BB OTT 2: ಮಹಿಳಾ ಸ್ಪರ್ಧಿಗೆ ಹಿಂಭಾಗ ತೋರಿಸಿ ಅಸಭ್ಯ ವರ್ತನೆ; ಶೋ ತೊರೆಯುತ್ತೇನೆಂದ ಸಲ್ಮಾನ್
Team Udayavani, Jul 2, 2023, 11:34 AM IST
ಮುಂಬಯಿ: ಬಿಗ್ ಬಾಸ್ ಓಟಿಟಿ-2 ನಲ್ಲಿ ದಿನಕ್ಕೊಂದು ಡ್ರಾಮಾ ನಡೆಯುತ್ತಿದೆ. ಸ್ಪರ್ಧಿಗಳ ನಡುವಿನ ವಾದ – ವಿವಾದಗಳು ತಾರರಕ್ಕೇರುತ್ತಿದೆ. ಈ ನಡುವೆ ನಿರೂಪಕ ಸಲ್ಮಾನ್ ಖಾನ್ ಸ್ಪರ್ಧಿಗಳ ವರ್ತನೆ ವಿರುದ್ಧ ಗರಂ ಆಗಿದ್ದಾರೆ.
ಇತ್ತೀಚೆಗಷ್ಟೇ ಆಕಾಂಕ್ಷಾ ಪುರಿ ಸಹ ಸ್ಪರ್ಧಿ ಜಡ್ ಹದಿದ್ ಅವರೊಂದಿಗೆ ಲಿಪ್ ಲಾಕ್ ಮಾಡಿದ ವಿಚಾರ ಸದ್ದು ಮಾಡಿತ್ತು. ಕಿಸ್ ಮಾಡುವ ಸಮಯದಲ್ಲಿ ಆಕಾಂಕ್ಷಾ ನಡಗುತ್ತಿದ್ದಳು. ಅವಳು ಕೆಟ್ಟ ಕಿಸ್ಸರ್ ಎಂದು ಜಡ್ ಹದಿದ್ ಹೇಳಿದ್ದರು. “ಭಾರತೀಯ ಮಹಿಳಾ ಕಲಾವಿದೆಯಾಗಿ, ಈ ಕಿಸ್ ನನಗೆ ಅಸಹ್ಯವಾಗಿಸಿದೆ. ಇದನ್ನು ಜಾಡ್ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ ಆಕಾಂಕ್ಷಾ ಪುರಿ ಎಂದಿದ್ದರು. ಈ ವಿಚಾರ ಮನೆಯ ಸದಸ್ಯರ ನಡುವೆ ಕೆಲ ಸಮಯ ಚರ್ಚಾ ವಿಷಯವಾಗಿತ್ತು.
ಇದೀಗ ಜಡ್ ಹದಿದ್ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ಜಡ್ ಮತ್ತು ಜಿಯಾ ಪಾತ್ರೆಗಳನ್ನು ತೊಳೆಯುತ್ತಿದ್ದರು. ಈ ವೇಳೆ ಅಭಿಷೇಕ್ ಮಲ್ಹಾನ್ ಉಳಿದ ಆಹಾರವನ್ನು ಪೆಟ್ಟಿಗೆಗಳಲ್ಲಿ ಸಂಗ್ರಹಿಸಿ ಹಿಡಿಯೆಂದು ಹೇಳಿದ್ದಾರೆ. ಆದರೆ ಇದಕ್ಕೆ ಜಡ್ ಮತ್ತು ಜಿಯಾ ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಬೇಬಿಕಾ ಅವರು ಆಕ್ರೋಶಗೊಂಡು ಜಡ್ ಅವರಿಗೆ ಕೆಲಸದ ವಿಚಾರವಾಗಿ ಪ್ರಶ್ನೆಗಳನ್ನು ಕೇಳಿದ್ದಾರೆ.
ಜಡ್ ಅವರು ಬೇಬಿಕಾ ಅವರ ಮಾತಿಗೆ ಕ್ಯಾರೇ ಎನ್ನದೇ “ನಿನ್ನ ಮಾತುಗಳನ್ನು ಕೇಳಲು ನನಗೆ ಆಸಕ್ತಿಯಿಲ್ಲ” ಎಂದಿದ್ದಾರೆ. ಇದಕ್ಕೆ ಬೇಬಿಕಾ “ನೀನು ತಲೆಯಿಂದ ಕಾಲಿನವರೆಗೆ” ನಕಲಿ ಎಂದಿದ್ದಾರೆ. ಈ ಮಾತನ್ನು ಕೇಳಿ ಸಿಟ್ಟಾದ ಜಡ್ ತನ್ನ ಹಿಂಭಾಗವನ್ನು ಬೇಬಿಕಾ ಅವರ ಕಡೆ ತೋರಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಇದರಿಂದ ನೊಂದ ಬೇಬಿಕಾ ನಾನು ಆತ ಈ ಮನೆಯಲ್ಲಿ ಇದ್ದರೆ ಇರಲಾರೆ ಎಂದು ಮನೆ ಬಿಟ್ಟು ಹೋಗಲು ಸಿದ್ದರಾಗಿದ್ದಾರೆ.
ಸದ್ಯ ಜಡ್ ಅವರ ಅಸಭ್ಯ ವರ್ತನೆಯ ವಿಡಿಯೋವನ್ನು ಎಡಿಟ್ ಮಾಡಿ ಕಟ್ ಮಾಡಲಾಗಿದೆ.
ಈ ವಾಗ್ವಾದದ ವಿಚಾರ ʼವೀಕೆಂಡ್ ಕಾ ವಾರ್ʼ ನಲ್ಲಿ ಸಲ್ಮಾನ್ ಖಾನ್ ಅವರು ಗರಂ ಆಗುವಂತೆ ಮಾಡಿದೆ. ಜಡ್ ಹದಿದ್ ಅವರ ವರ್ತನೆಯಿಂದ ಸಲ್ಮಾನ್ ಖಾನ್ ನಿರಾಶೆಗೊಂಡಿದ್ದಾರೆ. ದೇಶ ಹಾಗೂ ಸ್ಪರ್ಧಿಗಳ ಕ್ಷಮೆ ಕೇಳುವಂತೆ ಮಾಡಿದ್ದಾರೆ. ಜಡ್ ಮತ್ತು ಆಕಾಂಕ್ಷಾ ಪುರಿ ನಡುವಿನ ವೈರಲ್ ಕಿಸ್ ಕ್ಷಣದ ಬಗ್ಗೆಯೂ ಅವರು ಮಾತನಾಡಿದರು. ತಮ್ಮ ಶೋನಲ್ಲಿ ಯಾರೂ ಈ ರೀತಿ ಮಾಡಿಲ್ಲ ಎಂದು ಬಾಲಿವುಡ್ ಸೂಪರ್ ಸ್ಟಾರ್ ಈ ವೇಳೆ ಹೇಳಿದ್ದಾರೆ.
ತನ್ನ ವರ್ತನೆಗೆ ಜಡ್ ಅವರು ಕ್ಷಮೆ ಕೇಳಿದ್ದಾರೆ. “ನಾನು ತಪ್ಪು ಮಾಡಿದ್ದೇನೆ ಎಂದು ನನಗೆ ತಿಳಿದಿದೆ. ನಾನು ಇದನ್ನು ಎಂದಿಗೂ ಪುನರಾವರ್ತಿಸುವುದಿಲ್ಲ ಮತ್ತು ಕ್ಷಮಿಸಿ.” ಎಂದಿದ್ದಾರೆ ಆದರೆ ಸಲ್ಮಾನ್ ಅವರ ಕ್ಷಮೆಯನ್ನು ನಿರಾಕರಿಸಿ, “ನಾನು ಈ ಕಾರ್ಯಕ್ರಮವನ್ನು ತೊರೆಯಲು ತುಂಬಾ ಹತ್ತಿರವಾಗಿದ್ದೇನೆ. ಹೀಗೆ ಇದು ಮುಂದುವರಿದರೆ ನಾನು ಶೋ ತೊರೆಯುತ್ತೇನೆ.” ಎಂದು ಗರಂ ಆಗಿದ್ದಾರೆ.
ಜಡ್ ನಿಮಗೆ ಇದೆಲ್ಲವೂ ಸಾಮಾನ್ಯವೆಂದು ತೋರುತ್ತದೆ ಆದರೆ ಭಾರತದಂತಹ ದೇಶಕ್ಕೆ ಇದು ಸಾಮಾನ್ಯವಲ್ಲ ಎಂದು ಸಲ್ಮಾನ್ ಹೇಳಿದ್ದಾರೆ. ಜಡ್ ಅಳುತ್ತಾ ಸೋಫಾದಲ್ಲಿ ಕೂತಿದ್ದಾರೆ. ಇಲ್ಲಿಗೆ ಆ ದಿನದ ಎಪಿಸೋಡ್ ಮುಕ್ತಾಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.