ʼAnimalʼ ಓಟಿಟಿ ವರ್ಷನ್‌ನಲ್ಲಿ ಬಾಬಿ – ರಣ್ಬೀರ್ ಕಿಸ್ಸಿಂಗ್ ಸೀನ್; ನಟ ಹೇಳಿದ್ದೇನು?
Team Udayavani, Dec 14, 2023, 2:03 PM IST
ಮುಂಬಯಿ: ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್ʼ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗಳಿಕೆ ಕಂಡು, ಥಿಯೇಟರ್ ನಲ್ಲಿ ಸಕ್ಸಸ್ ಫುಲ್ ಆಗಿ ಸಾಗುತ್ತಿದೆ. ಗ್ಲೋಬಲ್ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ 600 ಕೋಟಿಗೂ ಅಧಿಕ ಕಮಾಯಿ ಮಾಡಿದೆ.
ರಣ್ಬೀರ್ ಕಪೂರ್ ಇಂದೆಂದೂ ಕಾಣಿಸಿಕೊಳ್ಳದ ರೌದ್ರ ಅವತಾರದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹಸ, ರೊಮ್ಯಾನ್ಸ್ ಹಾಗೂ ಬೋಲ್ಡ್ ಸೀನ್ ಗಳಿಂದ ಸಿನಿಮಾ ಚರ್ಚೆಯಲ್ಲಿದೆ. ರಶ್ಮಿಕಾ ಹಾಗೂ ತೃಪ್ತಿ ದಿಮ್ರಿ ಅವರು ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದ ಯಶಸ್ಸಿನ ಬಳಿಕ ಚಿತ್ರತಂಡ ಖುಷ್ ಆಗಿದೆ. ರಣ್ಬೀರ್ ಅಭಿನಯದೊಂದಿಗೆ ಗಮನ ಸೆಳೆದ ಮತ್ತೊಂದು ಪ್ರಮುಖ ಪಾತ್ರವೆಂದರೆ ಅದು ಬಾಬಿ ಡಿಯೋಲ್ ಅವರದು. ಬಾಬಿ ಸಿನಿಮಾದಲ್ಲಿ ʼ ಅಬ್ರಾರ್ ಹಕ್ʼ ಎನ್ನುವ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿನ ಅವರ ಅಭಿನಯವನ್ನು ನೋಡಿದ ಬಳಿಕ ಪ್ರೇಕ್ಷಕರು ಫಿದಾ ಆಗಿದ್ದಾರೆ.
ಸಿನಿಮಾದ ಯಶಸ್ಸಿನ ನಂತರ ಬಾಬಿ ಡಿಯೋಲ್ ನಾನಾ ಸಂದರ್ಶನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ʼ ಕ್ವಿಂಟ್ʼ ನಲ್ಲಿನ ಸಂದರ್ಶನದಲ್ಲಿ ಅವರು ಸಿನಿಮಾದಲ್ಲಿದ್ದ ಪ್ರಮುಖ ದೃಶ್ಯವೊಂದರ ಬಗ್ಗೆ ಮಾತನಾಡಿದ್ದು, ಬಿಟೌನ್ ವಲಯದಲ್ಲಿ ಸದ್ದು ಮಾಡುತ್ತಿದೆ.
“ಸಿನಿಮಾದಲ್ಲಿ ನನ್ನ(ಬಾಬಿ ಡಿಯೋಲ್) ಹಾಗೂ ರಣ್ಬೀರ್ ಕಪೂರ್ ನಡುವಿನ ಕಿಸ್ಸಿಂಗ್ ಸೀನ್ ವೊಂದಿತ್ತು. ಅದನ್ನು ಥಿಯೇಟರ್ ನಲ್ಲಿ ವರ್ಷನ್ ನಲ್ಲಿ ತೆಗೆಯಲಾಗಿದೆ. ಬಹುಶಃ ಆ ದೃಶ್ಯ ಓಟಿಟಿ ವರ್ಷನ್ ನಲ್ಲಿ ಇರಬಹುದು” ಎಂದು ಅವರು ಹೇಳಿದ್ದಾರೆ.
“ಇಬ್ಬರ ಸಹೋದರರು ಹೊಡೆದಾಡಿಕೊಳ್ಳುತ್ತಾರೆ. ಇಬ್ಬರು ಒಬ್ಬರನ್ನೊಬ್ಬರು ಕೊಲ್ಲಬೇಕೆಂದು ಬಯಸುತ್ತಾರೆ. ಆದರೆ ಅವರಿಬ್ಬರ ನಡುವೆ ಪ್ರೀತಿಯೂ ಇರುತ್ತದೆ. ಫೈಟ್ ನಡುವೆ ಒಮ್ಮೆಗೆ ನೀನು ಅವನಿಗೆ (ರಣ್ಬೀರ್ ಪಾತ್ರಕ್ಕೆ) ಕಿಸ್ ಮಾಡಬೇಕು. ಕಿಸ್ ನಲ್ಲಿರುವಾಗಲೇ ಅವನು ನಿನ್ನನ್ನು( ಅಬ್ರಾರ್) ಕೊಲ್ಲುತ್ತಾನೆ” ಎಂದು ವಂಗಾ ಹೇಳಿದ್ದರು.
“ಅಲ್ಲೊಂದು ಕಿಸ್ಸಿಂಗ್ ಸೀನ್ ಇದೆ. ಬಹುಶಃ ಅದು ಅನ್ ಕಟ್ ನೆಟ್‌ಫ್ಲಿಕ್ಸ್ ಆವೃತ್ತಿಯಲ್ಲಿ ಬರಬಹುದು ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ತಂದೆ – ಮಗನ ʼಅನಿಮಲ್ʼ ಸಿನಿಮಾದಲ್ಲಿ ರಣ್ಬೀರ್ ಕಪೂರ್, ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.