‘ಮುಂದಿನ ಸಿನಿಮಾದಲ್ಲಿ ಚಾನ್ಸ್ ಕೊಡಿ’:ಆಲಿಯಾ ಬಳಿ ಅವಕಾಶ ಕೇಳಿದ ನಟ ಶಾರುಖ್ ಖಾನ್
Team Udayavani, Jul 4, 2021, 4:45 PM IST
ಮುಂಬೈ : ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರು ನಟಿ ಹಾಗೂ ನಿರ್ಮಾಪಕಿ ಆಲಿಯಾ ಭಟ್ ಅವರ ಬಳಿ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಆಲಿಯಾ ಕೂಡ ರಿಯಾಕ್ಟ್ ಮಾಡಿದ್ದಾರೆ.
ಆಲಿಯಾ ಭಟ್ ‘ಡಾರ್ಲಿಂಗ್ಸ್’ ಶೀರ್ಷಿಕೆಯ ಹೊಸ ಚಿತ್ರದಲ್ಲಿ ನಟನೆಯ ಜೊತೆ ನಿರ್ಮಾಪಕಿಯೂ ಆಗಿದ್ದಾರೆ. ಆ ಚಿತ್ರದ ಮೊದಲ ದಿನದ ಚಿತ್ರೀಕರಣದ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದಕ್ಕೆ ಕಮೆಂಟ್ ಮಾಡಿರುವ ಶಾರುಖ್ ಅವರು, ‘ಈ ಸಿನಿಮಾ ಆದ ಬಳಿಕ ನಿಮ್ಮ ಹೋಮ್ ಪ್ರೊಡಕ್ಷನ್ನಲ್ಲಿ ಬರುವ ಮುಂದಿನ ಸಿನಿಮಾದಲ್ಲಿ ನನಗೊಂದು ಚಿಕ್ಕ ಅವಕಾಶ ಕೊಡಿ. ಸರಿಯಾದ ಸಮಯಕ್ಕೆ ನಾನು ಶೂಟಿಂಗ್ಗೆ ಬರುತ್ತೇನೆ. ತುಂಬ ಪ್ರೊಫೆಷನಲ್ ಆಗಿ ಇರುತ್ತೇನೆ. ಈ ಬಗ್ಗೆ ಪ್ರಾಮಿಸ್ ಮಾಡುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
After this production please sign me up for your next home production little one. I will come in time for the shoot and be very professional..promise! https://t.co/rXzha7LmZR
— Shah Rukh Khan (@iamsrk) July 3, 2021
ಶಾರುಖ್ ಮಾಡಿದ ಟ್ವೀಟ್ಗೆ ಆಲಿಯಾ ಕೂಡಲೇ ಉತ್ತರಿಸಿದ್ದಾರೆ. ‘ಹಹ್ಹಹ್ಹ.. ಇದಕ್ಕಿಂತ ಹೆಚ್ಚು ನಾನು ಏನ್ನನ್ನೂ ಕೇಳಲು ಸಾಧ್ಯವಿಲ್ಲ. ಆಯಿತು, ಒಪ್ಪಂದಕ್ಕೆ ಸಹಿ ಮಾಡಿದ್ದೇನೆ. ಲವ್ ಯೂ ಮೈ ಫೇವರಿಟ್’ ಎಂದು ಆಲಿಯಾ ಪ್ರತಿಕ್ರಿಯಿಸಿದ್ದಾರೆ.
hahaha I could ask for nothing more.. done deal signed! Love you my favourite ? https://t.co/mW5fIXCwff
— Alia Bhatt (@aliaa08) July 3, 2021
ಅಂದಹಾಗೆ ಈ ತಾರೆಯರ ನಡುವೆ ನಡೆದ ಟ್ವೀಟ್ ಸಂಭಾಷಣೆ ಕೇವಲ ತಮಾಷೆಗಾಗಿ ಮಾತ್ರ. ಯಾಕಂದರೆ ಈ ಚಿತ್ರಕ್ಕೆ ಶಾರುಖ್ ಪತ್ನಿ ಗೌರಿ ಖಾನ್ ಕೂಡ ಹಣ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Life threat: ಸಲ್ಮಾನ್ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು
ನಾನೇ ಇಂಡಿಯಾ..ನಾನೇ ಕ್ಯಾಬಿನೆಟ್.. ʼಎಮರ್ಜೆನ್ಸಿʼಯಲ್ಲಿ ಇಂದಿರಾ ಗಾಂಧಿಯಾಗಿ ಮಿಂಚಿದ ಕಂಗನಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.