Zareen Khan: ಆ ನಟಿಯೊಂದಿಗಿನ ಹೋಲಿಕೆಯಿಂದ ನನ್ನ ವೃತ್ತಿ ಜೀವನವೇ ಮುಳುವಾಯಿತು; ಜರೀನ್‌

ನನ್ನ ವ್ಯಕ್ತಿತ್ವ ಸಾಬೀತಿಗೆ ಇಂಡಸ್ಟ್ರಿ ಅವಕಾಶವೇ ನೀಡಿಲ್ಲ..

Team Udayavani, Jul 27, 2023, 1:32 PM IST

tdy-5

ಮುಂಬಯಿ: ಬಾಲಿವುಡ್‌ ನಲ್ಲಿ ಒಂದು ಕಾಲದಲ್ಲಿ ಮಾದಕ ನೋಟದಿಂದ ಗಮನ ಸೆಳೆದಿದ್ದ ನಟಿ ಜರೀನ್ ಖಾನ್ ಬಹು ಸಮಯದಿಂದ ಬಾಲಿವುಡ್‌ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ದಕ್ಷಿಣದ ಕೆಲ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಅವರು ಇಂಡಸ್ಟ್ರಿಯಲ್ಲಿನ ಅವಕಾಶ ಕೊರತೆ ಬಗ್ಗೆ ಮಾತನಾಡಿದ್ದಾರೆ.

2010 ರಲ್ಲಿ ಬಂದ ‘ವೀರ್’ ಸಿನಿಮಾದ ಮೂಲಕ ಬಿಟೌನ್‌ ಗೆ ಎಂಟ್ರಿ ಕೊಟ್ಟ ಜರೀನ್‌ ಖಾನ್‌ ಆರಂಭದಲ್ಲಿ ತನ್ನ ನಟನೆ ಹಾಗೂ ಮಾದಕ ನೋಟದಿಂದ ಗಮನ ಸೆಳೆದಿದ್ದರು. ಆ ವೇಳೆ ಅವರನ್ನು ಕತ್ರೀನಾ ಕೈಫ್‌ ಅವರಿಗೆ ಹೋಲಿಸಲಾಗುತ್ತಿತ್ತು. ಆದರೆ ಆ ಬಳಿಕ ಅವರ ಸಿನಿ ಕೆರಿಯರ್‌ ಗೆ ಇದೇ ವಿಚಾರ ಹಿನ್ನೆಡೆಯಾಗಿ ಪರಿಣಮಿಸಿತು.

ರೆಡ್ಡಿಟ್‌ನಲ್ಲಿ ‘ಆಸ್ಕ್ ಮಿ ಎನಿಥಿಂಗ್’ ಸೆಷನ್‌ನಲ್ಲಿ ಬಳಕೆದಾರರೊಬ್ಬರು “ಜರೀನ್‌ ಖಾನ್‌ ನಿಮ್ಮನ್ನು ಆರಂಭಿಕ ದಿನಗಳಲ್ಲಿ ಕತ್ರೀನಾ ಅವರಿಗೆ ಹೋಲಿಸಲಾಗುತ್ತಿತ್ತು. ಅದು ನಿಮಗೆ ಹೇಗೆ ಅನಿಸುತ್ತಿತ್ತು ಹಾಗೂ ನಿಮ್ಮ ಕೆರಿಯರ್‌ ಮೇಲೆ ಹೇಗೆ ಪರಿಣಾಮ ಬೀರಿತು?” ಎಂದು ಕೇಳಿದ್ದಾರೆ.

ಇದನ್ನೂ ಓದಿ: Amitabh Bachchan: ಮಹಿಳೆಯರ ಒಳಉಡುಪಿನ ಬಗ್ಗೆ ಟ್ವೀಟ್; ಟ್ರೋಲಾದ ಬಿಗ್‌ ಬಿ ಅಮಿತಾಭ್

“ನಾನು ಇಂಡಸ್ಟಿಗೆ ಬಂದ ವೇಳೆ. ಕಳೆದುಕೊಂಡ ಮಗುವಿನಂತೆ ನನ್ನ ಸ್ಥಿತಿ ಇತ್ತು. ನಾನು ಫಿಲ್ಮಿ ಹಿನ್ನೆಲೆಯಿಂದ ಬರದ ಕಾರಣ. ನನ್ನನು ಕತ್ರೀನಾ ಅವರೊಂದಿಗೆ ಹೋಲಿಸಿ ಮಾತನಾಡುವಾಗ ತುಂಬಾ ಸಂತೋಷವಾಗುತ್ತಿತ್ತು. ನಾನು ಕತ್ರೀನಾ ಅವರ ಅಭಿಮಾನಿಯೂ ಆಗಿದ್ದೆ. ಅವರು ನೋಡಲು ಸುಂದರವಾಗಿದ್ದರು. ಆದರೆ ಇದೇ ನನಗೆ ಹಿನ್ನೆಡೆ ಆಯಿತು. ನನ್ನ ವ್ಯಕ್ತಿತ್ವವನ್ನು ಸಾಬೀತು ಪಡಿಸಲು ಇಂಡಸ್ಟ್ರಿ ಅವರು ನನಗೆ ಅವಕಾಶವೇ ನೀಡಿಲ್ಲ. ಇದು ನನ್ನ ವೃತ್ತಿಜೀವನಕ್ಕೆ ಹಿನ್ನಡೆಯಾಯಿತು” ಎಂದು ಪ್ರಶ್ನೆಗೆ ಜರೀನ್‌ ಉತ್ತರಿಸಿದ್ದಾರೆ.

ಜರೀನ್ ಖಾನ್ ‘ವೀರ್’ ನಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ಸಲ್ಮಾನ್‌ ಖಾನ್‌ ನಿರ್ಮಿಸಿದ್ದರು. ಸಲ್ಮಾನ್‌ ಖಾನ್ ಕತ್ರಿನಾ ಅವರೊಂದಿಗೆ ‘ಮೈನೆ ಪ್ಯಾರ್ ಕ್ಯುನ್ ಕಿಯಾ’ (2005) ಮತ್ತು ‘ ಪಾರ್ಟ್ ನರ್‌’ (2007) ನಲ್ಲಿ ನಟಿಸಿದ್ದರು. ಕತ್ರೀನಾ ಅವರೊಂದಿಗೆ ಜರೀನ್‌ ಅವರ ಹೋಲಿಕೆ. ಅಂತಿಮವಾಗಿ ಜರೀನ್‌ ಅವರಿಗೆ ಮುಳುವಾಗಿ ಪರಿಣಮಿಸಿತು. ಇದು ಜರೀನ್‌ ಅವರ ವೃತ್ತಿ ಜೀವನದ ಬೆಳವಣಿಗೆಗೆ ಅಡ್ಡಿಯಾಯಿತು. ಇಂಡಸ್ಟ್ರಿಯಲ್ಲಿ ಜರೀನ್‌ ಅವರ ಗುರುತು ಸ್ಥಾಪಿಸಲು, ಇದರಿಂದ ಕಷ್ಟವಾಯಿತು.

ಜರೀನ್‌ ಖಾನ್‌ ಹಿಂದಿ, ಪಂಜಾಬಿ, ತೆಲುಗು ಮತ್ತು ತಮಿಳು ಸಿನಿಮಾರಂಗದಲ್ಲಿ ನಟಿಸಿದ್ದಾರೆ.

ಟಾಪ್ ನ್ಯೂಸ್

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

Viral Photo: ಬಾಲಿವುಡ್‌ ನಟ ಆಮಿರ್‌ ಖಾನ್‌ ಭೇಟಿಯಾದ ಕಿಚ್ಚ ಸುದೀಪ್;‌ ಫ್ಯಾನ್ಸ್‌ ಥ್ರಿಲ್

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

IFFI 2024:  ತಾಲಿಯಾ..ತಾಲಿಯಾ…ಜೋರ್‌ ದಾರ್‌ ತಾಲಿಯಾ..!

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್‌!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

Fraud Case: ಗೂಗಲ್‌ ಪೇ ಮಾಡಿದೆ ಎಂದು ಹೇಳಿ ಮೋಸ

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

ಕಸ್ತೂರಿಂಗನ್‌ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’

1-lll

Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ

ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ

Yasin Malik

Yasin Malik ವಿಚಾರಣೆಗೆ ತಿಹಾರ್‌ ಜೈಲಿನಲ್ಲೇ ಕೋರ್ಟ್‌ ರೂಂ: ಸುಪ್ರೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.