ಓಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗಲಿವೆ ಈ ಬಿಗ್ ಸ್ಟಾರ್ ಗಳ ಸಿನಿಮಾಗಳು
Team Udayavani, Jul 1, 2020, 11:31 AM IST
ನವದೆಹಲಿ: ಕೋವಿಡ್ ಲಾಕ್ ಡೌನ್ ನಿಂದ ಚಿತ್ರ ಮಂದಿರಗಳು ಬಾಗಿಲು ಮುಚ್ಚಿವೆ. ಮನರಂಜನೆ ಮಾತ್ರ ನಿಂತಿಲ್ಲ. ಓಟಿಟಿ ತಾಣದಲ್ಲಿ ವೆಬ್ ಸೀರಿಸ್ ಹಾಗೂ ಚಿತ್ರಗಳು ಬಿಡುಗಡೆಯಾಗುತ್ತಲೇ ಇವೆ. ಡಿಸ್ನಿ + ಹಾಟ್ ಸ್ಟಾರ್ ಬಾಲಿವುಡ್ ನ ಕೆಲ ಬಹು ನಿರೀಕ್ಷಿತ ಚಿತ್ರಗಳು ನೇರವಾಗಿ ಆನ್ಲೈನ್ ನಲ್ಲಿ ಬಿಡುಗಡೆಯಾಗಲಿವೆ ಎಂದು ಪ್ರಕಟನೆ ಮಾಡಿದೆ.
ಸೋಮವಾರ ಡಿಸ್ನಿ+ ಹಾಟ್ ಸ್ಟಾರ್ ಆನ್ಲೈನ್ ತಾಣ ಕೋವಿಡ್ ಭೀತಿಯ ಲಾಕ್ ಡೌನ್ ನಿಂದ ಕೆಂಗೆಟ್ಟಿರುವ ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರಗಳು ನೇರವಾಗಿ ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಲಿವೆ ಎಂದು ಚಿತ್ರದ ಪಟ್ಟಿಯನ್ನು ಪ್ರಕಟಿಸಿದೆ. ಜುಲೈ ಹಾಗೂ ಅಕ್ಟೋಬರ್ ನಡುವಿನಲ್ಲಿ ಈ ಚಿತ್ರಗಳು ಬಿಡುಗಡೆಯಾಗಲಿದ್ದು ಅಭಿಮಾನಿಗಳಲ್ಲಿ ಖುಷಿ ಮನಮಾಡಿದೆ.
ಸಾಲು ಸಾಲಾಗಿ ಚಿತ್ರಗಳು ಬಿಡುಗಡೆಗೆ ಕಾತರದಿಂದ ನಿಂತಿದ್ದು ಮುಖ್ಯವಾಗಿ ಅಕ್ಷಯ್ ಕುಮಾರ್ ಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಲಕ್ಷ್ಮೀ ಬಾಂಬ್’, ಅಜಯ್ ದೇವಗನ್ ಅಭಿನಯಿಸಿರುವ ‘’ಭುಜ್: ಪ್ರೆಡ್ ಆಫ್ ಇಂಡಿಯಾ’, ಆಲಿಯಾ ಭಟ್ ಮುಖ್ಯ ಭೂಮಿಕೆಯಲ್ಲಿರುವ ‘ಸಡಕ್ – 2’, ಅಭಿಷೇಕ್ ಬಚ್ಚನ್ ಅವರ ‘ದಿ ಬಿಗ್ ಬುಲ್’. ಹೀಗೆ ಈ ನಾಲ್ಕು ಚಿತ್ರಗಳು ಎರಡು ತಿಂಗಳ ನಡುವೆ ಓಟಿಟಿ ತಾಣದಲ್ಲಿ ಬಿಡುಗಡೆಯಾಗಲಿದೆ.
ಇನ್ನು ಸುಶಾಂತ್ ಸಿಂಗ್ ರಜಪೂತ್ ಅವರ ಕೊನೆಯ ಚಿತ್ರ ‘ ದಿಲ್ ಬೆಚರಾ” ಬಿಡುಗಡೆ ದಿನಾಂಕ ಈಗಾಗಲೇ ನಿಗದಿಯಾಗಿದ್ದು ಜುಲೈ 24 ರಂದು ತೆರೆ ಕಾಣಲಿದೆ.
ಡಿಸ್ನಿ + ಹಾಟ್ ಸ್ಟಾರ್ ತನ್ನ ತಾಣದಲ್ಲಿ ಬಿಡಯಗಡೆಯಾಗಲಿರುವ ಚಿತ್ರಗಳ ಪಟ್ಟಿ ಬಿಡುಗಡೆ ಮಾಡಿದ ಮೇಲೆ ಅದರ ಪ್ರಚಾರವನ್ನು ನಟ- ನಟಿಯರು ಈಗಾಗಲೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭರದಿಂದ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Karinja: ಅಪಾಯಕಾರಿ ವಿದ್ಯುತ್ ಕಂಬ; ತುಕ್ಕು ಹಿಡಿದ, ಶಕ್ತಿ ಕಳೆದು ಬಾಗಿರುವ ಕಂಬ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.