![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Dec 17, 2022, 12:39 PM IST
ನವದೆಹಲಿ: ಜೇಮ್ಸ್ ಕ್ಯಾಮೆರಾನ್ ಅವರ ʼಅವತಾರ್ ದಿ ವೇ ವಾಟರ್ʼ ಸಿನಿಮಾ ವಿಶ್ವದಾದ್ಯಂತ 160 ಭಾಷೆಗಳಲ್ಲಿ 52 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್ ಗಳಲ್ಲಿ ತೆರೆಕಂಡಿದೆ. ಮೊದಲ ದಿನವೇ ಹತ್ತಾರು ಸಿನಿಮಾಗಳ ದಾಖಲೆಯನ್ನು ಉಡೀಸ್ ಮಾಡಿರುವ ಚಿತ್ರ ಭಾರತದಲ್ಲಿಯೂ ಭರ್ಜರಿ ಹಣ ಗಳಿಸಿದೆ.
ಒಟ್ಟು 6 ಭಾಗಗಳಾಗಿ ಅವತಾರ್ ರಿಲೀಸ್ ಆಗಲಿದೆ. ದೊಡ್ಡ ಬಜೆಟ್ ನಲ್ಲಿ ಮೂಡಿ ಬಂದಿರುವ ಎರಡನೇ ಭಾಗ ರಿಲೀಸ್ ಗೂ ಮುನ್ನವೇ ಟಿಕೆಟ್ ಬುಕಿಂಗ್ ನಲ್ಲೇ ದಾಖಲೆ ಬರೆದಿತ್ತು. ಸಿನಿಮಾ ಬಿಡುಗಡೆಯಾಗಿ ಒಂದು ದಿನ ಕಳೆದಿದೆ. ವಿಶ್ವದಾದ್ಯಂತ 2.9 ಮಿಲಿಯನ್ ($2.9 billion) ಕಲೆಕ್ಷನ್ ಮಾಡಿದೆ.
ಭಾರತದಲ್ಲಿಯೂ ʼಅವತಾರ್ -2ʼ ಸಿನಿಮಾಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಭಾರತದಲ್ಲಿ ಹಾಲಿವುಡ್ ಸಿನಿಮಾವೊಂದು ಅತೀ ಹೆಚ್ಚು ಕಲೆಕ್ಷನ್ ಮಾಡಿದರಲ್ಲಿ 2ನೇ ಸ್ಥಾನವನ್ನು ಈಗ ಅವತಾರ್ -2 ಪಡೆದುಕೊಂಡಿದೆ. ಮೊದಲ ದಿನೇ ಭಾರತದಲ್ಲಿ 38- 40 ಕೋಟಿ ರೂ.ಗಳನ್ನು ಗಳಿಸಿದೆ ಎಂದು ವರದಿಯಾಗಿದೆ.
ದಕ್ಷಿಣದ ಮಾರುಕಟ್ಟೆಯಲ್ಲೇ ಭಾರತದಲ್ಲಿ ಅವತಾರ್ -2 ಹೆಚ್ಚು ಕಲೆಕ್ಷನ್ ಮಾಡಿದೆ. ಆಂಧ್ರ ಪ್ರದೇಶ್, ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿ ಒಟ್ಟು 22 ಕೋಟಿ ರೂ.ಕಲೆಕ್ಷನ್ ಮಾಡಿದೆ. ಈ ಮೂಲಕ “ಸ್ಪೈಡರ್‌ಮ್ಯಾನ್: ನೋ ವೇ ಹೋಮ್”, “ಡಾಕ್ಟರ್ ಸ್ಟ್ರೇಂಜ್: ಮಲ್ಟಿವರ್ಸ್ ಆಫ್ ಮ್ಯಾಡ್ನೆಸ್”,” ಅವೆಂಜರ್ಸ್: ಇನ್ಫಿನಿಟಿ ವಾರ್” ಸಿನಿಮಾದ ದಾಖಲೆಯನ್ನು ಮೀರಿಸಿದೆ.
ಇಷ್ಟೆಲ್ಲಾ ದಾಖಲೆ ಬರೆದರೂ ಜೇಮ್ಸ್ ಕ್ಯಾಮೆರಾನ್ ಅವರ ʼಅವತಾರ್-2” 2019 ರಲ್ಲಿ ತೆರೆಕಂಡಿದ್ದ ʼಅವೆಂಜರ್ಸ್: ಎಂಡ್‌ಗೇಮ್ʼ ಸಿನಿಮಾ ಭಾರತದಲ್ಲಿ ಮಾಡಿದ ದಾಖಲೆಯನ್ನು ಮೀರಿಸಿಲ್ಲ. ಅವೆಂಜರ್ಸ್: ಎಂಡ್‌ಗೇಮ್ ಮೊದಲ ದಿನವೇ ಭಾರತದಲ್ಲಿ 53.10 ಕೋಟಿ ರೂ.ವನ್ನು ಕಲೆಕ್ಷನ್ ಮಾಡಿತ್ತು.
ಇಂಗ್ಲೀಷ್, ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ಭಾರತದಲ್ಲಿ ಸಿನಿಮಾ ತೆರೆಕಂಡಿದೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.