ಬಾಲಿವುಡ್ ನಲ್ಲಿ ‘ಕೇಸರಿ’ ಕೇಕೆ : 116 ಕೋಟಿ ಗಳಿಕೆ
Team Udayavani, Mar 31, 2019, 5:05 PM IST
ನವದೆಹಲಿ: ಸ್ವಾತಂತ್ರ್ಯಪೂರ್ವದ ಕಥಾಹಂದರವನ್ನು ಹೊಂದಿರುವ ನೈಜ ಘಟನೆಯೊಂದರಿಂದ ಪ್ರೇರೇಪಿತವಾಗಿ ನಿರ್ಮಾಣಗೊಂಡಿರುವ ಅಕ್ಷಯ್ ಕುಮಾರ್ ನಟನೆಯ ಬಾಲಿವುಡ್ ಚಿತ್ರ ‘ಕೇಸರಿ’ ಬಾಕ್ಸ್ ಆಫೀಸ್ ಚಿಂದಿ ಮಾಡುತ್ತಾ ಮುನ್ನುಗ್ಗುತ್ತಿದೆ. 100 ಕೋಟಿ ಕ್ಲಬ್ ಗೆ ಪ್ರವೇಶ ಪಡೆದಿರುವ ಈ ಚಿತ್ರ ಇದೀಗ 116.76 ಕೋಟಿ ರೂಪಾಯಿಗಳನ್ನು ಗಳಿಸಿ ಇನ್ನೂ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ.
ಚಿತ್ರ ವಿಮರ್ಶಕ ತರಣ್ ಆದರ್ಶ್ ಅವರು ಕೇಸರಿ ಚಿತ್ರದ ಗಳಿಕೆಯ ವಿವರಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಎರಡನೇ ವಾರದಲ್ಲಿ ‘ಕೇಸರಿ’ ಚಿತ್ರವು ಉತ್ತರ ಭಾರತದಲ್ಲಿ ಉತ್ತಮ ಗಳಿಕೆಯೊಂದಿಗೆ ಮುನ್ನುಗ್ಗುತ್ತಿದ್ದು ಶುಕ್ರವಾರ 4.45 ಕೋಟಿ ಮತ್ತು ಶನಿವಾರದಂದು 6.45 ಕೋಟಿ ರೂಪಾಯಿಗಳನ್ನು ಗಳಿಸುವ ಮೂಲಕ ಒಟ್ಟಾರೆಯಾಗಿ 116.76 ಕೋಟಿ ರೂಪಾಯಿಗಳನ್ನು ಗಳಿಸಿಕೊಂಡಿದೆ ಮತ್ತು ಇದೇ ರೀತಿಯ ಗಳಿಕೆ ಮುಂದುವರೆದಲ್ಲಿ ಸದ್ಯದಲ್ಲೇ ‘ಕೇಸರಿ’ ಒಟ್ಟಾರೆ 150 ಕೋಟಿ ಕ್ಲಬ್ ಗೆ ಸೇರ್ಪಡೆಗೊಳ್ಳಲಿದೆ.
#Kesari picks up momentum on [second] Sat… North India leads, while other circuits are back on track… ₹ 150 cr is within reach, if it continues to trend strongly on subsequent days… [Week 2] Fri 4.45 cr, Sat 6.45 cr. Total: ₹ 116.76 cr. India biz.
— taran adarsh (@taran_adarsh) March 31, 2019
ಅಕ್ಷಯ್ ಕುಮಾರ್, ಪರಿಣಿತಿ ಚೋಪ್ರಾ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಅನುರಾಗ್ ಕಶ್ಯಪ್ ನಿರ್ದೇಶಿಸಿದ್ದಾರೆ. ಬ್ರಿಟಿಶ್ ಸರಕಾರದಲ್ಲಿದ್ದ ಸಿಖ್ ರೆಜಿಮೆಂಟ್ ಮತ್ತು ಅಫ್ಘಾನ್ ದಾಳಿಕೋರರ ನಡುವೆ ನಡೆದಿದೆ ಎನ್ನಲಾಗುತ್ತಿರುವ ‘ಸರ್ ಗಢಿ ಕಾಳಗ’ದ ಕಥೆಯನ್ನು ಕೇಸರಿ ಚಿತ್ರವು ಹೊಂದಿದೆ. ಮಿರ್ ಸರ್ವಾರ್, ವಂಶ್ ಭಾರಧ್ವಜ್, ಜಸ್ ಪ್ರೀತ್ ಸಿಂಗ್, ವಿವೇಕ್ ಸೈನಿ ಮತ್ತು ವಿಕ್ರಂ ಕೊಚ್ಚಾರ್ ಹಾಗೂ ಇತರರ ತಾರಾಗಣವೂ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.