Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Team Udayavani, Nov 18, 2024, 11:15 AM IST
ಮುಂಬಯಿ/ಬೆಂಗಳೂರು: ಬಾಲಿವುಡ್‌ನಲ್ಲಿ ಸೂಪರ್ ಹಿಟ್ ಆಗಿದ್ದ ʼಬಾಘಿʼ ಸರಣಿಯ 4ನೇ ಭಾಗ ಅನೌನ್ಸ್ ಆಗಿದೆ. ಈ ಸಿನಿಮಾಕ್ಕೆ ಕನ್ನಡದ ಖ್ಯಾತ ನಿರ್ದೇಶಕ ಎ.ಹರ್ಷ (A. Harsha) ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಬಾಲಿವುಡ್‌ನಲ್ಲಿ ʼಬಾಘಿʼ ಫ್ರ್ಯಾಂಚೈಸ್ ನಲ್ಲಿ ಮೊದಲ ಹಾಗೂ ಎರಡನೇ ಭಾಗ ಹಿಟ್ ಆಗಿತ್ತು. ಆದರೆ ಮೂರನೇ ಭಾಗಕ್ಕೆ ಸಾಧಾರಣ ಪ್ರತಿಕ್ರಿಯೆ ಕೇಳಿ ಬಂದಿತ್ತು. ಆ ಬಳಿಕ ಬಂದ ಟೈಗರ್ ಶ್ರಾಫ್ ಅವರ ʼಗಣಪತ್ʼ ಹಾಗೂ ʼಬಡೇ ಮಿಯಾನ್ ಚೋಟೆ ಮಿಯಾನ್ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋತಿತು. ಇತ್ತೀಚೆಗೆ ಟೈಗರ್ ಶ್ರಾಫ್ (Tiger Shroff) ʼಸಿಂಗಂ ಎಗೇನ್ʼನಲ್ಲಿ ಕಾಣಿಸಿಕೊಂಡಿದ್ದರು.
ಇದೀಗ ರಕ್ತಸಿಕ್ತ ಅವತಾರದ ಮೂಲಕ ಟೈಗರ್ ಶ್ರಾಫ್ ʼಬಾಘಿʼ ಕ್ಯಾರೆಕ್ಟರ್‌ಗೆ ಮತ್ತೆ ಮರಳಿದ್ದಾರೆ. ಈ ಬಾರಿ ಕಂಪ್ಲೀಟ್ ಡಿಫ್ರೆಂಟ್ & ಮಾಸ್ ಶೇಡ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಟೈಗರ್ ಶ್ರಾಫ್ ವಾಶ್ ರೂಮ್ ನಲ್ಲಿ ಮಚ್ಚು ಹಿಡಿದು ರಕ್ತಸಿಕ್ತವಾಗಿ ಕೂತಿದ್ದಾರೆ. ಈ ಬಾರಿ ಅವನು ಮೊದಲಿನಂತಿಲ್ಲ.. ಎನ್ನುವ ಟ್ಯಾಗ್ ಲೈನ್ ನೀಡಲಾಗಿದೆ.
ಕನ್ನಡಕ್ಕೆ ನೃತ್ಯ ಸಂಯೋಜಕರಾಗಿ ಎಂಟ್ರಿ ಕೊಟ್ಟು ಆ ಬಳಿಕ ಶಿವರಾಜ್ ಕುಮಾರ್ ಜತೆ ʼವಜ್ರಕಾಯʼ, ʼಭಜರಂಗಿʼ, ʼಭಜರಂಗಿ-2ʼ, ʼವೇದʼ ಅಂತಹ ಸಿನಿಮಾಗಳ ಮೂಲಕ ನಿರ್ದೇಶಕರಾಗಿ ಮಿಂಚಿದ ಹರ್ಷ ಇದೀಗ ಬಾಲಿವುಡ್‌ಗೆ ಎಂಟ್ರಿ ಆಗಿದ್ದಾರೆ.
ಸಾಜಿದ್ ನಾಡಿಯಾದ್ವಾಲಾ ನಿರ್ಮಾಣದ ʼಬಾಘಿ -4ʼ (Baaghi 4) ಸಿನಿಮಾಕ್ಕೆ ಕನ್ನಡದ ಹರ್ಷ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಆ ಮೂಲಕ ಬಿಟೌನ್‌ನಲ್ಲಿ ಹರ್ಷ ಕಮಾಲ್ ಮಾಡಲು ಮುಂದಾಗಿದ್ದಾರೆ.
View this post on Instagram
ಟೈಗರ್ ಶ್ರಾಫ್ ಕಂಬ್ಯಾಕ್ ಮಾಡುವ ಸಿನಿಮಾವೆಂದೇ ʼಬಾಘಿ-4ʼ ಸಿನಿಮಾವನ್ನು ವರ್ಣಿಸಲಾಗುತ್ತಿದೆ. 2025ರ ಸೆ.5ಕ್ಕೆ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.