![Lalu](https://www.udayavani.com/wp-content/uploads/2025/02/Lalu-2-415x282.jpg)
![Lalu](https://www.udayavani.com/wp-content/uploads/2025/02/Lalu-2-415x282.jpg)
Team Udayavani, Jan 10, 2020, 6:43 PM IST
ಮುಂಬಯಿ: ದಬಾಂಗ್ – 3 ಹಿಟ್ ಆಗಿರುವ ಖುಷಿಯಲ್ಲಿರುವ ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರದ ಹೆಸರನ್ನು ಘೋಷಿಸಿದ್ದಾರೆ. ವಿಶೇಷವೆಂದರೆ ಕಳೆದ ಕೆಲವು ವರ್ಷಗಳಿಂದ ವರ್ಷಕ್ಕೆ ಒಂದೇ ಚಿತ್ರದಲ್ಲಿ ನಟಿಸುತ್ತಿರುವ ಮತ್ತು ತನ್ನ ಚಿತ್ರವನ್ನು ಈದ್ ಮಿಲಾದ್ ದಿನವೇ ಬಿಡುಗಡೆ ಮಾಡುತ್ತಿರುವ ಸಲ್ಲು ಭಾಯ್ ತನ್ನ ಹೊಸ ಚಿತ್ರದ ಟೈಟಲನ್ನು ಟ್ವಿಟ್ಟರ್ ಮೂಲಕ ರಿವೀಲ್ ಮಾಡಿ ಅಭಿಮಾನಿಗಳಿಗೆ ಸರ್ಪೈಸ್ ನೀಡಿದ್ದಾರೆ.
ಅಂದ ಹಾಗೆ ಮುಂದಿನ ವರ್ಷದ ಈದ್ ಮಿಲಾದ್ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವ ಸಲ್ಲು ಹೊಸ ಸಿನೇಮಾದ ಟೈಟಲ್ಲೇ ಬಹಳ ಕ್ಯಾಚಿಯಾಗಿದೆ. ‘ಕಭೀ ಈದ್ ಕಭೀ ದಿವಾಳಿ’ ಎಂಬ ಹೆಸರಿನ ಈ ಚಿತ್ರ ಒಂದೊಳ್ಳೆ ಎಂಟರ್ಟೈನ್ ಮೆಂಟ್ ಪ್ಯಾಕ್ ಆಗಲಿದೆ ಎಂಬ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.
Announcing my next film… KABHI EID KABHI DIWALI ….
STORY & PRODUCED BY SAJID NADIADWALA …
DIRECTED by FARHAD SAMJI…EID 2021 … #SajidNadiadwala @NGEMovies @farhad_samji @WardaNadiadwala @SKFilmsOfficial
— Salman Khan (@BeingSalmanKhan) January 10, 2020
ಸಲ್ಮಾನ್ ಖಾನ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಸಾಜಿದ್ – ಫರ್ಹಾದ್ ಖ್ಯಾತಿಯ ಜೋಡಿಯಲ್ಲಿ ಒಬ್ಬರಾದ ಫರ್ಹಾದ್ ಸಮ್ಜೀ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಕಥೆ ಸಾಜಿದ್ ನಾಡಿಯಾಡ್ವಾಲಾ ಅವರದ್ದಾಗಿದ್ದು, ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಪ್ರಭುದೇವ ನಿರ್ದೆಶನದ ದಬಾಂಗ್ – 3 ಚಿತ್ರವು ಈವರೆಗೆ ಒಟ್ಟಾರೆಯಾಗಿ 135 ಕೋಟಿ ಕಲೆಕ್ಷನ್ ಮಾಡಿದೆ. ಸಲ್ಮಾನ್ ಖಾನ್ ಪೊಲೀಸ್ ಪಾತ್ರದಲ್ಲಿ ಮಿಂಚಿರುವ ಈ ಚಿತ್ರದಲ್ಲಿ ಸಲ್ಲುಗೆ ಎದುರಾಗಿ ಕಿಚ್ಚ ಸುದೀಪ್ ಅವರು ಜಬರ್ದಸ್ತ್ ನಟನೆ ಮಾಡಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.