Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Team Udayavani, Nov 26, 2024, 12:14 PM IST
ಮುಂಬಯಿ: ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ವಿಜೇತ ಎಆರ್ ರೆಹಮಾನ್ (AR Rahman) ಹಾಗೂ ಪತ್ನಿ ಸಾಯಿರಾ ಬಾನು ತಮ್ಮ 29 ವರ್ಷದ ದಾಂಪತ್ಯ ಜೀವನಕ್ಕೆ ವಿಚ್ಛೇದನ ಘೋಷಿಸಿದ್ದಾರೆ. ಪರಸ್ಪರ ಒಪ್ಪಿಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
29 ವರ್ಷಗಳ ಕಾಲ ಜತೆಗೆ ಸಂಸಾರ ನಡೆಸಿದ್ದ ಜೋಡಿ ದಿಢೀರ್ ವಿಚ್ಛೇದನ ಘೋಷಿಸಿದ್ದು ಅಭಿಮಾನಗಳಿಗೆ ಶಾಕ್ ನೀಡಿತು. ಇದಾದ ಕೆಲವೇ ಗಂಟೆಗಳಲ್ಲಿ ರೆಹಮಾನ್ ಮ್ಯೂಸಿಕ್ ಗ್ರೂಪ್ನ ಸದಸ್ಯೆಯಾಗಿರುವ ಮೋಹಿನಿ ಡೇ (Bassist Mohini Dey) ಕೂಡ ಡಿವೋರ್ಸ್ ಅನೌನ್ಸ್ ಮಾಡಿದ್ದರು.
ಇದನ್ನೂ ಓದಿ: Mohammed Siraj: ಬಿಟೌನ್ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
ಎ ಆರ್ ರೆಹಮಾನ್ ಅವರ ಬಳಿಕ ಮೋಹಿನಿ ಅವರು ತನ್ನ ಪತಿಗೆ ಡಿವೋರ್ಸ್ ನೀಡಿದ ವಿಚಾರ ಅನೇಕ ಗೊಂದಲಗಳಿಗೆ ಕಾರಣವಾಗಿತ್ತು. ಇಬ್ಬರ ವಿಚ್ಛೇದನ ವಿಚಾರವನ್ನು ಒಂದುಗೂಡಿಸಿ ನೆಟ್ಟಿಗರು ಗೊಂದಲವಾಗಿ ಮಾತನಾಡಿದ್ದರು. ಇಬ್ಬರ ನಡುವೆ ಸಂಬಂಧವನ್ನು ಸೃಷ್ಟಿಸಿ ಕೆಲವರು ಮಾತನಾಡಿದ್ದರು.
ಈ ಕುರಿತು ಸಾಯಿರಾ ಅವರ ವಕೀಲೆ ಮೋಹಿನಿ ಅವರ ವಿಚಾರಕ್ಕೂ ರೆಹಮಾನ್ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದೀಗ ಈ ಬಗ್ಗೆ ಸ್ವತಃ ಮೋಹಿನಿ ಅವರೇ ವಿಡಿಯೋ ಮಾಡಿ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ನನ್ನ ಜೀವನದಲ್ಲಿ ಹಲವು ಮಂದಿ ತಂದೆ ಸಮಾನರು ಇದ್ದಾರೆ. ಇವರೆಲ್ಲ ನನಗೆ ಮಾರ್ಗದರ್ಶಿಗಳು. ನನ್ನ ವೃತ್ತಿ ಬದುಕಿನ ಬೆಳವಣಿಗೆಗೆ ಇವರೆಲ್ಲ ತುಂಬಾ ಸಹಾಯ ಮಾಡಿದ್ದಾರೆ. ಅಂತಹವರಲ್ಲಿ ಎಆರ್ ರೆಹಮಾನ್ ಕೂಡ ಒಬ್ಬರು. ನಾನು ಅವರನ್ನು ತುಂಬಾನೇ ಗೌರವಿಸುತ್ತೇನೆ. ಅವರು ನನ್ನ ತಂದೆಯ ಹಾಗೆ. ನನ್ನ ತಂದೆಗಿಂತ ಸ್ವಲ್ಪ ಚಿಕ್ಕವರು. ಆದರೆ ಅವರ ಮಗಳು ನನ್ನ ವಯಸ್ಸಿನವಳೇ. ನಾವು ಇಬ್ಬರು ಒಬ್ಬರನ್ನು ಒಬ್ಬರು ಗೌರವದಿಂದ ನೋಡುತ್ತೇವೆ. ನಾನು ಅವರ ತಂಡದಲ್ಲಿ ಬೆಸಿಸ್ಟ್ ಆಗಿ 8.5 ವರ್ಷ ಕೆಲಸ ಮಾಡಿದ್ದೇನೆ. ಆ ನಂತರ ಯುಎಸ್ಗೆ ಶಿಫ್ಟ್ ಆದೆ. ನಮ್ಮ ಖಾಸಗಿ ವಿಚಾರಕ್ಕೆ ಗೌರವ ಕೊಡಿ. ಇದು ವೈಯಕ್ತಿಕ ವಿಚಾರ ಹಾಗೂ ನೋವಿನ ಪ್ರಕ್ರಿಯೆ” ಎಂದು ಮೋಹಿನಿ ಹೇಳಿದ್ದಾರೆ.
ಪತ್ನಿ ಸಾಯಿರಾ ಹೇಳಿದ್ದೇನು?: ಎಆರ್ ರೆಹಮಾನ್ ರಿಂದ ದೂರವಾದ ಬಗ್ಗೆ ಪತ್ನಿ ಸಾಯಿರಾ ಅವರು ಕೂಡ ಸ್ಪಷ್ಟನೆ ನೀಡಿದ್ದಾರೆ.
ನಾನು ಕಳೆದ ಕೆಲ ತಿಂಗಳಿನಿಂದ ಬಾಂಬೆಯಲ್ಲಿದ್ದೇನೆ. ದೈಹಿಕವಾಗಿ ನಾನು ತುಂಬಾ ಸುಸ್ತುಗೊಂಡಿದ್ದೇನೆ. ನನ್ನ ಆರೋಗ್ಯ ಕೂಡ ಸರಿಯಾಗಿಲ್ಲ. ಇದೇ ಕಾರಣದಿಂದ ನಾನು ರೆಹಮಾನ್ ಅವರಿಂದ ದೂರವಾಗಲು ಬಯಸಿದ್ದು. ಯೂಟ್ಯೂಬರ್ಸ್ ಹಾಗೂ ಮಾಧ್ಯಮದವರಿಗೆ ದಯವಿಟ್ಟು ನಾನು ಮಾಡುವ ಮನವಿ ಏನೆಂದರೆ ರೆಹಮಾನ್ ಅವರ ಬಗ್ಗೆ ಕೆಟ್ಟದ್ದನ್ನು ಪ್ರಸಾರ ಮಾಡಬೇಡಿ. ನನ್ನ ಆರೋಗ್ಯ ಸಮಸ್ಯೆಯಿಂದಾಗಿ ನಾನು ಚೆನ್ನೈನಲ್ಲಿ ಇರಲಿಲ್ಲ. ನಾನು ಚೆನ್ನೈನಲ್ಲಿ ಇಲ್ಲದಿದ್ದರೆ ಸಾಯಿರಾ ಎಲ್ಲಿದ್ದಾಳೆ ಎಂದು ಜನರು ಆಶ್ಚರ್ಯ ಪಡುತ್ತಾರೆ ಎಂದು ನನಗೆ ತಿಳಿದಿದೆ. ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ. ಚೆನ್ನೈನಲ್ಲಿ ಇದು ರೆಹಮಾನ್ ಅವರ ಬ್ಯುಸಿ ಶೆಡ್ಯೂಲ್ನಲ್ಲಿ ಆಗುವುದಿಲ್ಲ. ನನ್ನ ಮಕ್ಕಳಿಗಾಗಲಿ ಅವರಿಗಾಗಲಿ ಯಾರಿಗೂ ತೊಂದರೆ ಕೊಡಲು ನಾನು ಬಯಸಲ್ಲ ಎಂದು ಸಾಯಿರಾ ಹೇಳಿದ್ದಾರೆ.
View this post on Instagram
ಅವರೊಬ್ಬ ಅದ್ಭುತ ಮನುಷ್ಯ. ಅವರು ಹೇಗಿದ್ದಾರೋ ಹಾಗೆಯೇ ಇರಲು ನಾನು ಬಯಸುತ್ತೇನೆ. ನನ್ನ ಜೀವನದಲ್ಲಿ ನಾನು ಅವರನ್ನು ನಂಬುತ್ತೇನೆ. ನಾನು ತುಂಬಾ ಪ್ರೀತಿಸುತ್ತೇನೆ. ನಾವು ಪರಸ್ಪರ ಒಪ್ಪಿಕೊಂಡೇ ನಿರ್ಧಾರವನ್ನು ಮಾಡಿದ್ದೇವೆ. ಈ ಬಗ್ಗೆ ಹುಟ್ಟಿರುವ ಎಲ್ಲಾ ಊಹಾಪೋಹಗಳನ್ನು ನಿಲ್ಲಿಸಬೇಕೆಂದು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ. ಈ ಕ್ಷಣದಲ್ಲಿ ನಾವು ಏಕಾಂಗಿಯಾಗಿದ್ದೇವೆ. ನಾವು ಇನ್ನೂ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ. ಅವರ ಹೆಸರನ್ನು ಹಾಳು ಮಾಡುವುದನ್ನು ನಿಲ್ಲಿಸಿ ಎಂದು ಸಾಯಿರಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohammed Siraj: ಬಿಟೌನ್ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.