10ದಿನದಲ್ಲಿ ಬರೋಬ್ಬರಿ 1,000ಕೋಟಿ; ಬಾಹುಬಲಿಯಿಂದ ಬಾಕ್ಸಾಫೀಸ್ ಲೂಟಿ
Team Udayavani, May 8, 2017, 2:47 AM IST
ಮುಂಬಯಿ: ಬಿಡುಗಡೆಯಾದ ಹತ್ತೇ ದಿನದಲ್ಲಿ ಬಾಹುಬಲಿ-2 ಚಿತ್ರವು ದೇಶದ ಸಿನಿಮಾ ಇತಿಹಾಸದಲ್ಲೇ ಹೊಸ ಮೈಲುಗಲ್ಲು ಸ್ಥಾಪಿಸಿದೆ. ಇಷ್ಟು ಸಣ್ಣ ಅವಧಿಯಲ್ಲಿ ಬರೋಬ್ಬರಿ 1,000 ಕೋಟಿ ರೂ. ಗಳಿಸಿರುವ ಮೊದಲ ಭಾರತೀಯ ಸಿನಿಮಾ ಎಂಬ ಖ್ಯಾತಿಗೆ ‘ಬಾಹುಬಲಿ 2: ದಿ ಕನ್‌ಕ್ಲೂಷನ್’ ಪಾತ್ರವಾಗಿದೆ. ಚಿತ್ರದ ಹಿಂದಿ ಆವೃತ್ತಿ ಹಂಚಿಕೆಯ ಹೊಣೆ ಹೊತ್ತಿರುವ ಧರ್ಮ ಪ್ರೊಡಕ್ಷನ್ಸ್ ಮಾಲೀಕ, ನಿರ್ಮಾಪಕ ಕರಣ್ ಜೋಹರ್ ಅವರು ಈ ವಿಚಾರವನ್ನು ಜಗಜ್ಜಾಹೀರುಗೊಳಿಸಿದ್ದಾರೆ. ಭಾನುವಾರ ಈ ಕುರಿತು ಟ್ವೀಟ್ ಮಾಡಿರುವ ಅವರು, ‘ವಿಶ್ವಾದ್ಯಂತ ಒಂದು ಸಾವಿರ ಕೋಟಿ ರೂ. ಸಂಗ್ರಹಿಸಿರುವ ಭಾರತದ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಬಾಹುಬಲಿ-2ಗೆ ದೊರೆತಿದೆ. ಭಾರತೀಯ ಸಿನಿಮಾದ ಅತಿದೊಡ್ಡ ಬ್ಲಾಕ್‌ಬಸ್ಟರ್ ಇದೀಗ ಅತಿದೊಡ್ಡ ಮೈಲುಗಲ್ಲು ನಿರ್ಮಿಸಿದೆ,’ ಎಂದು ಹೇಳಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಭಾವಪರವಶರಾಗಿರುವ ನಟ ಪ್ರಭಾಸ್, ಫೇಸ್‌ಬುಕ್‌ನಲ್ಲಿ ನಿರ್ದೇಶಕ ರಾಜಮೌಳಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಸದ್ಯ ಲಂಡನ್ ಪ್ರವಾಸದಲ್ಲಿರುವ ಪ್ರಭಾಸ್, ‘ನೀವೆಲ್ಲರೂ ನೀಡಿದ ಪ್ರೀತಿಗೆ ನಾನು ಆಭಾರಿ. ನನ್ನ ಎಲ್ಲ ಅಭಿಮಾನಿಗಳಿಗೂ ಪ್ರೀತಿಯ ಅಪ್ಪುಗೆ ನೀಡಬಯಸುತ್ತೇನೆ. ಇನ್ನು ಜೀವನದಲ್ಲೇ ಒಂದೇ ಒಂದು ಬಾರಿ ಸಿಗುವಂಥ ಪಾತ್ರವನ್ನು ನನಗೆ ನೀಡಿದ್ದಕ್ಕೆ ಮತ್ತು ನನ್ನಲ್ಲಿ ನಂಬಿಕೆಯಿಟ್ಟಿರುವ ರಾಜಮೌಳಿ ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದ ಹೇಳುತ್ತೇನೆ,’ ಎಂದು ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.