Bigg Boss Malayalam 5: ನಿರೂಪಕ ಮೋಹನ್ ಲಾಲ್ ಗೆ ಅಗೌರವ; ಅರ್ಧದಲ್ಲೇ ಹೊರನಡೆದ ನಟ
Team Udayavani, Apr 10, 2023, 1:53 PM IST
ಕೊಚ್ಚಿ: ʼಬಿಗ್ ಬಾಸ್ ಮಲಯಾಳಂ 5ʼ ಕಾರ್ಯಕ್ರಮದ ʼಈಸ್ಟರ್ ಹಬ್ಬʼದ ವಿಶೇಷ ಸಂಚಿಕೆಯಲ್ಲಿ ನಿರೂಪಕ ಮೋಹನ್ ಲಾಲ್ ಅವರು ತಾಳ್ಮೆ ಕಳೆದುಕೊಂಡು ಅರ್ಧದಲ್ಲೇ ಶೋ ಬಿಟ್ಟು ತೆರಳಿರುವ ಘಟನೆ ನಡೆದಿದೆ.
ಬಿಗ್ ಬಾಸ್ ʼಬಿಗ್ ಬಾಸ್ ಮಲಯಾಳಂ ಸೀಸನ್ 5 ಕಾರ್ಯಕ್ರಮದಲ್ಲಿ ಭಾನುವಾರ ʼಈಸ್ಟರ್ ಹಬ್ಬʼಕ್ಕೆ ವಿಶೇಷ ಟಾಸ್ಕ್ ವೊಂದನ್ನು ನೀಡಲಾಗಿದೆ. ಟಾಸ್ಕ್ ವೇಳೆ ಅಖಿಲ್ ಮಾರಾರ್ ಅವರು ಪ್ರತಿಸ್ಪರ್ಧಿ ಮೇಲೆ ಅಶ್ಲೀಲ ಪದಗಳನ್ನು ಬಳಸಿದ್ದಾರೆ. ಏಂಜಲೀನಾ, ಸಾಗರ್ ಮತ್ತು ಜುನೈಜ್ ಅವರ ಮೇಲೆ ಈ ರೀತಿಯ ಪದಗಳನ್ನು ಬಳಸಿದ್ದಾರೆ.
ಇದಾದ ಬಳಿಕ ಈ ವಿಚಾರವನ್ನು ಮೋಹನ್ ಅವರ ಮುಂದೆ ಸ್ಪರ್ಧಿಗಳು ಗಮನಕ್ಕೆ ತಂದಿದ್ದಾರೆ. ಮೋಹನ್ ಲಾಲ್ ಇದಕ್ಕೆ ಕ್ಷಮೆ ಕೇಳುವಂತೆ ಹೇಳಿದ್ದಾರೆ. ಅಖಿಲ್ ಸ್ಪರ್ಧಿಗಳ ಬಳಿ ಕ್ಷಮೆ ಕೇಳಿದ್ದಾರೆ. ಮೋಹನ್ ಲಾಲ್ ಅಖಿಲ್ ಅವರಿಗೆ ಕ್ಯಾಪ್ಟನ್ ಬ್ಯಾಂಡ್ ನ್ನು ಸಾಗರ್ ಅವರಿಗೆ ನೀಡಿ ಎಂದಿದ್ದಾರೆ. ಆದರೆ ಸಾಗರ್ ಅವರು ನನ್ನ ಬಳಿ ಕ್ಷಮೆ ಕೇಳಬೇಕೆಂದಿದ್ದಾರೆ. ಇದಕ್ಕೆ ಅಖಿಲ್ ನಾನು ಆತನ ಬಳಿ ಕ್ಷಮೆ ಕೇಳಲ್ಲ ಎಂದಿದ್ದಾರೆ.
ಇದನ್ನೂ ಓದಿ: Dalai Lama ಬಾಲಕನ ಜತೆ ವಿವಾದಾತ್ಮಕ ವಿಡಿಯೋ: ಕ್ಷಮೆಯಾಚಿಸಿದ ದಲೈಲಾಮಾ
ಇದಾದ ಬಳಿಕ ಇಬ್ಬರನ್ನೂ ಬಿಗ್ ಬಾಸ್ ಕನ್ಫೆಶನ್ ಕೊಠಡಿಗೆ ಕರೆದು ಚರ್ಚಿಸಿದ್ದಾರೆ. ಆದರೆ ಈ ವೇಳೆ ಇಬ್ಬರೂ ಸಮಸ್ಯೆ ಬಗೆಹರಿಸದೇ ವಿವಾದವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ನಿರೂಪಕರ ಮುಂದೆ ಈ ವಿಚಾರವನ್ನು ಮತ್ತಷ್ಟು ಹೆಚ್ಚಿಸಬೇಡಿ ಎಂದು ಸಾಗರ್ ಅವರಿಗೆ ಬಿಗ್ ಬಾಸ್ ಹೇಳಿದ್ದಾರೆ.
ಮೋಹನ್ ಲಾಲ್ ಕಾರ್ಯಕ್ರಮದ ಸಿಬ್ಬಂದಿಗೆ ಈ ಲೈನ್ ಕಟ್ ಮಾಡಿ ಎಂದು ಹೇಳಿ, ಸ್ಪರ್ಧಿಗಳ ಮೇಲೆ ರೇಗಾಡಿದ್ದಾರೆ. ನಾನು ನಿಮಗೆ ಬ್ಯಾಂಡ್ ಕೊಡಿ ಎಂದು ಹೇಳಿದೆ ಆದರೆ ಅದನ್ನು ನೀವು ಎಸೆದಿದ್ದೀರಿ. ಇದರಿಂದ ನನಗೆ ಅಗೌರವವಾಯಿತು. ನಿಮ್ಮೆಲ್ಲರೊಂದಿಗೆ ಈಸ್ಟರ್ ಆಚರಿಸಲು ನಾನು ಸಂತೋಷದಿಂದ ಇಲ್ಲಿಗೆ ಬಂದಿದ್ದೇನೆ. ನಾನು ಜೈಸಲ್ಮೇರ್‌ನಿಂದ 4-5 ಗಂಟೆಗಳ ಪ್ರಯಾಣ ಮಾಡಿದೆ. ನಂತರ ವಿಮಾನ ಸಿಕ್ಕಿದ ಬಳಿಕ ನಾನು ಇಲ್ಲಿಗೆ ತಲುಪಿದೆ. ಈ ಘಟನೆಯಿಂದ ನನಗೆ ತುಂಬಾ ಅಸಮಾಧಾನವಾಗಿದೆ. ಆದ್ದರಿಂದ ನಾನು ಕಾರ್ಯಕ್ರಮವನ್ನು ಅರ್ಧದಲ್ಲೇ ಮುಗಿಸಿ ಹೋಗುತ್ತಿದ್ದೇನೆ ಎಂದು ಹೇಳಿ ವಾಪಾಸಾಗಿದ್ದಾರೆ.
ಮೋಹನ್ ಲಾಲ್ ಈ ರೀತಿ ತಾಳ್ಮೆ ಕಳೆದುಕೊಂಡಿರುವುದು ಇದೇ ಮೊದಲು ಎಂದು ವರದಿ ತಿಳಿಸಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ
Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್!
MUST WATCH
ಹೊಸ ಸೇರ್ಪಡೆ
Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು
Karkala: ಈ ರಸ್ತೆಯಲ್ಲಿ ಬಸ್ ತಂಗುದಾಣಗಳೇ ಇಲ್ಲ!
UP: ಫಸ್ಟ್ ನೈಟ್ ದಿನ ಬಿಯರ್, ಗಾಂಜಾ ತಂದು ಕೊಡಲು ಬೇಡಿಕೆ ಇಟ್ಟ ಪತ್ನಿ; ಪತಿ ಶಾಕ್.!
Belma: ಕುಸಿತ ಭೀತಿಯಲ್ಲಿರುವ ಮನೆ; ಕಾಂಕ್ರೀಟ್ ತಡೆಗೋಡೆಗೆ ಪಿಡಬ್ಲ್ಯುಡಿ ಪ್ರಸ್ತಾವ
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.