![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Dec 7, 2020, 9:00 PM IST
ಮುಂಬೈ: ಕೇಂದ್ರದ ಕೃಷಿ ನೀತಿ ವಿರೋಧಿಸಿ ನಡೆಯುತ್ತಿರುವ ರೈತ ಚಳವಳಿಗೆ ವಿಶ್ವದೆಲ್ಲೆಡೆ ಸ್ಪಂದನೆ ದೊರೆಯುತ್ತಿದೆ. ಈ ನಡುವೆ ಇದೀಗ ಈ ಚಳುವಳಿಯಲ್ಲಿ ರೈತರ ಬೆನ್ನಿಗೆ ಚಿತ್ರರಂಗವೂ ನಿಂತುಕೊಂಡಿದೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ,ಸೋನಮ್ ಕಪೂರ್ ಒಳಗೊಂಡಂತೆ ಹಲವಾರು ನಟ ನಟಿಯರು ರೈತರ ಪರ ದನಿ ಎತ್ತಿದ್ದಾರೆ.
ರೈತ ಚಳುವಳಿಯ ಕುರಿತಾಗಿ ಟ್ವೀಟ್ ಮಾಡಿರುವ ನಟಿ ಪ್ರಿಯಾಂಕಾ ಚೋಪ್ರಾ ನಮ್ಮ ರೈತರು ನಮ್ಮ ದೇಶದ ಆಹಾರ ಸೇನಾನಿಗಳು. ಅವರ ಸಮಸ್ಯೆಗಳು ಈಡೇರಬೇಕು. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆದಷ್ಟು ಶೀರ್ಘವಾಗಿ ರೈತರ ಸಮಸ್ಯೆ ಬಗೆಹರಿಯಲಿ ಎಂದು ಹೇಳಿದ್ದಾರೆ.
ಇನ್ನೋರ್ವ ಬಾಲಿವುಡ್ ನಟಿ ಸೋನಮ್ ಕಪೂರ್ ಕೂಡಾ ರೈತ ಚಳವಳಿಯ ಕುರಿತಾಗಿ ಬೆಂಬಲ ವ್ಯಕ್ತ ಪಡಿಸಿದ್ದು, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೈತರ ಚಳವಳಿಯ ಕೆಲವು ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಬೇಸಾಯ ಆರಂಭವಾದಾಗ ಇತರ ಕಲೆಗಳು ಅನುಸರಿಸುತ್ತವೆ. ಆದ್ದರಿಂದ ರೈತರು ಮಾನವ ನಾಗರೀಕತೆಯ ಹರಿಕಾರರು ಎಂಬ ‘ಡೇನಿಯಲ್ ವೆಸ್ ಸ್ಟರ್’ ಅವರ ಸಾಲುಗಳನ್ನು ಬಳಸಿಕೊಂಡಿದ್ದಾರೆ.
ಇದನ್ನೂ ಓದಿ:ವಾಹನ ಚಾಲಕರ ಮೇಲೆ ಕ್ಯಾಮೆರಾ ಕಣ್ಣು
ಜೊತೆಗೆ ಇನ್ನೂ ಹಲವು ಬಾಲಿವುಡ್ ನಟರು ರೈತರ ಬೆಂಬಲಕ್ಕೆ ನಿಂತಿದ್ದು ಖ್ಯಾತ ನಟ ಹಾಗೂ ಗಾಯಕ ಆಗಿರುವ ದಿಲ್ಜಿತ್ ದೋಸಾಂಜ್ ದೆಹಲಿಯ ಗಡಿಭಾಗದಲ್ಲಿ ರೈತರ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಈ ಮೂಲಕ ನಾವು ಸರ್ಕಾರದ ಜೊತೆ ಮನವಿ ಮಾಡಿಕೊಳ್ಳುತ್ತಿರುವುದು ಒಂದೆ. ದಯವಿಟ್ಟು ನಮ್ಮ ರೈತರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ ಎಂದಿದ್ದಾರೆ. ಇನ್ನು ನಟ ರಿತೇಶ್ ದೇಶ್ಮುಖ್ ಕೂಡಾ ನಾವು ತಿನ್ನುತ್ತಿರುವ ಆಹಾರ ರೈತರಿಂದ ಸಿಕ್ಕಿದ್ದು ಅವರಿಗೆ ಧನ್ಯವಾದ ಸಲ್ಲಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.