Aamir Khan: 2 ವರ್ಷದ ಬಳಿಕ ಮತ್ತೆ ಬಣ್ಣದ ಲೋಕಕ್ಕೆ ಆಮಿರ್ ಖಾನ್; ಯಾವ ಸಿನಿಮಾ?
Team Udayavani, Aug 29, 2023, 1:13 PM IST
ಮುಂಬಯಿ: ಬಾಲಿವುಡ್ ನಟ ಆಮಿರ್ ಖಾನ್ ʼಲಾಲ್ ಸಿಂಗ್ ಚಡ್ಡಾʼ ಸಿನಿಮಾದ ಬಳಿಕ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ನಟನೆಯಿಂದ ಕೆಲ ಸಮಯ ಬ್ರೇಕ್ ಪಡೆದುಕೊಳ್ಳುವುದಾಗಿ ಅವರು ಈ ಹಿಂದೆ ಹೇಳಿದ್ದರು. ಆದರೆ ಇದೀಗ ಅವರು ಮತ್ತೆ ಬಣ್ಣದ ಲೋಕಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ.
1994 ರ ಹಾಲಿವುಡ್ ಬ್ಲಾಕ್‌ಬಸ್ಟರ್ “ಫಾರೆಸ್ಟ್ ಗಂಪ್” ನ ಹಿಂದಿ ರಿಮೇಕ್ “ಲಾಲ್ ಸಿಂಗ್ ಚಡ್ಡಾ” ದಲ್ಲಿ ಆಮಿರ್ ಖಾನ್ ಕೊನೆಯ ಬಾರಿ ಕಾಣಸಿಕೊಂಡಿದ್ದರು. ಈ ಸಿನಿಮಾದಲ್ಲಿ ಅವರೊಂದಿಗೆ ಕರೀನಾ ಕಪೂರ್ ನಟಿಸಿದ್ದರು.
ಸಿನಿಮಾದ ಬಗ್ಗೆ ಆರಂಭದಲ್ಲಿ ದೊಡ್ಡ ನಿರೀಕ್ಷೆಯಿತ್ತು. ಆದರೆ ರಿಲೀಸ್ ಆದ ಬಳಿಕ ಅಷ್ಟೇ ದೊಡ್ಡಮಟ್ಟದ ನಿರಾಸೆ ಮೂಡಿಸಿತ್ತು. ಬಾಯ್ಕಾಟ್ ಹಾಗೂ ಆಮಿರ್ ಖಾನ್ ಅವರು ಈ ಹಿಂದೆ ನೀಡಿದ್ದ ಕೆಲ ಹೇಳಿಕೆಗಳೊಂದಿಗೆ ಸಿನಿಮಾಕ್ಕೆ ಹಿನ್ನೆಡೆಯಾಗಿತ್ತು. ಇದಲ್ಲದೇ ಸಿನಿಮಾ ತುಂಬಾ ನಿಧಾನಗತಿಯಲ್ಲಿ ಸಾಗುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು.
ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತ ಬಳಿಕ ಓಟಿಟಿಯಲ್ಲಿ ಒಂದಷ್ಟು ಸದ್ದು ಮಾಡಿತ್ತು. ಸಿನಿಮಾ ಸೋಲು ಕಂಡ ಬಳಿಕ ಆಮಿರ್ ಖಾನ್ ನಟನೆಯಿಂದ ಬ್ರೇಕ್ ಪಡೆದು, ಕುಟುಂಬದೊಂದಿಗೆ ಸಮಯ ಕಳೆಯುತ್ತೇನೆ ಎಂದು ಹೇಳಿದ್ದರು.
ಇದನ್ನೂ ಓದಿ: King Nagarjuna 99ನೇ ಸಿನಿಮಾಕ್ಕೆ ಟೈಟಲ್ ಫಿಕ್ಸ್ “ನಾ ಸಾಮಿ ರಂಗ” ಎಂದು ಅಬ್ಬರಿಸಿದ ನಟ
ಇದೀಗ ಆಮಿರ್ ಖಾನ್ ಮತ್ತೆ ಬಣ್ಣದ ಲೋಕ್ಕೆ ಮರಳಿದ್ದಾರೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಆಮಿರ್ ಖಾನ್ 2024 ರ ಕ್ರಿಸ್ಮಸ್ ಗೆ ತಮ್ಮ ಮುಂದಿನ ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ.ಆಮೀರ್ ಖಾನ್ ಪ್ರೊಡಕ್ಷನ್ಸ್ ನಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಇದರ ಟೈಟಲ್ ಇನ್ನು ಅಂತಿಮವಾಗಿಲ್ಲ. 2024 ರ ಡಿಸೆಂಬರ್ 20 ರಂದು ಸಿನಿಮಾ ರಿಲೀಸ್ ಆಗಲಿದೆ. ಸದ್ಯ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಮುಂದಿನ ವರ್ಷದ ಜನವರಿ 20 ರಂದು ಸಿನಿಮಾ ಸಟ್ಟೇರಲಿದೆ ಎಂದು ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ.
ಆಮಿರ್ ಖಾನ್ ಭಾರತೀಯ ವಿಶೇಷ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರ ಜೀವನ ಆಧಾರಿತ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾವನ್ನು ದಿನೇಶ್ ವಿಜಾ ನಿರ್ದೇಶನ ಮಾಡುತ್ತಿದ್ದಾರೆ.
#Xclusiv… AAMIR KHAN LOCKS CHRISTMAS 2024 FOR NEXT FILM… Aamir Khan Productions’ Prod No. 16 [not titled yet],
starring #AamirKhan in the lead role, to release on 20 Dec 2024 #Christmas2024.Pre-production of the film is ongoing and the film goes on floors on 20 Jan 2024…… pic.twitter.com/wAMIvPL60D
— taran adarsh (@taran_adarsh) August 29, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.