‘ದಿ ಕೇರಳ ಸ್ಟೋರಿʼ 1st Day ಕಲೆಕ್ಷನ್: ಮೊದಲ ದಿನವೇ ಕಾಶ್ಮೀರ್ ಫೈಲ್ಸ್ ಮೀರಿಸಿದ ಚಿತ್ರ
Team Udayavani, May 6, 2023, 10:45 AM IST
ಮುಂಬಯಿ: ಹಲವು ಕಾರಣಗಳಿಂದ ವಿವಾದಕ್ಕೆ ಗುರಿಯಾಗಿರುವ ‘ದಿ ಕೇರಳ ಸ್ಟೋರಿʼ ಸಿನಿಮಾ ಶುಕ್ರವಾರ ( ಮೇ. 5 ರಂದು) ದೇಶದೆಲ್ಲೆಡೆ ತೆರೆಕಂಡಿದೆ. ಇತ್ತೀಚೆಗೆ ತೆರೆಗೆ ಬಂದ ಹಿಂದಿ ಸಿನಿಮಾಗಳಿಗೆ ಹೋಲಿಸಿದರೆ ಫಸ್ಟ್ ಡೇ ಕಲೆಕ್ಷನ್ ವಿಚಾರದಲ್ಲಿ ಪಾಸಿಟಿವ್ ಓಪನಿಂಗ್ ಪಡೆದುಕೊಂಡಿದೆ.
ಕೇರಳದ ಹಿಂದೂ ಯುವತಿಯ ಸುತ್ತ ಸಾಗುವ ಕಥೆ ಇದಾಗಿದ್ದು, ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ, ಆ ಬಳಿಕ ಐಸಿಸ್ ಭಯೋತ್ಪಾದಕ ಸಂಘಟನೆಗೆ ಆಕೆ ಸೇರುತ್ತಾಳೆ. ಈ ಕಥೆ ಒಬ್ಬಳ ಕಥೆಯಲ್ಲ 32 ಸಾವಿರ ಕೇರಳ ಮಹಿಳೆಯರ ಕಥೆ ಎನ್ನುವುದನ್ನು ಚಿತ್ರ ತಂಡ ಮೊದಲು ಹೇಳಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸೆನ್ಸಾರ್ ಬೋರ್ಡ್ ಸಿನಿಮಾದ 10 ದೃಶ್ಯಗಳನ್ನು ತೆಗೆದು ಹಾಕಲು ಹೇಳಿತ್ತು.
ಸಿನಿಮಾ ಪ್ರದರ್ಶನಕ್ಕೆ ತಡೆ ಕೋರಿ ಹಾಗೂ ಸಿನಿಮಾವನ್ನು ನಿಷೇಧಿಸಲು ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳನ್ನು ನ್ಯಾಯಮೂರ್ತಿ ಎನ್.ನಗರೇಶ್ ಹಾಗೂ ನ್ಯಾಯಮೂರ್ತಿ ಸೋಫಿ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿದ ಬಳಿಕ ಸಿನಿಮಾ ಬಿಡುಗಡೆಗೆ ಯಾವುದೇ ತಡೆಯಿಲ್ಲದೇ ಸಿನಿಮಾ ರಿಲೀಸ್ ಆಗಿದೆ.
ವಿವಾದದಿಂದಲೇ ಸುದ್ದಿಯಾದ ಸುದೀಪ್ತೋ ಸೇನ್ ಸಿನಿಮಾ ಮೊದಲ ದಿನ ಎಷ್ಟು ಕಮಾಯಿ ಮಾಡಿದೆ ಎನ್ನುವ ವರದಿ ಹೊರಬಿದ್ದಿದೆ. ಸ್ಯಾಕ್‌ನಿಲ್ಕ್ ವರದಿಯ ಪ್ರಕಾರ ಚಿತ್ರ ಮೊದಲ ದಿನವೇ 7.50 ಕೋಟಿ ಗಳಿಸಿದೆ. ನಿಖರವಾಗಿ ಎಷ್ಟು ಕಲೆಕ್ಷನ್ ಮಾಡಿದೆ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
ಪಿವಿಆರ್, ಸಿನೆಪೊಲಿಸ್ ಹಾಗೂ ಇನಾಕ್ಸ್ ನಿಂದ 4 ಕೋಟಿ ರೂ. ಬಂದಿದೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ.
ʼದಿ ಕೇರಳ ಸ್ಟೋರಿʼ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿದ ಟಾಪ್ 5 ಸಿನಿಮಾಗಳೊಂದಿಗೆ ಸೇರಿದೆ.
ಶಾರುಖ್ ಖಾನ್ ಅವರ ʼಪಠಾಣ್ʼ (55 ಕೋಟಿ ರೂ.) ಸಲ್ಮಾನ್ ಖಾನ್ ಅವರ ʼಕಿಸಿ ಕಾ ಭಾಯಿ ಕಿಸಿ ಕಿ ಜಾನ್ʼ (15.81 ಕೋಟಿ ರೂ.), ತೂ ಜೂಟಿ ಮೈ ಮಕ್ಕಾರ್ ʼ (15.7 ಕೋಟಿ ರೂ.) ʼಭೋಲಾʼ ( 11.2 ಕೋಟಿ ರೂ.) ಕೇರಳ ಸ್ಟೋರಿ ಅಕ್ಷಯ್ ಕುಮಾರ್ ಅವರ ʼಸೆಲ್ಫಿʼ (ರೂ. 2.55 ಕೋಟಿ) ಕಾರ್ತಿಕ್ ಆರ್ಯನ್ ಅವರ ʼಶೆಹಜಾದಾʼ (6 ಕೋಟಿ ರೂ.) ʼದಿ ಕಾಶ್ಮೀರ್ ಫೈಲ್ಸ್ʼ (3.5 ಕೋಟಿ ರೂ.) ಗಿಂತ ಉತ್ತಮ ಓಪನಿಂಗ್ ಪಡೆದುಕೊಂಡಿದೆ.
ಅದಾ ಶರ್ಮಾ,ಯೋಗಿತಾ ಬಿಹಾನಿ, ಸೋನಿಯಾ ಬಲಾನಿ, ಸಿದ್ಧಿ ಇದ್ನಾನಿ, ವಿಜಯ್ ಕೃಷ್ಣ, ಪ್ರಣಯ್ ಪಚೌರಿ ಮುಂತಾದ ಕಲಾವಿದರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.