Bollywood: ರಿಲೀಸ್‌ಗೂ ಮುನ್ನವೇ ಕಂಗನಾ ʼಎಮರ್ಜೆನ್ಸಿʼಗೆ ಬ್ಯಾನ್ ಬಿಸಿ; ಕಾರಣವೇನು
Team Udayavani, Jan 15, 2025, 12:59 PM IST
ಮುಂಬಯಿ: ನಟಿ ಕಂಗನಾ ರಣಾವತ್ (Kangana ranaut) ನಟಿಸಿ, ನಿರ್ದೇಶಿಸಿರುವ ʼಎಮರ್ಜೆನ್ಸಿʼ (Emergency Movie) ಚಿತ್ರ ರಿಲೀಸ್ ಗೆ ಸಿದ್ಧವಾಗಿದೆ.
ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಅವರ ರಾಜಕೀಯ ಜೀವನದ ಸುತ್ತ ಸಾಗುವ ಕುರಿತ ಸಿನಿಮಾ ಇದಾಗಿದೆ. ಬಹಳ ಹಿಂದೆಯೇ ರಿಲೀಸ್ ಆಗಬೇಕಿದ್ದ ಚಿತ್ರ ಒಂದಷ್ಟು ವಿಳಂಬದ ಬಳಿಕ ತೆರೆಗೆ ಬರಲು ಸಿದ್ಧವಾಗಿದೆ.
ಇತ್ತೀಚೆಗೆ ಚಿತ್ರದ ಹೊಸ ಟ್ರೇಲರ್ ಕೂಡ ರಿಲೀಸ್ ಆಗಿದೆ. ಇದರಲ್ಲಿ ʼಇಂದಿರಾ ಗಾಂಧಿʼ ಹೇರಿದ್ದ ʼತುರ್ತು ಪರಿಸ್ಥಿತಿʼಯ ದಿನಗಳನ್ನು ತೋರಿಸಲಾಗಿದೆ. ʼತುರ್ತು ಪರಿಸ್ಥಿತಿʼ ದಿನಗಳು ಜನ ಸಾಮಾನ್ಯರ ಮೇಲೆ ಯಾವ ರೀತಿ ಪರಿಣಾಮ ಬೀರಿತ್ತು ಮತ್ತು ಅದು ಯಾವ ರೀತಿ ರಾಜಕೀಯ ಸನ್ನಿವೇಶಗಳ ತಿಕ್ಕಾಟಕ್ಕೆ ಕಾರಣವಾಗಿತ್ತುಎನ್ನುವುದನ್ನು ತೋರಿಸಲಾಗಿದೆ.
ಇದನ್ನೂ ಓದಿ: ಅಧಿಕೃತವಾಗಿ ಅನೌನ್ಸ್ ಆಯಿತು ʼಜೈಲರ್ -2ʼ; Tiger Ka Hukum.. ಎನ್ನುತ್ತಲೇ ಮಿಂಚಿದ ತಲೈವಾ
ಇನ್ನೇನು ಸಿನಿಮಾ ರಿಲೀಸ್ ಆಗಬೇಕಿದೆ. ಈ ನಡುವೆಯೇ ಸಿನಿಮಾಕ್ಕೆ ಬ್ಯಾನ್ ಬಿಸಿ ತಟ್ಟಿದೆ. ʼಎಮರ್ಜೆನ್ಸಿʼ ನೆರೆಯ ಬಾಂಗ್ಲಾದೇಶದಲ್ಲಿ ತೆರೆ ಕಾಣುತ್ತಿಲ್ಲವೆಂದು ವರದಿಯಾಗಿದೆ.
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಪ್ರಸ್ತುತ ರಾಜಕೀಯ ಸಂಬಂಧಗಳು ಅಷ್ಟಾಗಿ ಉತ್ತಮವಾಗಿರದ ಕಾರಣ, ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಬಾಂಗ್ಲಾದೇಶದಲ್ಲಿ ತೆರೆ ಕಾಣುತ್ತಿಲ್ಲ. ಚಿತ್ರದಲ್ಲಿನ ಕಂಟೆಂಟ್ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಆದರೆ ಸದ್ಯ ಎರಡು ದೇಶಗಳ ನಡುವಿನ ರಾಜಕೀಯ ಬಿಕ್ಕಟ್ಟು ಚಿತ್ರದ ಬ್ಯಾನ್ ಗೆ ಕಾರಣವಾಗಿದೆ ಎಂದು ಮೂಲವೊಂದು ತಿಳಿಸಿರುವುದಾಗಿ ವರದಿಯಾಗಿದೆ.
ಚಿತ್ರದಲ್ಲಿ ಅನುಪಮ್ ಖೇರ್, ಶ್ರೇಯಸ್ ತಲ್ಪಾಡೆ, ಮಿಲಿಂದ್ ಸೋಮನ್, ಮಹಿಮಾ ಚೌಧರಿ ಚಿತ್ರದಲ್ಲಿ ಮುಂತಾದವರು ನಟಿಸಿದ್ದಾರೆ. ಇದೇ ಜ.17ರಂದು ಸಿನಿಮಾ ತೆರೆ ಕಾಣಲಿದೆ.
ಬಾಂಗ್ಲಾದೇಶದಲ್ಲಿ ಭಾರತೀಯ ಸಿನಿಮಾವೊಂದು ನಿಷೇಧವನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ ಇತ್ತೀಚೆಗಿನ ʼಪುಷ್ಪ-2ʼ, ʼಭೂಲ್ ಭುಲೈಯಾ 3ʼ ಸಿನಿಮಾಗಳು ಕೂಡ ಬಾಂಗ್ಲಾದೇಶದಲ್ಲಿ ನಿಷೇಧಕ್ಕೆ ಒಳಪಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Kakkar: ಟ್ರೇಡಿಂಗ್ ಹಗರಣದಲ್ಲಿ ಖ್ಯಾತ ಗಾಯಕಿ ನೇಹಾ ಕಕ್ಕರ್ ಬಂಧನ? ಫೋಟೋ ವೈರಲ್
Rasha Thadani: ರವೀನಾ ಟಂಡನ್ ಮಗಳ ಬಿಟೌನ್ ಎಂಟ್ರಿ
ಹೊಟೇಲ್ ಧ್ವಂಸ: ನಟ ವೆಂಕಟೇಶ್, ರಾಣಾ ದಗ್ಗುಬಾಟಿ ವಿರುದ್ಧ ಕೇಸ್
Bollywood; ಆಲಿಯಾ ಭಟ್ ನಟನೆ ಚಿತ್ರದಲ್ಲಿ ನಟಿಸಲು ಒಪ್ಪದ ಶಾರೂಕ್!
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.