B’town: ಮದುವೆ, ಪಾರ್ಟಿಗಳ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್ ಪಡೆಯುವ ಸಂಭಾವನೆ ಎಷ್ಟು?
Team Udayavani, Oct 26, 2024, 6:49 PM IST
ಮುಂಬಯಿ: ಬಾಲಿವುಡ್ ಸ್ಟಾರ್ಸ್‌ಗಳ ಜೀವನ ಐಷಾರಾಮಿ ಆಗಿರುತ್ತದೆ. ರಿಚ್ ಲೈಫ್‌ನಲ್ಲಿರುವ ಬಾಲಿವುಡ್ ಮಂದಿ ಆತ್ಮೀಯರ ಕಾರ್ಯಕ್ರಮದಲ್ಲಿ ಭಾಗಿಯಾಗಿ ನೆರೆದಿರುವ ಅತಿಥಿಗಳನ್ನು ರಂಜಿಸುತ್ತಾರೆ.
ಇತ್ತೀಚೆಗೆ ಅಂಬಾನಿ ಪುತ್ರನ ಮದುವೆಯಲ್ಲಿ ಬಾಲಿವುಡ್ ಮಂದಿ ಮನರಂಜನಾ ಕಾರ್ಯಕ್ರಮವನ್ನು ನೀಡಿದ್ದರು. ಸಾಮಾನ್ಯವಾಗಿ ಬಾಲಿವುಡ್ ಮಂದಿ ಇಂತಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಡ್ಯಾನ್ಸ್ ಪ್ರೋಗ್ರಾಂ ಹಾಗೂ ಇತರೆ ಮನರಂಜನೆಯ ಕಾರ್ಯಕ್ರಮ ನೀಡಲು ದುಬಾರಿ ಸಂಭಾವನೆಯನ್ನು ಪಡೆಯುತ್ತಾರೆ.
ವಿವಿಐಪಿಗಳ ಖಾಸಗಿ ಕಾರ್ಯಕ್ರಮ, ಪಾರ್ಟಿಗಳಿಗೆ ಮನರಂಜನೆ ನೀಡಲೆಂದೇ ಆಹ್ವಾನಿತರಾಗುವ ಬಾಲಿವುಡ್ ಸ್ಟಾರ್ ಗಳು ಎಷ್ಟು ಸಂಭಾವನೆಯನ್ನು ಪಡೆಯುತ್ತಾರೆ ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ.
ಕತ್ರಿನಾ ಕೈಫ್ (Katrina Kaif ):
ಸಿನಿಮಾಗಳ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬಿಟೌನ್ ಬೆಡಗಿ ಕತ್ರಿನಾ ಕೈಫ್ ತನ್ನ ಹೈ ಎನರ್ಜಿ ಡ್ಯಾನ್ಸ್ ಪರ್ಫಾರ್ಮೆನ್ಸ್ ನೀಡಿ ಹೆಚ್ಚು ಗಮನ ಸೆಳೆಯುತ್ತಾರೆ. ಅವರನ್ನು ಅನೇಕ ವಿಐಪಿಗಳ ಐಷಾರಾಮಿ ಕಾರ್ಯಕ್ರಮಗಳಿಗೆ ಆಹ್ವಾನ ಮಾಡಲಾಗುತ್ತದೆ. ಅಲ್ಲಿ ಅವರು ನೀಡುವ ಡ್ಯಾನ್ಸ್ ಪರ್ಫಾರ್ಮೆನ್ಸ್ 3.5 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ ಎಂದು ವರದಿ ತಿಳಿಸಿದೆ.
ಶಾರುಖ್ ಖಾನ್ (Shah Rukh Khan): ಅಂಬಾನಿ ಪುತ್ರನ ಮದುವೆ ಶಾರುಖ್ ಭರ್ಜರಿಯಾಗಿ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದರು. ವಿವಿಐಪಿ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಆಹ್ವಾನಿತವಾಗಿ ಮನರಂಜನೆ ಕಾರ್ಯಕ್ರಮ ನೀಡಿದರೆ ಅವರು ಅಲ್ಲಿ 3 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ ಎಂದು ವರದಿ ತಿಳಿಸಿದೆ.
ಅಕ್ಷಯ್ ಕುಮಾರ್ (Akshay Kumar): ಬಾಲಿವುಡ್ ʼಕಿಲಾಡಿʼ ಅಕ್ಷಯ್ ಕುಮಾರ್ ಅವರು ಅನೇಕ ಬಾಲಿವುಡ್ ಸಿನಿಮಾಗಳ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮನರಂಜನೆ ಕಾರ್ಯಕ್ರಮಗಳನ್ನು ನೀಡುತ್ತಾರೆ. ತಮ್ಮದೇ ಸಿನಿಮಾದ ಹಾಡುಗಳಿಗೆ ಹೆಜ್ಜೆಹಾಕುವ ಅಕ್ಕಿ ಖಾಸಗಿ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದರೆ 2.5 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.
ಹೃತಿಕ್ ರೋಷನ್ (Hrithik Roshan):
ಹೃತಿಕ್ ರೋಷನ್ ನಟನೆಯಿಂದ ಎಷ್ಟು ಖ್ಯಾತಿಯೂ ಅಷ್ಟೇ ಖ್ಯಾತಿಯನ್ನು ತನ್ನ ಡ್ಯಾನ್ಸ್ ಸ್ಟೈಲ್ ನಿಂದಲೂ ಗಳಿಸಿದ್ದಾರೆ. ಹೃತಿಕ್ ರೋಷನ್ ಒಬ್ಬ ಅದ್ಭುತ ಡ್ಯಾನ್ಸರ್ ಎನ್ನುವುದು ಬಾಲಿವುಡ್‌ಗೆ ಗೊತ್ತು. ಅನೇಕ ಸಿನಿಮಾಗಳಲ್ಲಿ ಇದನ್ನು ಅವರು ಸಾಬೀತು ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮದಲ್ಲಿ ತಮ್ಮ ನೃತ್ಯ ಪ್ರದರ್ಶನ ನೀಡಲು ಅವರು 2.5 ಕೋಟಿ ರೂ ಚಾರ್ಜ್ ಮಾಡುತ್ತಾರೆ ಎನ್ನಲಾಗಿದೆ.
ರಣ್ಬೀರ್ ಕಪೂರ್ (Ranbir Kapoor):
ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ರಣ್ಭೀರ್ ಕಪೂರ್ ಡ್ಯಾನ್ಸ್ ಚರಿಷ್ಮಾನಿಂದಲೂ ಅನೇಕರ ಮನ ಗೆದ್ದಿದ್ದಾರೆ. ಅವರು ಖಾಸಗಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಡ್ಯಾನ್ಸ್ ಪ್ರದರ್ಶನ ನೀಡಿದರೆ 2 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ.
ಸಲ್ಮಾನ್ ಖಾನ್ (Salman Khan ): ಬಾಲಿವುಡ್ ʼಟೈಗರ್ʼ ಸಲ್ಮಾನ್ ಖಾನ್ ಹೈ ಎನರ್ಜಿ ಡ್ಯಾನ್ಸ್ ಪರ್ಫಾರ್ಮೆನ್ಸ್ ಮಾಡಿ ಗಮನ ಸೆಳೆಯುತ್ತಾರೆ. ಅಂಬಾನಿ ಪುತ್ರನ ಮದುವೆಯಲ್ಲಿ ಸಖತ್ ಸ್ಟೆಪ್ ಹಾಕಿದ್ದರು. ವಿವಿಐಪಿಗಳ ಪಾರ್ಟಿ ಹಾಗೂ ಖಾಸಗಿ ಕಾರ್ಯಕ್ರಮದಲ್ಲಿ ಅವರು ಡ್ಯಾನ್ಸ್ ಪ್ರದರ್ಶನ ನೀಡಿದರೆ 2 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ ಎನ್ನಲಾಗಿದೆ.
ಆಲಿಯಾ ಭಟ್ (Alia Bhatt):
ಬಿಟೌನ್ ಬ್ಯೂಟಿ ಆಲಿಯಾ ಭಟ್ ನಟನೆ ಮಾತ್ರವಲ್ಲದೆ ಡ್ಯಾನ್ಸ್ ನಲ್ಲೂ ಮೋಡಿ ಮಾಡಿದ್ದಾರೆ. ಖಾಸಗಿ ಕಾರ್ಯಕ್ರಮಗಳಿಗೆ ಅತಿಥಿಯಾಗಿ ಆಹ್ವಾನಿತರಾಗುವ ಅವರು ಡ್ಯಾನ್ಸ್ ಪರ್ಫಾರ್ಮೆನ್ಸ್ ಗೆ 1.5 ಕೋಟಿ ರೂ. ಸಂಭಾವನೆಯನ್ನು ಪಡೆಯುತ್ತಾರೆ ಎಂದು ಹೇಳಲಾಗಿದೆ.
ದೀಪಿಕಾ ಪಡುಕೋಣೆ (Deepika Padukone): ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮನರಂಜನೆ ಕಾರ್ಯಕ್ರಮವನ್ನು ನೀಡುತ್ತಾರೆ. ಅವರನ್ನು ಅನೇಕ ವಿವಿಐಪಿಗಳ ಖಾಸಗಿ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ. ತನ್ನ ಮೋಹಕ ನೋಟದ ಡ್ಯಾನ್ಸ್ ಪರ್ಫಾರ್ಮೆನ್ಸ್ ಗೆ ದೀಪಿಕಾ 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ರಣ್ವೀರ್ ಸಿಂಗ್ (Ranveer Singh):
ಹೈ ಎನರ್ಜಿಟಿಂಗ್ ಡ್ಯಾನ್ಸ್ ಪರ್ಫಾರ್ಮೆನ್ಸ್ ನೀಡುವ ಮತ್ತೊಬ್ಬ ನಟ ರಣ್ವೀರ್ ಸಿಂಗ್. ಖಾಸಗಿ ಕಾರ್ಯಕ್ರಮದಲ್ಲಿ ಮನರಂಜನೆ ನೀಡಲು ಅವರು 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂದು ವರದಿ ತಿಳಿಸಿದೆ.
ವಿಕ್ಕಿ ಕೌಶಲ್ (Vicky Kaushal): ಸಿನಿಮಾದಲ್ಲಿ ಸಖತ್ ಆಗಿ ಡ್ಯಾನ್ಸ್ ಮಾಡುವ ನಟ ವಿಕ್ಕಿ ಕೌಶಲ್ ಖಾಸಗಿ ಕಾರ್ಯಕ್ರಮದಲ್ಲೂ ಅಷ್ಟೇ ಎನರ್ಜಿಯಿಂದ ಪರ್ಫಾರ್ಮೆನ್ಸ್ ನೀಡುತ್ತಾರೆ. ಖಾಸಗಿ ಕಾರ್ಯಕ್ರಮದಲ್ಲಿ ಮನರಂಜನೆ ನೀಡಲು ಅವರು 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.