Baby: ಪ್ರೇಕ್ಷಕರ ಮನಗೆದ್ದ ʼಬೇಬಿʼ ಸಿನಿಮಾದ ಸೀಕ್ವೆಲ್ ಗೆ ತೆರೆಮರೆಯಲ್ಲಿ ಸಿದ್ಧತೆ?
Team Udayavani, Sep 3, 2023, 1:38 PM IST
ಹೈದರಾಬಾದ್: ಟಾಲಿವುಡ್ ಸಿನಿಮಾರಂಗದಲ್ಲಿ ಈ ವರ್ಷ ದೊಡ್ಡ ಹಿಟ್ ಆದ ಸಿನಿಮಾಗಳಲ್ಲಿ ʼಬೇಬಿʼ ಸಿನಿಮಾ ಕೂಡ ಒಂದು. ಕಡಿಮೆ ಬಜೆಟ್ ನಲ್ಲಿ ತಯಾರಾದ ಸಿನಿಮಾಕ್ಕೆ ದೊಡ್ಟಮಟ್ಟದ ರೆಸ್ಪಾನ್ಸ್ ವ್ಯಕ್ತವಾಗಿ, ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ.
ಸಾಯಿ ರಾಜೇಶ್ ನಿರ್ದೇಶನ ಮಾಡಿರುವ ʼಬೇಬಿʼ ಸಿನಿಮಾದಲ್ಲಿ ಆನಂದ್ ದೇವರಕೊಂಡ ಹಾಗೂ ವೈಷ್ಣವಿ ಚೈತನ್ಯ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಎಸ್‌ಕೆಎನ್ ಅವರ ಮಾಸ್ ಮೂವೀ ಮೇಕರ್ಸ್ ಬ್ಯಾನರ್‌ನಲ್ಲಿ 10 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಾಣವಾದ ʼಬೇಬಿʼ ಬಾಕ್ಸ್ ಆಫೀಸ್ ನಲ್ಲಿ 90 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಬ್ಲಾಕ್ ಬಸ್ಟರ್ ಆಗಿ ಹೊರಹೊಮ್ಮಿದೆ.
ಇನ್ನು ಇದೇ ಆ.25 ರಿಂದ ಸಿನಿಮಾ ʼ ಆಹಾʼದಲ್ಲಿ ಸ್ಟ್ರೀಮ್ ಆಗಿದೆ. ಆಹಾದಲ್ಲಿ ಬಿಡುಗಡೆಯಾದ ಕೇವಲ 32 ಗಂಟೆಗಳಲ್ಲಿ, ʼಬೇಬಿʼ 100 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದು ಟಾಲಿವುಡ್ ಸಿನಿಮಾ ʼಆಹಾʼದಲ್ಲಿ ಮಾಡಿದ ದಾಖಲೆ ಆಗಿದೆ.
ಇದನ್ನೂ ಓದಿ: Rishab Shetty: ʼಲಗಾನ್ʼ ನಿರ್ದೇಶಕರೊಂದಿಗೆ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸಿನಿಮಾ
ಸಿನಿಮಾದಲ್ಲಿನ ಪ್ರೇಮ ಕಥೆ ಪ್ರೇಕ್ಷಕರನ್ನು ಸೆಳೆದಿದೆ. ʼಬೇಬಿʼ ಹಿಟ್ ಆದ ಬೆನ್ನಲ್ಲೇ ಇದೀಗ ʼಬೇಬಿ-2ʼ ಸಿನಿಮಾ ಬರುವ ಸಾಧ್ಯತೆಯಿದೆ ಎನ್ನುವ ಮಾತುಗಳು ಟಾಲಿವುಡ್ ಸಿನಿಮಾರಂಗದಲ್ಲಿ ಗಾಸಿಪ್ ಆಗಿ ಹರಿದಾಡುತ್ತಿದೆ. ಸಿನಿಮಾದಲ್ಲಿನ ಕ್ಲೈಮ್ಯಾಕ್ಸ್ ಒಂದು ಹೊಸ ಆರಂಭಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ʼಬೇಬಿ-2ʼ ಸಿನಿಮಾ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಆದರೆ ಇದು ಅಧಿಕೃತವಾಗಿಲ್ಲ. ಟಾಲಿವುಡ್ ವಲಯದಲ್ಲಿ ಇಂಥದ್ದೊಂದು ಮಾತುಗಳು ಹರಿದಾಡುತ್ತಿದೆ. ʼಬೇಬಿʼಯಲ್ಲಿನ ಪಾತ್ರಗಳೇ ಪಾರ್ಟ್-2 ಕಥೆಯಲ್ಲಿ ಇರಲಿದೆಯೋ ಅಥವಾ ಹೊಸ ಪಾತ್ರಗಳಿರುತ್ತವೆಯೋ ಎನ್ನುವುದು ಕೂಡ ಅಧಿಕೃತವಾಗಿಲ್ಲ.
ಸದ್ಯ ಈ ಎಲ್ಲಾ ಗಾಸಿಪ್ ಗಳಿಗೆ ನಿರ್ದೇಶಕ ಸಾಯಿ ರಾಜೇಶ್ ಅವರೇ ಫುಲ್ ಸ್ಟಾಪ್ ಇಡಬೇಕಿದೆ. ಸದ್ಯ ನಿರ್ದೇಶಕರು ಎಲ್ಲಾ ಸೋಶಿಯಲ್ ಮೀಡಿಯಾದಿಂದ ದೂರವಿದ್ದು, ಮುಂದಿನ ದಿನಗಳಲ್ಲಿ ಅವರೇ ಈ ಬಗ್ಗೆ ಮಾಹಿತಿ ನೀಡಬಹುದು ಎನ್ನಲಾಗುತ್ತಿದೆ.
ಆನಂದ್ ದೇವರಕೊಂಡ, ವಿರಾಜ್ ಅಶ್ವಿನ್ ಮತ್ತು ವೈಷ್ಣವಿ ಚೈತನ್ಯ ಮುಂತಾದವರು ʼಬೇಬಿʼ ಸಿನಿಮಾದಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor ರೂಪಾಲಿ ಗಂಗೂಲಿಯಿಂದ ಮಲಮಗಳಿಗೆ ಕಿರುಕುಳ?
CELEBRITIES: ಶಾರುಖ್ ಟು ಸಲ್ಮಾನ್; ಧೂಮಪಾನದ ಚಟಕ್ಕೆ ಬಿದ್ದು ಹೊರಬಂದ ಸೆಲೆಬ್ರಿಟಿಗಳು
Bollywood: ವರುಣ್ ಧವನ್ ʼಬೇಬಿ ಜಾನ್ʼ ಟೀಸರ್ ನೋಡಿ ʼಜವಾನ್ʼ ಕಾಪಿ ಎಂದ ನೆಟ್ಟಿಗರು
Ranveer-Deepika ಮಗಳ ಹೆಸರು ‘ದುವಾ ಪಡುಕೋಣೆ ಸಿಂಗ್’
Aishwarya Rai Bachchan ಬರ್ತ್‌ಡೇಗೆ ಶುಭಕೋರದ ಪತಿ, ಮಾವ: ನೆಟ್ಟಿಗರು ಕೆಂಡ!
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.