“ಟಿಪ್ಪು ಕುರಿತ ಸಿನಿಮಾ ಮಾಡುವುದಿಲ್ಲ..” ಎಂದ ನಿರ್ಮಾಪಕ; ಎರಡೇ ತಿಂಗಳಿನಲ್ಲಿ ನಿಂತ ಸಿನಿಮಾ
ನನ್ನ ಕುಟುಂಬವನ್ನು ನಿಂದಿಸುವುದನ್ನು ತಡೆಯಿರಿ...
Team Udayavani, Jul 24, 2023, 5:05 PM IST
ಮುಂಬಯಿ: ಇದೇ ವರ್ಷದ ಮೇ ತಿಂಗಳಿನಲ್ಲಿ ನಿರ್ಮಾಪಕ ಸಂದೀಪ್ ಸಿಂಗ್ ʼಟಿಪ್ಪು ಸುಲ್ತಾನ್ʼ ಕುರಿತಂತೆ ಸಿನಿಮಾವನ್ನು ಮಾಡವುದಾಗಿ ಘೋಷಿಸಿದ್ದರು. ಇದೀಗ ಎರಡು ತಿಂಗಳ ಬಳಿಕ ಸಿನಿಮಾ ಮಾಡುವುದಿಲ್ಲ ಎಂದು ಸಂದೀಪ್ ಸಿಂಗ್ ಅವರು ಹೇಳಿದ್ದಾರೆ.
ಮೇ3 ರಂದು ʼವೀರ ಸಾವರ್ಕರ್ʼ ಹಾಗೂ ʼಅಟಲ್ʼ, ʼಬಾಲ್ ಶಿವಾಜಿʼ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವ ಸಂದೀಪ್ ಶರ್ಮಾ, ರಶ್ಮಿ, ಇರೋಸ್ ಇಂಟರ್ ನ್ಯಾಷನಲ್ ನೊಂದಿಗೆ ಸೇರಿಕೊಂಡು ʼಟಿಪ್ಪುʼ ಈ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು.
ಈ ಸಂಬಂಧ ಮೋಷನ್ ಪಿಕ್ಚರ್ ರಿಲೀಸ್ ಮಾಡಲಾಗಿತ್ತು. ಈತ ಮತಾಂಧ ಸುಲ್ತಾನ್ ಎಂದು ʼಟಿಪ್ಪುʼವಿನ ಮುಖಕ್ಕೆ ಮಸಿ ಬಳಿದಿರುವ ಪೋಸ್ಟರ್ ನ್ನು ರಿಲೀಸ್ ಮಾಡಲಾಗಿತ್ತು.8 ಸಾವಿರ ದೇವಸ್ಥಾನ, 27 ಚರ್ಚ್ ಗಳನ್ನು ನಾಶ ಮಾಡಲಾಗಿದೆ. 4 ಮಿಲಿಯನ್ ಹಿಂದೂಗಳನ್ನು ಮತಾಂತರ ಮಾಡಿ, ಬಲವಂತವಾಗಿ ಗೋಮಾಂಸವನ್ನು ಸೇವಿಸಲು ಒತ್ತಾಯಿಸಲಾಗಿದೆ. 1 ಲಕ್ಷಕ್ಕೂ ಅಧಿಕ ಹಿಂದೂಗಳನ್ನು ಜೈಲಿಗೆ ಹಾಕಿ ಶಿಕ್ಷಿಸಿದ್ದಾರೆ. 2000 ಕ್ಕೂ ಅಧಿಕ ಬ್ರಾಹ್ಮಣ ಕುಟುಂಬಕ್ಕೆ ಹಿಂಸೆ ನೀಡಲಾಗಿದೆ. ಆತನ ದುರಾಡಳಿತ 1783 ರಿಂದ ಆರಂಭವಾಯಿತೆಂದು ಮೋಷನ್ ಪಿಕ್ಚರ್ ನಲ್ಲಿ ಹೇಳಲಾಗಿತ್ತು.
ಈ ಸಿನಿಮಾ ಘೋಷಣೆ ಮಾಡಿದ ಬಳಿಕ ಹತ್ತಾರು ಟೀಕೆಗಳು ಕೇಳಿ ಬಂದಿತ್ತು. ಇದೀಗ ಸಿನಿಮಾ ಘೋಷಣೆಯಾದ ಎರಡೇ ತಿಂಗಳಿಗೆ ಸಿನಿಮಾ ನಿರ್ಮಾಣ ಮಾಡುವುದಿಲ್ಲ ಎಂದು ಸಂದೀಪ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ಶಾರುಖ್ ʼಜವಾನ್ʼ ಜೊತೆ ಸಲ್ಮಾನ್ ʼಟೈಗರ್-3ʼ ಟೀಸರ್ ರಿಲೀಸ್? ಥ್ರಿಲ್ ಆದ ಫ್ಯಾನ್ಸ್
“ಹಜರತ್ ಟಿಪ್ಪು ಸುಲ್ತಾನ್ ಕುರಿತ ಚಿತ್ರ ನಿರ್ಮಾಣವಾಗುವುದಿಲ್ಲ. ನನ್ನ ಕುಟುಂಬ, ಸ್ನೇಹಿತರು ಮತ್ತು ನನಗೆ ಬೆದರಿಕೆ ಅಥವಾ ನಿಂದನೆ ಮಾಡುವುದನ್ನು ತಡೆಯಿರಿ ಎಂದು ಈ ಮೂಲಕ ನಾನು ನನ್ನ ಸಹೋದರ- ಸಹೋದರಿಯರಲ್ಲಿ ಕೇಳಿಕೊಳ್ಳುತ್ತೇನೆ.ನಾನು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದರೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಹೀಗೆ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಎಲ್ಲಾ ನಂಬಿಕೆಗಳನ್ನು ಗೌರವಿಸುತ್ತೇನೆ. ಭಾರತೀಯರಾಗಿ ನಾವು ಎಂದೆಂದಿಗೂ ಒಂದಾಗಿರೋಣ ಮತ್ತು ಯಾವಾಗಲೂ ಪರಸ್ಪರ ಗೌರವವನ್ನು ನೀಡೋಣ” ಎಂದು ಟ್ವೀಟ್ ಮಾಡಿದ್ದಾರೆ.
ಸಿನಿಮಾ ಘೋಷಣೆ ಮಾಡುವ ವೇಳೆ “ಟಿಪ್ಪು ಸುಲ್ತಾನನ ನಿಜವಾದ ಸತ್ಯವನ್ನು ತಿಳಿದು ನಾನು ಬೆಚ್ಚಿಬಿದ್ದೆ. ನಮ್ಮ ಇತಿಹಾಸದ ಪಠ್ಯಪುಸ್ತಕಗಳಲ್ಲಿ ತೋರಿಸಿರುವಂತೆ ಅವನನ್ನು ಧೈರ್ಯಶಾಲಿ ಎಂದು ನಂಬುವಂತೆ ನಮ್ಮ ಬ್ರೈನ್ ವಾಶ್ ಮಾಡಲಾಗಿದೆ. ಅವನ ದುರುದ್ದೇಶ ಯಾರಿಗೂ ತಿಳಿದಿಲ್ಲ. ಭವಿಷ್ಯದ ಪೀಳಿಗೆಗೆ ಅವರ ಕರಾಳ ಮುಖವನ್ನು ಬಹಿರಂಗಪಡಿಸಲು ನಾನು ಬಯಸುತ್ತೇನೆ” ಎಂದು ಹೇಳಿದ್ದರು.
ಸದ್ಯ ಪಂಕಜ್ ತ್ರಿಪಾಠಿ ನಾಯಕನಾಗಿ ನಟಿಸುತ್ತಿರುವ ‘ಮೇನ್ ಅಟಲ್ ಹೂನ್’ ಸಿನಿಮಾದ ಕೆಲಸದಲ್ಲಿ ಸಂದೀಪ್ ಸಿಂಗ್ ಬ್ಯಸಿಯಾಗಿದ್ದಾರೆ.
The film on Hazrat Tipu Sultan will not be made.
I kindly request my fellow brothers and sister to refrain from threatening or abusing my family, friends and me. I sincerely apologize if I have unintentionally hurt anyone’s religious sentiments. It was never my intention to do… pic.twitter.com/zQUuAsxSSK
— Sandeep Singh (@thisissandeeps) July 24, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.