B-town: ಗರ್ಭಿಣಿಯಾದ ಬಳಿಕ ಡೇಟ್ ನೈಟ್; ಮೊದಲ ಬಾರಿಗೆ ಪ್ರಿಯಕರನ ಫೋಟೋ ಹಂಚಿಕೊಂಡ ಇಲಿಯಾನಾ
Team Udayavani, Jul 17, 2023, 12:54 PM IST
ಮುಂಬಯಿ: ಬಾಲಿವುಡ್ ಬ್ಯೂಟಿ ಗರ್ಭಿಣಿಯಾಗಿರುವುದು ಗೊತ್ತೇ ಇದೆ. ಮದುವೆಗೂ ಮುನ್ನ ಗರ್ಭಿಣಿಯಾಗಿರುವ ಅವರು ತನ್ನ ಪ್ರಿಯಕರನ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಇದೀಗ ನಟಿ ಮೊದಲ ಬಾರಿ ತನ್ನ ಪ್ರಿಯಕರನ ಫೋಟೋವನ್ನು ಹಂಚಿಕೊಂಡಿದ್ದಾರೆ.
ನಟಿ ಇಲಿಯಾನಾ ಡಿಕ್ರೂಜ್ ಇದೇ ವರ್ಷದ ಏ.18 ರಂದು ಬೆಳ್ಳಂಬೆಳಗ್ಗೆ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿತ್ತು. ಮದುವೆಗೂ ಮುನ್ನ ನಟಿ ಗರ್ಭಿಣಿಯಾಗಿರುವ ಬಗ್ಗೆ ಪೋಸ್ಟ್ ಹಾಕಿ ಎಲ್ಲರಿಗೂ ಅಚ್ಚರಿಯಾಗಿಸಿದ್ದರು.
ʼರುಸ್ತುಂʼ ಬೆಡಗಿ ಇಲಿಯಾನಾ ಮಗುವಿಗೆ ಹಾಕುವ ಬಟ್ಟೆಯೊಂದನ್ನು ಹಾಕಿ ಅದರಲ್ಲಿ ʼಅಡ್ವೆಂಟರ್ ಬೀಗೆನ್ಸ್ʼ ಎಂದು ಬರೆದುಕೊಂಡಿದ್ದು, ಇನ್ನೊಂದು ಫೋಟೋದಲ್ಲಿ ಕುತ್ತಿಗೆಗೆ ಹಾಕಿರುವ ಪೆಂಡಿಂಟ್ ವೊಂದರಲ್ಲಿ ʼಅಮ್ಮಾʼ (Mama) ಎಂದು ಬರೆದಿದೆ. ಪೋಸ್ಟ್ ಕೆಳಗೆ ಮಗುವನ್ನು ನೋಡುವ ಸಂತಸದಲ್ಲಿದ್ದೇನೆ ಎಂದು ಬರೆದಿಕೊಂಡಿದ್ದರು.
ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಅವರ ಪ್ರಿಯಕರ ಯಾರು ಎನ್ನುವುದನ್ನು ನಟಿ ರಿವೀಲ್ ಮಾಡಿರಲಿಲ್ಲ. ಇದೀಗ ನಟಿ ಪ್ರಿಯಕರನ ಜೊತೆ ಡೇಟ್ ನೈಟ್ ನಲ್ಲಿ ಭಾಗಿಯಾಗಿದ್ದು, ಇದರ ಫೋಟೋವನ್ನು ಇನ್ ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಪ್ರಿಯಕರನ ಜೊತೆಗಿನ ಫೋಟೋವನ್ನು ಅವರು ಶೇರ್ ಮಾಡಿದ್ದಾರೆ.
ಈ ಹಿಂದೆ ಇಲಿಯಾನಾ ಆಸ್ಟ್ರೇಲಿಯದ ಛಾಯಾಗ್ರಾಹಕ, ಆಂಡ್ರ್ಯೂ ನೀಬೋನ್ ಅವರೊಂದಿಗೆ ಡೇಟಿಂಗ್ ನಲ್ಲಿದ್ದರು. 2019 ರಲ್ಲಿ ಇಬ್ಬರು ದೂರವಾದರು.
ಇತ್ತೀಚೆಗಿನ ವರದಿಯ ಪ್ರಕಾರ ನಟಿ ಕತ್ರಿನಾ ಕೈಫ್ ಅವರ ಸಹೋದರಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಗಾಸಿಪ್ ಹಬ್ಬಿತ್ತು. ಇವರಿಬ್ಬರ ಸುತ್ತಾಟ ಬಿಟೌನ್ ನಲ್ಲಿ ಸದ್ದು ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.