Bollywood: ಪಾಕ್ ನಟ ಫವಾದ್ ಜತೆ ರಿಧಿ ರೊಮ್ಯಾನ್ಸ್? 8 ವರ್ಷದ ಬಳಿಕ ಬಾಲಿವುಡ್ ಕಂಬ್ಯಾಕ್
Team Udayavani, Sep 22, 2024, 6:35 PM IST
ಮುಂಬಯಿ: ಈ ಹಿಂದೆ ಭಾರತೀಯ ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿದ್ದ ಪಾಕಿಸ್ತಾನದ ನಟ ಫವಾದ್ ಖಾನ್ (Fawad Khan) ಮತ್ತೆ ಬಾಲಿವುಡ್ (Bollywood) ಎಂಟ್ರಿಗೆ ಸಜ್ಜಾಗಿದ್ದಾರೆ.
ಇತ್ತೀಚೆಗಷ್ಟೇ ನಟ ಫವಾದ್ ಖಾನ್ 8 ವರ್ಷದ ಬಳಿಕ ಹಿಂದಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ವಾಣಿ ಕಪೂರ್ ಅವರೊಂದಿಗಿನ ಸಿನಿಮಾದಲ್ಲಿ ಫವಾದ್ ಖಾನ್ ಬಾಲಿವುಡ್ ಗೆ ಕಂಬ್ಯಾಕ್ ಮಾಡಲಿದ್ದಾರೆ ಎಂದು ವರದಿಯಾಗಿತ್ತು.
ಆದರೆ ಇದೀಗ ಅವರ ಕಂಬ್ಯಾಕ್ ಬಾಲಿವುಡ್ ಸಿನಿಮಾದಲ್ಲಿ ನಾಯಕಿಯಾಗಿ ರಿಧಿ ಡೋಗ್ರಾ(Ridhi Dogra) ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ರೊಮ್ಯಾಂಟಿಕ್ ಕಥಾಹಂದರದ ಈ ಸಿನಿಮಾದ ಮಾತುಕತೆ ಆರಂಭಿಕ ಹಂತದಲ್ಲಿ ಸಾಗುತ್ತಿದೆ. ನಾಯಕ – ನಾಯಕಿ ಬಗ್ಗೆ ಮಾತ್ರ ಮಾತುಕತೆ ನಡೆದಿದ್ದು, ಇತರೆ ಯಾವುದೇ ಪಾತ್ರದ ಬಗ್ಗೆ ಸದ್ಯಕ್ಕೆ ಯಾವುದೇ ಚರ್ಚೆ ನಡೆದಿಲ್ಲ. ಈ ವರ್ಷದ ಅಂತ್ಯದ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ. ಮುಂದಿನ ವರ್ಷದ ಕೊನೆಯಲ್ಲಿ ಅಥವಾ 2026 ರ ಆರಂಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ತಯಾರಕರು ಯೋಜಿಸಿದ್ದಾರೆ. ನಿರ್ದೇಶಕರು ಯಾರು ಎನ್ನುವುದನ್ನು ಕೂಡ ಸಸ್ಪೆನ್ಸ್ ಆಗಿ ಇಡಲಾಗಿದೆ ಎಂದು ವರದಿ ತಿಳಿಸಿದೆ.
ಈ ಸಿನಿಮಾದ ಚಿತ್ರೀಕರಣ ನ್ಯೂಯಾರ್ಕ್, ಲಂಡನ್‌ನಲ್ಲಿ ನಡೆಯಲಿದೆ ಭಾರತದಲ್ಲಿ ಯಾವುದೇ ಸೀನ್ ಗಳು ಶೂಟ್ ಆಗುವುದಿಲ್ಲ ಎಂದು ಮೂಲಗಳು ಹೇಳಿರುವುದಾಗಿ ವರದಿ ತಿಳಿಸಿದೆ..
ಪಾಕಿಸ್ತಾನದ ಖ್ಯಾತ ಕಲಾವಿದರಲ್ಲಿ ಒಬ್ಬರಾಗಿರುವ ಫವಾದ್ ಖಾನ್ ಈ ಹಿಂದೆ ಬಾಲಿವುಡ್ ನ ‘ಏ ದಿಲ್ ಹೈ ಮುಷ್ಕಿಲ್’ ಮತ್ತು ‘ಕಪೂರ್ ಅಂಡ್ ಸನ್ಸ್ʼ ಸಿನಿಮಾದಲ್ಲಿ ನಟಿಸಿದ್ದರು.
ಇನ್ನು ಫವಾದ್ ಖಾನ್ ನಟಿಸಿರುವ ʼದಿ ಲೆಜೆಂಡ್ ಆಫ್ ಮೌಲಾ ಜಾಟ್ʼ ಭಾರತದಲ್ಲಿ ರಿಲೀಸ್ ಆಗಲಿದೆ. ಆದರೆ ಮಹಾರಾಷ್ಟ್ರ ಸೇರಿ ಕೆಲ ಕಡೆ ಸಿನಿಮಾ ಭಾರತದಲ್ಲಿ ರಿಲೀಸ್ ಮಾಡುವುದಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.
2016ರಲ್ಲಿ ಉರಿ ದಾಳಿಯ ನಂತರ ನಟರು, ನಟಿಯರು, ಗಾಯಕರು, ಸಂಗೀತಗಾರರು ಸೇರಿದಂತೆ ಪಾಕಿಸ್ತಾನಿ ಕಲಾವಿದರನ್ನು ಭಾರತದಲ್ಲಿ ನಿಷೇಧಿಸಲಾಗಿತ್ತು. ಆ ಬಳಿಕ 2023ರಲ್ಲಿ ಈ ನಿಷೇಧವನ್ನು ಬಾಂಬೆ ಹೈಕೋರ್ಟ್ ತೆರವುಗೊಳಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್ಗೆ ಮತ್ತೊಂದು ಬೆದರಿಕೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.