್ ʼಮಿರ್ಜಾಪುರ್ʼ ಸರಣಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.