ಮುರಿದು ಬಿದ್ದ ನಟಿ ಕೀರ್ತಿ ಕುಲ್ಹಾರಿ ದಾಂಪತ್ಯ ಜೀವನ..!
Team Udayavani, Apr 1, 2021, 3:59 PM IST
ಮುಂಬೈ : ಬಾಲಿವುಡ್ ನಟಿ ಕೀರ್ತಿ ಕುಲ್ಹಾರಿ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ. ತನ್ನ ಗಂಡ ಹಾಗೂ ನಟ ಸಾಹಿಲ್ ಸೆಹ್ಗಲ್ ಅವರ ಜತೆಗಿನ ವೈವಾಹಿಕ ಸಂಬಂಧಕ್ಕೆ ನಟಿಮಣಿ ಫುಲ್ ಸ್ಟಾಪ್ ಹೇಳಿದ್ದಾರೆ.
2016 ರಲ್ಲಿ ಕೀರ್ತಿ ಹಾಗೂ ಸಾಹಿಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ಐದು ವರ್ಷಗಳಿಂದ ಈ ತಾರೆಯರ ಸಂಸಾರಿಕ ಜೀವನ ಸುಖಮಯವಾಗಿಯೆ ಸಾಗಿತ್ತು. ಆದರೆ, ಇದೀಗ ಏಕಾಏಕಿ ಪತಿಯಿಂದ ದೂರವಾಗುತ್ತಿರುವ ವಿಚಾರವನ್ನು ಕೀರ್ತಿ ಬಹಿರಂಗ ಪಡಿಸಿದ್ದು, ಅವರ ಆಪ್ತ ವಲಯ ಹಾಗೂ ಅಭಿಮಾನಿಗಳಲ್ಲಿ ಆಘಾತವನ್ನುಂಟು ಮಾಡಿದೆ.
View this post on Instagram
ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಚ್ಛೇದನದ ಬಗ್ಗೆ ಹೇಳಿಕೊಂಡಿರುವ ಕೀರ್ತಿ, ಪರಸ್ಪರ ಸಮ್ಮತಿಯ ಮೇರೆಗೆ ನಾವಿಬ್ಬರು ಬೇರೆ ಬೇರೆಯಾಗುತ್ತಿದ್ದೇವೆ. ಇದು ಕೇವಲ ಪೇಪರ್ ಮೇಲೆ ( ಡಿವೋರ್ಸ್ ಪತ್ರ) ಅಲ್ಲ, ನಿಜ ಜೀವನದಲ್ಲಿಯೂ ದೂರಾಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇವರ ದಾಂಪತ್ಯದಲ್ಲಿ ಬಿರುಕು ಮೂಡಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.
View this post on Instagram
ಇನ್ನು ಕೀರ್ತಿ ಕುಲ್ಹಾರಿ ಫೋರ್ ಮೋರ್ ಶಾಟ್ಸ್ ಪ್ಲೀಸ್ ಹಾಗೂ ಬಾರ್ಡ್ ಆಫ್ ಬ್ಲಡ್ ಸೇರಿದಂತೆ ಹಲವು ವೆಬ್ ಸಿರೀಸ್ಗಳಲ್ಲಿ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.