ಬಾಹುಬಲಿ 2 : ಅದ್ಭುತ ಮಾಸ್ಟರ್‌ಪೀಸ್; ರಾಜಮೌಳಿಗೆ ರಜನೀ ಸೆಲ್ಯೂಟ್
Team Udayavani, May 1, 2017, 11:52 AM IST
ಹೊಸದಿಲ್ಲಿ : ಬಿಡುಗಡೆಗೊಂಡ ಮೊದಲ ದಿನವೇ ನೂರು ಕೋಟಿ ಮೀರಿದ ಬಾಕ್ಸ್ ಆಫೀಸ್ ಗಳಿಕೆಯನ್ನು ದಾಖಲಿಸಿದ ಭಾರತೀಯ ಚಿತ್ರರಂಗದ ಇತಿಹಾಸದ ಮೊತ್ತ ಮೊದಲ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಸ್ ಎಸ್ ರಾಜಮೌಳಿ ಅವರ ಬಾಹುಬಲಿ -2 ಚಿತ್ರವನ್ನು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನೀಕಾಂತ್ ಮನಸಾರೆ ಮೆಚ್ಚಿಕೊಂಡಿದ್ದಾರೆ.
“ಬಾಹುಬಲಿ 2 – ಭಾರತೀಯ ಚಿತ್ರರಂಗದ ಹೆಮ್ಮೆ – ದೇವರ ಸ್ವಂತ ಮಗುವಾಗಿರುವ ರಾಜಮೌಳಿಗೆ ಹಾಗೂ ಆತನ ತಂಡಕ್ಕೆ ನನ್ನ ಪ್ರಣಾಮಗಳು; ಮಾಸ್ಟರ್‌ಪೀಸ್’ ಎಂದು ರಜನೀಕಾಂತ್ ಟ್ವೀಟ್ ಮಾಡಿದ್ದಾರೆ.
ರಜನೀಕಾಂತ್ ಅವರ ಬಹುಪ್ರಶಂಸೆಯ ಈ ಟ್ವೀಟ್‌ಗೆ ತತ್‌ಕ್ಷಣವೇ ಪ್ರತಿಕ್ರಿಯಿಸಿ ಮರು ಟ್ವೀಟ್ ಮಾಡಿರುವ ರಾಜಮೌಳಿ ಅವರು, “ತಲೈವಾ, ನಿಜಕ್ಕೂ ದೇವರೇ ನಮ್ಮನ್ನು ಆಶೀರ್ವದಿಸಿರುವಂತಿದೆ ನಿಮ್ಮ ಹಾರೈಕೆಗಳು; ಇದರಿಂದಾಗಿ ನಮ್ಮ ತಂಡದ ಸಂತಸಕ್ಕೆ ಪಾರವೇ ಇಲ್ಲವಾಗಿದೆ; ಇದಕ್ಕಿಂತ ದೊಡ್ಡ ಪ್ರಶಂಸೆ ಬೇರೊಂದಿರಲಾರದು’ ಎಂದು ಹೇಳಿದ್ದಾರೆ.
ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾತಿ ಮತ್ತು ತಮನ್ನಾ ನಟನೆಯ ಬಾಹುಬಲಿ 2 ಚಿತ್ರವು ಭಾರತದಾದ್ಯಂತದ 6,500 ಬೆಳ್ಳಿ ಪರದೆಗಳಲ್ಲಿ ಹಾಗೂ ವಿಶ್ವಾದ್ಯಂತದ 9,000 ಪರದೆಗಳಲ್ಲಿ ಪ್ರದರ್ಶನಕ್ಕೆ ಬಿಡುಗಡೆಗೊಂಡಿದೆ. ಇದು ಈ ವರೆಗಿನ ಭಾರತೀಯ ಚಿತ್ರವೊಂದರ ಈ ವರೆಗಿನ ಗರಿಷ್ಠ ಸಾಧನೆಯಾಗಿದೆ. ಬಾಹುಬಲಿ -2: ದಿ ಕನ್‌ಕ್ಲೂಷನ್ ಚಿತ್ರವು ಭಾರತ ಸಹಿತ ವಿಶ್ವಾದ್ಯಂತದ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳ ವಿಕ್ರಮವನ್ನೇ ಮಾಡಲಿದೆ ಎಂದು ಬಾಕ್ಸ್ ಆಫೀಸ್ ಇಂಡಿಯಾ ವರದಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.