ಬಾಹುಬಲಿ-2 ಹಿಂದಿ ಆವೃತ್ತಿ ಮೊದಲ ದಿನವೇ ನೂರು ಕೋಟಿ ಗಳಿಕೆ ?
Team Udayavani, Apr 28, 2017, 3:14 PM IST
ಮುಂಬಯಿ : ಎಸ್ ಎಸ್ ರಾಜಮೌಳಿ ಅವರ ಬಹು ನಿರೀಕ್ಷೆಯ ರೋಮಾಂಚಕ ಬಾಹುಬಲಿ 2 ಚಿತ್ರವು ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಏಕ ಕಾಲಕ್ಕೆ ತೆರೆ ಕಂಡಿದ್ದು ಕೇವಲ ಹಿಂದಿ ಆವೃತ್ತಿಯೇ ಬಿಡುಗಡೆಗೊಂಡ ಮೊದಲ ದಿನ 100 ಕೋಟಿ ರೂ. ಬಾಚಿಕೊಳ್ಳುವ ಅತ್ಯಪೂರ್ವ ಸಾಧನೆಯನ್ನು ಮಾಡೀತೇ ಎಂಬುದನ್ನು ಇದೀಗ ಕಾದು ನೋಡಲಾಗುತ್ತಿದೆ.
ದೇಶಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಬಾಹುಬಲಿ 2 ಚಿತ್ರದ ಬಾಕ್ಸ್ ಆಫೀಸ್ ಸಂಪಾದನೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆಯನ್ನು ಬರೆಯಬಹುದು ಎಂದು ವಿಶ್ಲೇಷಕರು ಈಗಲೇ ಅಂದಾಜಿಸಿದ್ದಾರೆ.
ಅತ್ಯಂತ ರಹಸ್ಯದ “ಕಟ್ಟಪ್ಪಾ ನೇ ಬಾಹುಬಲಿಕೋ ಕ್ಯೋ ಮಾರಾ?’ ಎಂಬ ಪ್ರಶ್ನೆಗೆ ಉತ್ತರವನ್ನು ಪಡೆಯಲು ಕಾತರದಿಂದಿರುವ ಬಾಹುಬಲಿ ಚಿತ್ರ ಪ್ರೇಮಿಗಳಿಗೆ ಈಗ ಉತ್ತರ ಸಿಕ್ಕಿದೆಯಾದರೂ ಅದು ಹುಟ್ಟಿಸಿರುವ ತಳಮಳ, ನಿಗೂಢತೆ, ರೋಚಕತೆ ಮತ್ತು ರೋಮಾಂಚಕತೆ ಅನನ್ಯವಾಗಿದೆ ಎನ್ನಲೇಬೇಕು.
ಬಾಹುಬಲಿ 2ರಲ್ಲಿ ಪ್ರಭಾಸ್ ಮತ್ತು ರಾಣಾ ದಗ್ಗುಬತಿ ಅವರ ಅಭಿನಯವು ಅತ್ಯಮೋಘವಾಗಿ ಮೂಡಿ ಬಂದಿದೆ ಎಂದು ವೀಕ್ಷಕರು ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್ ಮೂಲದವರು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.