BAFTA Film Awards: ಸೀರೆ ತೊಟ್ಟು ಮಿಂಚಿದ ದೀಪಿಕಾ ಪಡುಕೋಣೆ
Team Udayavani, Feb 20, 2024, 12:39 AM IST
ಲಂಡನ್: ಲಂಡನ್ನ ರಾಯಲ್ ಫೆಸ್ಟಿವಲ್ ಹಾಲ್ನಲ್ಲಿ ನಡೆದ ಪ್ರತಿಷ್ಠಿತ ಬ್ರಿಟಿಶ್ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಆರ್ಟ್ಸ್ (ಬಿಎಎಫ್ಟಿಎ) 2024 ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ನಿರೂಪಕಿಯಾಗಿ ಪಾಲ್ಗೊಂಡಿದ್ದರು.
ದೀಪಿಕಾ ಪಡುಕೋಣೆ ಅವರು ಈ ಸಮಾರಂಭದಲ್ಲಿ ಭಾಗಿಯಾದ ಏಕೈಕ ಭಾರತೀಯರಾಗಿದ್ದರು. ವಿಶೇಷ ವೆಂದರೆ, ಭಾರತೀಯ ಸಂಸ್ಕೃತಿಯಂತೆ ಚಿನ್ನದ ಬಣ್ಣದ ಸೀರೆ ಧರಿಸಿ ಕಂಗೊಳಿಸುತ್ತಿದ್ದ ಅವರು, ಇಂಗ್ಲಿಷ್ಯೇತರ ಸಿನೆಮಾಗಳ ವಿಭಾಗದಲ್ಲಿ ಪ್ರಶಸ್ತಿಯನ್ನು ಘೋಷಿಸಿದರು. ಈ ಸೀರೆಯನ್ನು ಸವ್ಯಸಾಚಿ ಮುಖರ್ಜಿ ವಿನ್ಯಾಸಗೊಳಿಸಿದ್ದಾರೆ.
ಓಪನ್ಹೈಮರ್ಗೆ 7 ವಿಭಾಗಗಳಲ್ಲಿ ಪ್ರಶಸ್ತಿ
ಪ್ರಮುಖವಾಗಿ ಇಂಗ್ಲಿಷ್ ಸಿನೆಮಾಗಳ ಕ್ಯಾಟಗರಿಯಲ್ಲಿ ಖ್ಯಾತ ವಿಜ್ಞಾನಿ ಜೆ. ರಾಬರ್ಟ್ ಓಪನ್ಹೈಮರ್ ಅವರ ಜೀವನ ಚರಿತ್ರೆ ಆಧರಿಸಿದ, ಕ್ರಿಸ್ಟೋಫರ್ ನೋಲನ್ ನಿರ್ದೇಶಿಸಿದ “ಓಪನ್ಹೈಮರ್’ ಸಿನಿಮಾ ಏಳು ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.