‘ವಾವ್.. ನನ್ನ ಬಾಯಿ ಮುಚ್ಚಿಸುವ ಪ್ರಯತ್ನಕ್ಕೆ ಇಷ್ಟು ಸಮಯ ವ್ಯಯಿಸಿದಿರಲ್ಲಾ…’!: ಅನುರಾಗ್
ನಟಿ ಪಾಯಲ್ ಘೋಷ್ ಮಾಡಿದ ಲೈಂಗಿಕ ಕಿರುಕುಳ ಆರೋಪಕ್ಕೆ ನಿರ್ದೇಶಕ ಅನುರಾಗ್ ಕಶ್ಯಪ್ ತಿರುಗೇಟು
Team Udayavani, Sep 20, 2020, 12:06 PM IST
ಮುಂಬಯಿ: ಬಾಲಿವುಡ್ ನಲ್ಲಿ ತಾರಾ ಸಮರ ಜೋರಾಗಿದೆ.
ನಿರ್ದೇಶಕ ಮತ್ತು ಬರಹಗಾರ ಅನುರಾಗ್ ಕಶ್ಯಪ್ ಮೇಲೆ ನಟಿ ಪಾಯಲ್ ಘೋಷ್ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಇದೀಗ ಅನುರಾಗ್ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
‘ಅವರು ನನ್ನ ಮೇಲೆ ಬಲಾತ್ಕಾರದ ಪ್ರಯತ್ನ ಮಾಡಿದ್ದಾರೆ ಹಾಗೂ ತುಂಬಾ ಕೆಟ್ಟದಾಗಿ ವರ್ತಿಸಿದ್ದಾರೆ’ ಎಂದು ಟಿವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ಪಾಯಲ್, ಬಳಿಕ ತನಗೆ ನ್ಯಾಯ ಕೊಡಿಸುವಂತೆ ಪ್ರಧಾನ ಮಂತ್ರಿಗಳನ್ನು ವಿನಂತಿಸಿಕೊಂಡಿದ್ದಳು.
ಇದನ್ನೂ ಓದಿ: ‘Mr. Rascal’ನ ನಟಿ ಯಾರೀಕೆ ‘ಊಸರವಳ್ಳಿ’ ಪಾಯಲ್ ಘೋಷ್?
‘ಈ ಕ್ರಿಯಾಶೀಲ ವ್ಯಕ್ತಿಯ ಹಿಂದೆ ಅಡಗಿಕೊಂಡಿರುವ ರಾಕ್ಷಸೀ ಪ್ರವೃತ್ತಿಯನ್ನು ದೇಶವೇ ನೋಡಲಿ ದಯವಿಟ್ಟು ಈ ಕುರಿತಾಗಿ ಕ್ರಮ ಕೈಗೊಳ್ಳಿ. ಇದರಿಂದ ನನಗೆ ತೊಂದರೆಯಾಗಬಹುದೆಂದೂ ನನಗೆ ತಿಳಿದಿದೆ ಹಾಗೂ ನನ್ನ ಸುರಕ್ಷತೆಯೂ ಅಪಾಯದಲ್ಲಿದೆ ಎಂಬ ಅರಿವೂ ನನಗಿದೆ. ದಯವಿಟ್ಟು ಸಹಾಯ ಮಾಡಿ’ ಎಂದು ನಟಿ ಪಾಯಲ್ ಘೋಷ್ ಅವರು ಪ್ರಧಾನ ಮಂತ್ರಿ ಕಛೇರಿಯನ್ನು ಮತ್ತು ಸ್ವತಃ ನರೇಂದ್ರ ಮೋದಿ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.
@anuragkashyap72 has forced himself on me and extremely badly. @PMOIndia @narendramodi ji, kindly take action and let the country see the demon behind this creative guy. I am aware that it can harm me and my security is at risk. Pls help! https://t.co/1q6BYsZpyx
— Payal Ghosh (@iampayalghosh) September 19, 2020
ಇದೀಗ ಪಾಯಲ್ ಅವರ ಈ ಗಂಭೀರ ಆರೋಪದ ಟ್ವೀಟ್ ಗೆ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಸರಣಿ ಟ್ವೀಟ್ ಮೂಲಕ ತಿರುಗೇಟು ನಿಡಿದ್ದಾರೆ.
ಇದನ್ನೂ ಓದಿ: ಅಡ್ವಾಣಿ ಎದುರು ಸ್ಪರ್ಧೆ, 15 ವರ್ಷದ ನಟಿ ಜತೆ ಸೂಪರ್ ಸ್ಟಾರ್ ವಿವಾಹ! ಪ್ರಿಯತಮೆ ಮುನಿಸು
‘ಕ್ಯಾ ಬಾತ್ ಹೈ, ಇತ್ ನೇ ಸಮಯ್ ಲಗಾಯ ಮುಝ್ಹೇ ಕರ್ವಾನೆ ಕಿ ಕೋಶಿಶ್ ಮೇ..’ ಎಂದು ಪ್ರಾರಂಭವಾಗುವ ಟ್ವೀಟ್ ನಲ್ಲಿ ಕಶ್ಯಪ್ ಅವರು ಪಾಯಲ್ ಮಾಡಿರುವ ಈ ಲೈಂಗಿಕ ಕಿರುಕುಳ ಆರೋಪದ ಹಿಂದೆ ಕಾಣದ ಕೈಗಳ ಕೈವಾಡವಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
क्या बात है , इतना समय ले लिया मुझे चुप करवाने की कोशिश में । चलो कोई नहीं ।मुझे चुप कराते कराते इतना झूठ बोल गए की औरत होते हुए दूसरी औरतों को भी संग घसीट लिया। थोड़ी तो मर्यादा रखिए मैडम। बस यही कहूँगा की जो भी आरोप हैं आपके सब बेबुनियाद हैं ।१/४
— Anurag Kashyap (@anuragkashyap72) September 19, 2020
‘ವಾವ್.., ನನ್ನ ಬಾಯಿಯನ್ನು ಮುಚ್ಚಿಸುವ ಪ್ರಯತ್ನದಲ್ಲಿ ನೀವು ಇಷ್ಟೊಂದು ಸಮಯವನ್ನು ವ್ಯಯಿಸಿದಿರಾ? ಹೋಗ್ಲಿ ಬಿಡಿ. ನನ್ನ ಬಾಯಿ ಮುಚ್ಚಿಸುವ ಪ್ರಯತ್ನದಲ್ಲಿ, ನೀವೊಬ್ಬರು ಮಹಿಳೆಯಾಗಿದ್ದೂ ಹಲವು ಮಹಿಳೆಯರ ಹೆಸರನ್ನು ಈ ಪ್ರಕರಣದಲ್ಲಿ ಎಳೆದು ತಂದಿದ್ದೀರಿ. ಒಂದು ಮಿತಿ ಇರಲಿ ಮೇಡಂ. ನಾನು ಇಷ್ಟನ್ನೇ ಹೇಳಲು ಬಯಸುತ್ತೇನೆ, ಏನೆಲ್ಲಾ ಆರೋಪಗಳಿವೆಯೋ, ಅವೆಲ್ಲವೂ ನಿರಾಧಾರವಾದುದಾಗಿದೆ’.
ಇದನ್ನೂ ಓದಿ: ಉತ್ತರೆಯ ಆರ್ಭಟಕ್ಕೆ ಕರಾವಳಿ ತತ್ತರ: ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.