ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ನಟಿ ಪಾಯಲ್ ಲೈಂಗಿಕ ದೌರ್ಜನ್ಯ ಆರೋಪ
ಬಾಲಿವುಡ್ ನಟಿ ಕಂಗನಾ ರಣೌತ್ ಅವರು ನಟಿ ಪಾಯಲ್ ಘೋಷ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Team Udayavani, Sep 21, 2020, 4:25 PM IST
ಮುಂಬೈ: ಬಾಲಿವುಡ್ ನಿರ್ಮಾಪಕ ಅನುರಾಗ್ ಕಶ್ಯಪ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿ ಪಾಯಲ್ ಘೋಷ್ ಆರೋಪಿಸಿದ್ದಾರೆ. ಈಕುರಿತು ಶನಿವಾರ ರಾತ್ರಿ ಟ್ವೀಟ್ ಮಾಡಿರುವ ಅವರು, “ಗ್ಯಾಂಗ್ಸ್ ಆಫ್ ವಸ್ಸೇಪುರ್ ನಿರ್ದೇಶಕರು ನನ್ನೊಂದಿಗೆ 2014-15ರಲ್ಲಿ ಅನುಚಿತವಾಗಿ ವರ್ತಿಸಿದ್ದರು’ ಎಂದು ಹೇಳಿದ್ದಲ್ಲದೆ, ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆಕೋರಿ ಪ್ರಧಾನಿ ಮೋದಿಯವರಿಗೂ ತಮ್ಮ ಟ್ವೀಟ್ ಅನ್ನು ಟ್ಯಾಗ್ ಮಾಡಿದ್ದಾರೆ.
ಈ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿರುವ ಕಶ್ಯಪ್, “ಇದೊಂದು ಆಧಾರರಹಿತ ಆರೋಪ. ನನ್ನ ಧ್ವನಿಯನ್ನು ಹತ್ತಿಕ್ಕಲು ನಡೆಸಿರುವ ಯತ್ನ. ನಾನು ಈವರೆಗೂ ಯಾವ ಹೆಣ್ಣುಮಗಳೊಂದಿಗೂ ಕೆಟ್ಟದಾಗಿ ವರ್ತಿಸಿಲ್ಲ. ಆರೀತಿ ವರ್ತಿಸುವವರನ್ನು ನಾನು ಸಹಿಸುವುದೂ ಇಲ್ಲ’ ಎಂದಿದ್ದಾರೆ.
ಇದೇ ವೇಳೆ, ಬಾಲಿವುಡ್ ನಟಿ ಕಂಗನಾ ರಣೌತ್ ಅವರು ನಟಿ ಪಾಯಲ್ ಘೋಷ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಶ್ಯಪ್ರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಕಷ್ಟಪಡುತ್ತಿರುವ ಹೊರಗಿನ ಹೆಣ್ಣುಮಕ್ಕಳನ್ನು ಇಂಥವರೆಲ್ಲ ಲೈಂಗಿಕಕಾರ್ಯಕರ್ತೆಯರು ಎಂದು ಭಾವಿಸಿದಂತಿದೆ ಎಂದು ಕಂಗನಾ ಕಿಡಿಕಾರಿದ್ದಾರೆ.
ಪಾಯಲ್ ವಿರುದ್ಧ ಕಾನೂನು ಹೋರಾಟ: ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿರುವ ನಟಿ ಪಾಯಲ್ ಘೋಷ್ ವಿರುದ್ಧ ಮತ್ತೂಬ್ಬ ನಟಿ ರಿಚಾ ಛಡ್ಡಾ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಪಾಯಲ್ ಅವರು, “ನಟಿ ರಿಚಾ ಸೇರಿದಂತೆ ಇನ್ನೂ ಅನೇಕ ನಟಿಯ ರೊಂದಿಗೆ ಕಶ್ಯಪ್ ಸಂಬಂಧ ಹೊಂದಿದ್ದರು’ ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ನನ್ನನ್ನು ಅವಹೇಳನಕಾರಿಯಾಗಿ ಎಳೆದು ತರಲಾಗಿದೆ ಎಂದು ರಿಚಾ ಆರೋಪಿಸಿದ್ದು, ಪಾಯಲ್ ವಿರುದ್ಧ ನೋಟಿಸ್ ಜಾರಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.