Bigg Boss ಮನೆಯಲ್ಲಿ ʼಲಿಪ್‌ ಲಾಕ್‌ ಕಿಸ್‌ʼ ಚಾಲೆಂಜ್: ಮುತ್ತಿನ ಬಳಿಕ ನಡೆಯಿತು ವಾಗ್ವಾದ

Team Udayavani, Jul 1, 2023, 12:51 PM IST

Bigg Boss ಮನೆಯಲ್ಲಿ ʼಲಿಪ್‌ ಲಾಕ್‌ ಕಿಸ್‌ʼ ಚಾಲೆಂಜ್: ಮುತ್ತಿನ ಬಳಿಕ ನಡೆಯಿತು ವಾಗ್ವಾದ

ಮುಂಬಯಿ: ಜನಪ್ರಿಯ ಕಾರ್ಯಕ್ರಮ ಬಿಗ್‌ ಬಾಸ್‌ ಓಟಿಟಿ -2  ಆರಂಭವಾಗಿ ಕೆಲ ದಿನಗಳೇ ಕಳೆದಿದೆ. ಆಗಲೇ ಮನೆಯಲ್ಲಿ ವಾದ – ವಿವಾದಗಳ ಚರ್ಚೆ ಜೋರಾಗಿ ನಡೆಯುತ್ತಿದೆ.

ಟಾಸ್ಕ್‌ ಅಂಗವಾಗಿ ಮನೆಯ ಸ್ಪರ್ಧಿಗಳು ಎರಡು ತಂಡಗಳಾಗಿ ವಿಂಗಡನೆ ಆಗಿದ್ದಾರೆ. ಪೂಜಾ ಭಟ್, ಫಲಕ್ ನಾಜ್, ಸೈರಸ್ ಬ್ರೋಚಾ, ಅವಿನಾಶ್ ಸಚ್‌ದೇವ್ ಮತ್ತು ಬೇಬಿಕಾ ಧುರ್ವೆ ಮುಂತಾದವರು ಒಂದು ತಂಡದಲ್ಲಿದ್ದಾರೆ. ಹಾಗೆ ಇನ್ನೊಂದು ತಂಡದಲ್ಲಿ ಮನಿಶಾ ರಾಣಿ, ಆಕಾಂಕ್ಷಾ ಪುರಿ, ಜಡ್ ಹದಿದ್, ಜಿಯಾ ಶಂಕರ್, ಮತ್ತು ಅಭಿಷೇಕ್ ಮಲ್ಹಾನ್ ಇದ್ದಾರೆ. ಎರಡೂ ತಂಡಗಳ ಸದಸ್ಯರು ನಾನಾ ಟಾಸ್ಕ್‌ ನಲ್ಲಿ ಭಾಗಿಯಾಗಿದ್ದಾರೆ.

ಟಾಸ್ಕ್‌ ನ ಭಾಗವಾಗಿ ʼಎʼ ತಂಡದ ಅವಿನಾಶ್ ಸಚ್‌ದೇವ್ ʼಬಿʼ ತಂಡದ ಆಕಾಂಕ್ಷಾ ಪುರಿ ಅವರಿಗೆ ಒಂದು ಚಾಲೆಂಜ್‌ ನ್ನು ಕೊಟ್ಟಿದ್ದಾರೆ. 30 ಸೆಕೆಂಡ್‌  ನೀವು ಅವರಿಗೆ ಕಿಸ್‌ ಕೊಡಬೇಕೆಂದು ಹೇಳಿದ್ದಾರೆ. ಈ ಸವಾಲಿಗೆ ಆಕಾಂಕ್ಷಾ ಪುರಿ ಮುಂದೆ ಬಂದಿದ್ದಾರೆ. ಆ ಬಳಿಕ ತನ್ನ ತಂಡದ ಸಹ ಸ್ಪರ್ಧಿ ಜಡ್ ಹದಿದ್ ಅವರೊಂದಿಗೆ ಲಿಪ್‌ ಲಾಕ್‌ ಮಾಡಿದ್ದಾರೆ. 30 ಸೆಕೆಂಡ್‌ ಗಳಿಗಿಂತ ಜಾಸ್ತಿಯೇ ನಡೆದ ಈ ಕಿಸ್ಸಿಂಗ್‌ ಉಳಿದವರನ್ನು ಮುಜುಗರಕ್ಕೀಡು ಮಾಡಿದೆ. ಈ ವೇಳೆ ಪೂಜಾ ಭಟ್ ಮತ್ತು ಅಭಿಷೇಕ್ ಮಧ್ಯಪ್ರವೇಶಿಸಿ ಅವರನ್ನು ನಿಲ್ಲಿಸುವಂತೆ ಹೇಳಿದ್ದಾರೆ.

ಸಲ್ಮಾನ್‌ ಖಾನ್‌ ನಿರೂಪಣೆ ಮಾಡುವ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಮನೆಯಲ್ಲಿ ಇರುವ ವ್ಯಕ್ತಿತ್ವದ ಹೆಚ್ಚು ಗಮನ ಕೊಡುತ್ತಾರೆ. ಈ ಕಾರಣದಿಂದ ಆಕಾಂಕ್ಷಾ ಮನಿಶಾ ರಾಣಿಯೊಂದಿಗೆ ಲಿಪ್‌ಲಾಕ್ ಬಗ್ಗೆ ಚರ್ಚಿಸಿದ್ದಾರೆ. ಸಲ್ಮಾನ್ ಖಾನ್ ತನ್ನ ಹಾವಭಾವದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಭಯವನ್ನು ಮನಿಶಾ ಅವರೊಂದಿಗೆ ಆಕಾಂಕ್ಷಾ ಮಾತನಾಡಿದ್ದಾರೆ. ಇದು ಕೇವಲ ಒಂದು ಚಟುವಟಿಕೆ ಮತ್ತು ಇದು ಪ್ರೇಕ್ಷಕರಿಂದ ಮತಗಳನ್ನು ಗಳಿಸಲು ನಿನಗೆ ಸಹಾಯಕವಾಗಲಿದೆ ಎಂದು ಮನೀಶಾ ಆಕಾಂಕ್ಷಾ ಪುರಿಗೆ ಭರವಸೆ ನೀಡಿದ್ದಾರೆ.

ಕಿಸ್‌ ಮಾಡುವ ಸಮಯದಲ್ಲಿ ಆಕಾಂಕ್ಷಾ ನಡಗುತ್ತಿದ್ದಳು. ಅವಳು ಕೆಟ್ಟ ಕಿಸ್ಸರ್ ಎಂದು ಜಡ್ ಹದಿದ್ ಹೇಳಿದಾಗ ಪೂಜಾ ಭಟ್‌ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಿಸ್ಸಂಶಯವಾಗಿ, ಹುಡುಗಿಯನ್ನು ಇಡೀ ಪ್ರಪಂಚದ ಮುಂದೆ ಕಿಸ್ ಮಾಡಲು ಕೇಳಿದರೆ ಏನು ಮಾಡುತ್ತಾಳೆ? ಈ ಕಾಮೆಂಟ್ ಸರಿಯಾಗಿಲ್ಲ, ಕ್ಷಮಿಸಿ ನಾನು ಅದನ್ನು ಒಪ್ಪುವುದಿಲ್ಲ ನೀನು ಹುಡುಗನಲ್ಲ, ಗಂಡು ಎಂದು ನಾನು ಭಾವಿಸಿದ್ದೆ” ಎಂದಿದ್ದಾರೆ.

“ಭಾರತೀಯ ಮಹಿಳಾ ಕಲಾವಿದೆಯಾಗಿ, ಈ ಕಿಸ್ ನನಗೆ ಅಸಹ್ಯವಾಗಿಸಿದೆ. ಇದನ್ನು ಜಾಡ್ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.

View this post on Instagram

A post shared by JioCinema (@officialjiocinema)

ಟಾಪ್ ನ್ಯೂಸ್

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

kangana-2

Emergency ಚಿತ್ರ; 25ರೊಳಗೆ ಬಿಡುಗಡೆ ನಿರ್ಧರಿಸಿ: ಕೋರ್ಟ್‌

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Salim Khan: ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ತಂದೆಗೆ ಬೆದರಿಕೆ; ಅಸಲಿಗೆ ಆಗಿದ್ದೇನು?

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

Abdu Rozik: ನಿಶ್ಚಿತಾರ್ಥ ಬಳಿಕ ಮುರಿದು ಬಿತ್ತು ʼಬಿಗ್‌ ಬಾಸ್‌ʼ ಖ್ಯಾತಿಯ ಅಬ್ದು ವಿವಾಹ

National Cinema Day: ಈ ದಿನ‌ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್

National Cinema Day: ಈ ದಿನ‌ 99 ರೂ.ಗೆ ಸಿಗಲಿದೆ ಮೂವಿ ಟಿಕೆಟ್; ಎಲ್ಲೆಲ್ಲಿ ಇರಲಿದೆ ಆಫರ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.