ʼಎಮರ್ಜೆನ್ಸಿʼ ಚಿತ್ರವೂ ಫ್ಲಾಪ್.. ಸತತ 11ನೇ ಸೋಲಿನಿಂದ ಕೆಂಗೆಟ್ಟ ʼಕ್ವೀನ್‌ʼ ಕಂಗನಾ

Team Udayavani, Jan 30, 2025, 6:55 PM IST

ʼಎಮರ್ಜೆನ್ಸಿʼ ಚಿತ್ರವೂ ಫ್ಲಾಪ್.. ಸತತ 11ನೇ ಸೋಲಿನಿಂದ ಕೆಂಗೆಟ್ಟ ʼಕ್ವೀನ್‌ʼ ಕಂಗನಾ

ಮುಂಬಯಿ: ಸಿನಿಮಾರಂಗ ಒಂದು ಅದೃಷ್ಟದ ವೇದಿಕೆ. ಇಲ್ಲಿ ಸೋಲು – ಗೆಲುವು ಎನ್ನುವುದು ಯಾವ ಸಂದರ್ಭದಲ್ಲಿ ಬರುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಒಬ್ಬ ಕಲಾವಿದನಿಗೆ ಸಿನಿಮಾದ ಸೋಲು ಹಾಗೂ ಗೆಲುವು ಎರಡನೂ ಸಮಾನವಾಗಿ ಸ್ವೀಕರಿಸಿಕೊಂಡು ಹೋಗುವ ಸಾಮಾರ್ಥ್ಯವಿರಬೇಕು.

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಸತತ ಗೆಲುವು ಕಾಣುತ್ತಿದ್ದ ಖ್ಯಾತ ಸೂಪರ್‌ ಸ್ಟಾರ್‌ ನಟರು ನಿರಂತರ ಫ್ಲಾಪ್ ಚಿತ್ರವನ್ನು ನೀಡಿರುವ ಎಷ್ಟೋ ಉದಾಹರಣೆ ಚಿತ್ರರಂಗದಲ್ಲಿ ಕಾಣಸಿಗುತ್ತದೆ. ಅಕ್ಷಯ್‌ ಕುಮಾರ್‌, ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌, ಆಮೀರ್‌ ಖಾನ್ ಬಾಲಿವುಡ್‌ ಚಿತ್ರರಂಗದ ಸೂಪರ್‌ ಸ್ಟಾರ್‌ ನಟರು. ಆದರೆ ಈ ನಟರ ಹಲವು ಸಿನಿಮಾಗಳ ಕಳೆದ ಕೆಲ ವರ್ಷಗಳಿಂದ ಸೋಲು ಕಾಣುತ್ತಾ ಬಂದಿದೆ.

ಶಾರುಖ್‌ ಖಾನ್‌ ಹ್ಯಾಟ್ರಿಕ್‌ ಸೋಲಿನ ಬಳಿಕ ʼಪಠಾಣ್‌ʼ, ʼಜವಾನ್‌ʼ ಹಾಗೂ ʼಡಂಕಿʼ ಮೂಲಕ ಕಂಬ್ಯಾಕ್‌ ಮಾಡಿದ್ದಾರೆ. ಆದರೆ ಇಲ್ಲೊಬ್ಬ ಖ್ಯಾತ ನಟಿಯ 11 ಚಿತ್ರಗಳು ಸತತವಾಗಿ ಸೋಲು ಕಂಡಿದೆ.

ಕಂಗನಾ ರಣಾವತ್‌ (Kangana Ranaut) 2006ರಲ್ಲಿ ʼಗ್ಯಾಂಗ್‌ ಸ್ಟರ್‌ʼ ಎನ್ನುವ ಚಿತ್ರದ ಮೂಲಕ ಬಿಟೌನ್ ಗೆ ಎಂಟ್ರಿ ಕೊಟ್ಟ ಮಾದಕ ನಟಿ. ಬೋಲ್ಡ್‌ ಲುಕ್‌ನಲ್ಲಿ ಮೋಡಿ ಮಾಡಿದ ಕಂಗನಾ ಆರಂಭಿಕ ದಿನಗಳಲ್ಲಿ ʼಫ್ಯಾಷನ್ʼ, ʼತನು ವೆಡ್ಸ್ ಮನುʼ ಚಿತ್ರದಲ್ಲಿ ಮಿಂಚಿ ʼಕ್ವೀನ್‌ʼ , ʼಮಣಿಕರ್ಣಿಕಾʼ ದಂತಹ ಸಿನಿಮಾಗಳ ಅಭಿನಯದಿಂದ ರಾಷ್ಟ್ರ ಪ್ರಶಸ್ತಿಯನ್ನು ಪಡೆದುಕೊಂಡ ನಟಿ.

ಆದರೆ ರಾಷ್ಟ್ರ ಪ್ರಶಸ್ತಿ ಪಡೆದ ನಟಿಯಾಗಿ ಗುರುತಿಸಿಕೊಂಡಿದ್ದ ಕಂಗನಾ ಈಗ ಸೋಲಿನ ಸರಪಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಸತತ ಸೋಲಿನಿಂದ ಅವರ ಸಿನಿಮಾಗಳು ಹೀನಾಯ ಪ್ರದರ್ಶನ ಕಾಣುತ್ತಿದೆ.

ʼಎಮರ್ಜೆನ್ಸಿʼ ಫ್ಲಾಪ್..‌ ಸತತ 11ನೇ ಸೋಲು ಕಂಡ ಕಂಗನಾ:  

ಕಳೆದ 10 ವರ್ಷದಲ್ಲಿ ಕಂಗನಾ 10 ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಸಿನಿಮಾಗಳು ಪ್ರೇಕ್ಷಕರ ಪ್ರೀತಿ – ಪ್ರೋತ್ಸಾಹವನ್ನು ಪಡೆದಿಲ್ಲ. ʼಇಂದಿರಾ ಗಾಂಧಿʼ ಪಾತ್ರದಲ್ಲಿ ಕಾಣಿಸಿಕೊಂಡ ʼಎಮರ್ಜೆನ್ಸಿʼ ಚಿತ್ರ  ವರ್ಲ್ಡ್‌ ವೈಡ್‌ ನಲ್ಲಿ ಗಳಿಕೆ ಕಂಡದ್ದು ಕೇವಲ 22 ಕೋಟಿ ರೂಪಾಯಿಯನ್ನಷ್ಟೇ. ಆ ಮೂಲಕ ಇದು ಕಂಗನಾ ಅವರಿಗೆ ಎದುರಾದ ಸತತ 11ನೇ ಸೋಲಾಗಿದೆ.

2023ರಲ್ಲಿ ಕಂಗನಾ ʼತೇಜಸ್‌ʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಹೀನಾಯವಾಗಿ ಸೋಲು ಕಂಡಿತು. ʼಢಾಕಡ್ʼ (2022), ʼತಲೈವಿʼ (2021), ʼರಂಗೂನ್ʼ (2017),  ʼಐ ಲವ್ NYʼ (2015) ಚಿತ್ರಗಳು ಸೋಲು ಕಂಡಿತು.

ಇದರ ಜತೆ ʼಪಂಗಾʼ (2020), ʼಜಡ್ಜ್‌ಮೆಂಟಲ್ ಹೈ ಕ್ಯಾʼ (2019), ʼಸಿಮ್ರಾನ್ʼ (2017), ಮತ್ತು ʼಕಟ್ಟಿ ಬಟ್ಟಿʼ (2015) ಚಿತ್ರಗಳು ಸಹ ಹೀನಾಯವಾಗಿ ಸೋತಿತು. ಈ ನಡುವೆ ಬಂದಿದ್ದ ʼಮಣಿಕರ್ಣಿಕಾʼ ಮಾತ್ರ ಸಾಧಾರಣವಾಗಿ ಪ್ರೇಕ್ಷಕರ ಗಮನ ಸೆಳೆದಿತ್ತು.

ಸೋಲಿನಿಂದ ಕೆಂಗೆಟ್ಟಿರುವ ಕಂಗನಾ ಮುಂದೆ ʼಭಾರತ ಭಾಗ್ಯ ವಿಧಾತʼ ʼಕ್ವೀನ್- 2‌ʼ ಮೂಲಕ ಕಂಬ್ಯಾಕ್‌ ಮಾಡುವ ತಯಾರಿಯಲ್ಲಿದ್ದಾರೆ.

ಟಾಪ್ ನ್ಯೂಸ್

ನಾಗಾ ಸಾಧುಗಳ ನಾಯಕ ಅವಧೇಶಾನಂದ ಗಿರಿ ಮಹಾರಾಜರಿಗೆ ಆದಿಚುಂಚನಗಿರಿ ವಿಜ್ಞಾತಂ ಪುರಸ್ಕಾರ

ನಾಗಾ ಸಾಧುಗಳ ನಾಯಕ ಅವಧೇಶಾನಂದ ಗಿರಿ ಮಹಾರಾಜರಿಗೆ ಆದಿಚುಂಚನಗಿರಿ ವಿಜ್ಞಾತಂ ಪುರಸ್ಕಾರ

1-swati

Delhi; ರೇಖಾ ಗುಪ್ತಾ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾದ ಸ್ವಾತಿ ಮಲಿವಾಲ್

1-aas

OTT platforms; ನೀತಿಸಂಹಿತೆಗೆ ಬದ್ಧರಾಗಿರಿ: ಅಶ್ಲೀ*ಲ ಜೋಕ್ ಗಳ ವಿರುದ್ಧ ಕೇಂದ್ರ ಎಚ್ಚರಿಕೆ

Mollywood: ‘ದೃಶ್ಯಂ -3ʼ ಬರುವುದು ಅಧಿಕೃತ.. ಮೋಹನ್‌ ಲಾಲ್‌ ಕೊಟ್ರು ಬಿಗ್‌ ಅಪ್ಡೇಟ್

Mollywood: ‘ದೃಶ್ಯಂ -3ʼ ಬರುವುದು ಅಧಿಕೃತ.. ಮೋಹನ್‌ ಲಾಲ್‌ ಕೊಟ್ರು ಬಿಗ್‌ ಅಪ್ಡೇಟ್

Tourist Place: ಸಾಂಪ್ರದಾಯಿಕ ಸೌಂದರ್ಯದ ವಾರಾಣಸಿಯ ಹತ್ತು ಪ್ರಸಿದ್ಧ ಪ್ರವಾಸಿ ತಾಣಗಳು…

Tourist Place: ಸಾಂಪ್ರದಾಯಿಕ ಸೌಂದರ್ಯದ ವಾರಾಣಸಿಯ ಹತ್ತು ಪ್ರಸಿದ್ಧ ಪ್ರವಾಸಿ ತಾಣಗಳು…

Shabhash Baddimagne Movie releasing soon

Shabhash Baddimagne Movie: ಪ್ರಮೋದ್‌ ಈಗ ಸೊಂಬೇರಿ ಪೊಲೀಸ್!‌

Vijayapura: Police operation against microloan, usury business

Vijayapura: ಕಿರುಸಾಲ, ಬಡ್ಡಿ ವ್ಯವಹಾರದ ವಿರುದ್ಧ ಪೊಲೀಸ್ ಕಾರ್ಯಾಚರಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ಸೆಟ್ಟೇರುವ ಮುನ್ನವೇ ನಿಂತು ಹೋಗುತ್ತಾ ವೈರಲ್‌ ಹುಡುಗಿ ಮೊನಾಲಿಸಾಳ ಸಿನಿಮಾ?

Bollywood: ಸೆಟ್ಟೇರುವ ಮುನ್ನವೇ ನಿಂತು ಹೋಗುತ್ತಾ ವೈರಲ್‌ ಹುಡುಗಿ ಮೊನಾಲಿಸಾಳ ಸಿನಿಮಾ?

Bollywood Movie: ಕರಣ್‌ ಜೋಹರ್‌ ಸಿನಿಮಾದಲ್ಲಿ ಟಾಲಿವುಡ್‌ ಸ್ಟಾರ್‌ ವಿಜಯ್‌ ದೇವರಕೊಂಡ

Bollywood Movie: ಕರಣ್‌ ಜೋಹರ್‌ ಸಿನಿಮಾದಲ್ಲಿ ಟಾಲಿವುಡ್‌ ಸ್ಟಾರ್‌ ವಿಜಯ್‌ ದೇವರಕೊಂಡ

10

Bollywood: ಮರಾಠ ಸಾಮ್ರಾಟನಾದ ರಿಷಬ್‌: ʼಶಿವಾಜಿʼ ಜನ್ಮದಿನಕ್ಕೆ ಫಸ್ಟ್‌ ಲುಕ್‌ ರಿವೀಲ್

Bollywood: ‌ʼಛಾವಾʼ ಕ್ರೇಜ್.. ಸಂಭಾಜಿ ಮಹಾರಾಜನಂತೆ ಕುದುರೆ ಏರಿ ಥಿಯೇಟರ್‌ಗೆ ಬಂದ ವ್ಯಕ್ತಿ

Bollywood: ‌ʼಛಾವಾʼ ಕ್ರೇಜ್.. ಸಂಭಾಜಿ ಮಹಾರಾಜನಂತೆ ಕುದುರೆ ಏರಿ ಥಿಯೇಟರ್‌ಗೆ ಬಂದ ವ್ಯಕ್ತಿ

‌Bollywood: ರಿಷಬ್‌ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್‌ ಅಪ್ಡೇಟ್   

‌Bollywood: ರಿಷಬ್‌ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್‌ ಅಪ್ಡೇಟ್  

MUST WATCH

udayavani youtube

ಮಠ ಗುರುಪ್ರಸಾದ್ ಕೊನೇ ಕಾಲ್ ಆಡಿಯೋ | ಪತ್ನಿಗೆ ಹೇಳಿದ್ದೇನು ?

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

ಹೊಸ ಸೇರ್ಪಡೆ

ಪರಶುರಾಮ ಮೂರ್ತಿ ವಿವಾದ; ಅಷ್ಟಮಂಗಲ ಪ್ರಶ್ನೆ ನಡೆಸಲು ಸಲಹೆ: ಮುನಿಯಾಲು ಉದಯ ಕುಮಾರ್‌ ಶೆಟ್ಟಿ

ಪರಶುರಾಮ ಮೂರ್ತಿ ವಿವಾದ; ಅಷ್ಟಮಂಗಲ ಪ್ರಶ್ನೆ ನಡೆಸಲು ಸಲಹೆ: ಮುನಿಯಾಲು ಉದಯ ಕುಮಾರ್‌ ಶೆಟ್ಟಿ

amaravathi police station movie

Amaravathi Police Station Movie: ಅಮರಾವತಿಯಿಂದ ಟೀಸರ್‌ ಬಂತು

ನಾಗಾ ಸಾಧುಗಳ ನಾಯಕ ಅವಧೇಶಾನಂದ ಗಿರಿ ಮಹಾರಾಜರಿಗೆ ಆದಿಚುಂಚನಗಿರಿ ವಿಜ್ಞಾತಂ ಪುರಸ್ಕಾರ

ನಾಗಾ ಸಾಧುಗಳ ನಾಯಕ ಅವಧೇಶಾನಂದ ಗಿರಿ ಮಹಾರಾಜರಿಗೆ ಆದಿಚುಂಚನಗಿರಿ ವಿಜ್ಞಾತಂ ಪುರಸ್ಕಾರ

1-swati

Delhi; ರೇಖಾ ಗುಪ್ತಾ ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾದ ಸ್ವಾತಿ ಮಲಿವಾಲ್

7(1

Kundapura: ಶಿಥಿಲಗೊಂಡ ಕರ್ಕಿ ಅಂಗನವಾಡಿ ಕಟ್ಟಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.