‘ಆರ್ ಆರ್ ಆರ್’ ಚಿತ್ರತಂಡದಿಂದ ಸಿಕ್ತು ಬಿಗ್ ಅಪ್ಡೇಟ್… ಏನದು ?
Team Udayavani, Jun 29, 2021, 3:21 PM IST
ಹೈದರಾಬಾದ್ : ದಾಖಲೆ ಬರೆಯಲೆಂದೇ ಸಿದ್ಧವಾಗುತ್ತಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ( ತಾತ್ಕಾಲಿಕ ಶಿರ್ಷೀಕೆ) ಚಿತ್ರತಂಡದಿಂದ ಇದೀಗ ಭರ್ಜರಿ ಗುಡ್ ನ್ಯೂಸ್ ವೊಂದು ಹೊರ ಬಂದಿದೆ.
ಈ ವರ್ಷ ತೆರೆ ಕಾಣಲಿರುವ ಆರ್ ಆರ್ ಆರ್ ಸಿನಿಮಾದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದೆ. ಕೇವಲ 2 ಸಾಂಗ್ ಮಾತ್ರ ಬಾಕಿ ಉಳಿದಿದ್ದು, ಶೀಘ್ರದಲ್ಲೆ ಅವುಗಳ ಚಿತ್ರೀಕರಣವನ್ನೂ ಮುಗಿಸಲಾಗುತ್ತದೆ. ಬಾಹುಬಲಿಯಂತಹ ಸೂಪರ್ ಡೂಪರ್ ಸಿನಿಮಾ ನೀಡಿರುವ ನಿರ್ದೇಶಕ ರಾಜಮೌಳಿ ಅವರು 2018 ರಲ್ಲಿ ಆರ್ ಆರ್ ಆರ್ ಸಿನಿಮಾ ಕೈಗೆತ್ತಿಕೊಂಡರು. ಈ ಸಿನಿಮಾದಲ್ಲಿ ಜೂನಿಯರ್ ಎನ್‍ಟಿಆರ್ ಹಾಗೂ ರಾಮ್ ಚರಣ್ ಅಭಿನಯಿಸುತ್ತಿದ್ದಾರೆ. ಬಿಗ್ ಬಜೆಟ್ ನಲ್ಲಿ ಸಿದ್ಧವಾಗುತ್ತಿರುವ ಈ ಸಿನಿಮಾ 6 – 7 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಕಳೆದ ಮೂರು ವರ್ಷಗಳಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಚಿತ್ರತಂಡ ಇಂದು ಗುಡ್ ನ್ಯೂಸ್ ನೀಡಿದೆ. ಚಿತ್ರೀಕರಣ ಮುಕ್ತಾಯಗೊಂಡಿರುವುದನ್ನು ತಿಳಿಸಿದ್ದು, ನಾಯಕ ನಟರಾದ ರಾಮ್ ಚರಣ್ ಹಾಗೂ ಜ್ಯೂನಿಯರ್ ಎನ್ ಟಿ ಆರ್ ಅವರು ಎರಡು ಭಾಷೆಗಳಲ್ಲಿ ಡಬ್ಬಿಂಗ್ ಕೂಡ ಮಾಡಿ ಮುಗಿಸಿದ್ದಾರೆ. ಶೀಘ್ರದಲ್ಲೇ ಉಳಿದ ಭಾಷೆಯ ಡಬ್ಬಿಂಗ್ ಮುಗಿಯಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ನಿರ್ದೇಶಕ ರಾಜಮೌಳಿ ಅವರೂ ತಮ್ಮ ಟ್ವಿಟರಿನಲ್ಲಿ ರಾಮ್ ಚರಣ್ ಹಾಗೂ ಎನ್ ಟಿ ಆರ್ ಬೈಕ್ ಮೇಲೆ ತೆರಳುತ್ತಿರುವ ಫೋಟೊವೊಂದನ್ನು ತಮ್ಮ ಹಂಚಿಕೊಂಡಿದ್ದು, ಮೈ ಹೀರೋಸ್ ಎಂದು ಕ್ಯಾಪ್ಷನ್ ನೀಡಿದ್ದಾರೆ. ಚಿತ್ರೀಕರಣ ವೇಳೆಯಲ್ಲಿ ತೆಗೆಯಲಾದ ಈ ಲುಕ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪುರ ಹರಿದು ಬರುತ್ತಿದೆ.
ಇನ್ನು ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಇದ್ದು ಬಾಲಿವುಡ್ ನಟಿ ಅಲಿಯಾ ಭಟ್, ಅಜಯ್ ದೇವಗನ್, ಸಮುದ್ರ ಖಣಿ, ಕೆಲವು ಅಂತಾರಾಷ್ಟ್ರೀಯ ನಟರು ಪೋಷಕ ಪಾತ್ರದಲ್ಲಿ ಕಾಣಿಸಿ ಕೊಂಡಿ ದ್ದಾರೆ. ಡಿವಿವಿ ದಾನಯ್ಯ ಹಾಗೂ ಡಿವಿವಿ ಎಂಟರ್ ಟೈನ್‍ಮೆಂಟ್ ನಿರ್ಮಿಸುತ್ತಿದ್ದು, ಇದು 450 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಇನ್ನು ಇದಕ್ಕೆ ಎಂ.ಎಂ ಕೀರವಾಣಿಯವರ ಸಂಗೀತದ ಮಾಧುರ್ಯವಿದೆ.
Moving at a rapid pace ??
Except for two songs, we are done with the shoot. #RRRMovie@tarak9999 & @alwaysramcharan have completed the dubbing for 2 languages and will wind up the rest soon. ?? pic.twitter.com/6g1h5yTQhK— RRR Movie (@RRRMovie) June 29, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್: ಫೋಟೋ ಸಾಕ್ಷ್ಯ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.