Movies: ದೀಪಾವಳಿ ಹಬ್ಬಕ್ಕೆ ರಿಲೀಸ್‌ ಆಗಿ ಕೈ ಸುಟ್ಟುಕೊಂಡ ಸ್ಟಾರ್‌ ಸಿನಿಮಾಗಳು


Team Udayavani, Oct 30, 2024, 7:44 PM IST

Movies: ದೀಪಾವಳಿ ಹಬ್ಬಕ್ಕೆ ರಿಲೀಸ್‌ ಆಗಿ ಕೈ ಸುಟ್ಟುಕೊಂಡ ಸ್ಟಾರ್‌ ಸಿನಿಮಾಗಳು

ಮುಂಬಯಿ: ದೀಪಾವಳಿ(Diwali) ಹಬ್ಬಕ್ಕೆ ಸಿನಿಮಾರಂಗ ಬ್ಯುಸಿಯಾಗಲಿದೆ ಸಾಲು ಸಾಲು ಸಿನಿಮಾಗಳು ಥಿಯೇಟರ್‌ಗೆ ಲಗ್ಗೆಯಿಡಲಿದೆ. ಬಾಲಿವುಡ್‌ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ಕಲಾವಿದರ ಸಿನಿಮಾಗಳು ದೀಪಾವಳಿ ಹಬ್ಬಕ್ಕೆ ತೆರೆ ಕಾಣಲಿದೆ.

ದೀಪಾವಳಿ ಹಬ್ಬಕ್ಕೆ ತಮ್ಮ ಸಿನಿಮಾ ಥಿಯೇಟರ್‌ಗೆ ಬಂದರೆ ಪ್ರೇಕ್ಷಕರು ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಹಲವು ಚಿತ್ರಗಳು ಈ ಸಮಯದಲ್ಲಿ ರಿಲೀಸ್‌ ಆಗುತ್ತವೆ. ಆದರೆ ಇದೇ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಿಲೀಸ್‌ ಆಗಿ ಸೋತು ಸುಣ್ಣವಾಗಿರುವ ಅನೇಕ ಸಿನಿಮಾಗಳ ಉದಾಹರಣೆ ಭಾರತೀಯ ಸಿನಿಲೋಕದಲ್ಲಿದೆ.

ಇದನ್ನೂ ಓದಿ:  Jai Hanuman: ತೆಲುಗು ನಿರ್ದೇಶಕನ ಸಿನಿಮಾದಲ್ಲಿ ʼಹನುಮಾನ್‌ʼ ಆದ ಕನ್ನಡದ ರಿಷಬ್ ಶೆಟ್ಟಿ

ಸ್ಟಾರ್‌ ಕಲಾವಿದರು, ಖ್ಯಾತ ನಿರ್ದೇಶಕ, ನಿರ್ಮಾಣ ಸಂಸ್ಥೆಯಿದ್ದರೂ ಹೀನಾಯವಾಗಿ ಸೋತ ಬಾಲಿವುಡ್‌ ಸಿನಿಮಾಗಳ (Bollywood Movies) ಪಟ್ಟಿ ಇಲ್ಲಿದೆ..

ಜಾನ್-ಇ-ಮನ್: Jaan-E-Mann (2006)

ಸಲ್ಮಾನ್ ಖಾನ್ (Salman Khan), ಅಕ್ಷಯ್ ಕುಮಾರ್ ( Akshay Kumar) ಮತ್ತು ಪ್ರೀತಿ ಜಿಂಟಾ (Preity Zinta) ಅವರಂತಹ ಮಲ್ಟಿಸ್ಟಾರ್ಸ್‌ ಜತೆಯಾಗಿ ನಟಿಸಿದ್ದ, 2006ರಲ್ಲಿ ತೆರೆಕಂಡಿದ್ದʼಜಾನ್-ಎ-ಮಾನ್ʼ ಸಿನಿಮಾ ದೀಪಾವಳಿ ಹಬ್ಬಕ್ಕೆ ರಿಲೀಸ್‌ ಆಗಿತ್ತು. ಭರ್ಜರಿ ಪ್ರಚಾರದ ಹೊರತಾಗಿಯೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದು  25 ಕೋಟಿ ರೂಪಾಯಿಯನ್ನಷ್ಟೇ. ಇದೇ ಸಂದರ್ಭದಲ್ಲಿ ತೆರೆಕಂಡಿದ್ದ  ಶಾರುಖ್‌ ಖಾನ್‌(Shah Rukh Khan) ಅವರ ʼಡಾನ್‌ʼ ಸಿನಿಮಾ ದೊಡ್ಡ ಹಿಟ್‌ ಆಗಿತ್ತು.

ಕ್ಯೋ ಕಿ: Kyon Ki (2005) 

2005ರ ದೀಪಾವಳಿ ಹಬ್ಬದ ವೇಳೆ ರಿಲೀಸ್‌ ಆಗಿದ್ದ ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ , ಕರೀನಾ ಕಪೂರ್( Kareena Kapoor) ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ಆದರೆ ಇದು ಸಲ್ಮಾನ್‌ ಖಾನ್‌ ಅವರ ವೃತ್ತಿ ಬದುಕಿನ ದೊಡ್ಡ ಫ್ಲಾಪ್‌ ಸಿನಿಮಾವಾಯಿತು. ಸ್ಟಾರ್‌ ಕಾಸ್ಟ್‌ ಇದ್ದರೂ ಚಿತ್ರ ಗಳಿಸಿದ್ದು ಕೇವಲ 12 ಕೋಟಿ ರೂಪಾಯಿಯನ್ನಷ್ಟೇ.

ಸಾವರಿಯಾ: Saawariya (2007)

ಬಾಲಿವುಡ್‌ಗೆ ಚಾಕ್ಲೇಟ್‌ ಹೀರೋ ರಣ್ಬೀರ್‌ ಕಪೂರ್‌ (Ranbir Kapoor) ಎಂಟ್ರಿ ಕೊಟ್ಟ ಸಿನಿಮಾವಿದು. ರಣ್ಬೀರ್‌ ಜತೆ ಸೋನಮ್‌ (Sonam Kapoor) ನಟಿಸಿದ್ದರು. ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ಸಿನಿಮಾ ಇದ್ದಾಗಿದ್ದರಿಂದ ಬಹು ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿತ್ತು. ಆದರೆ ಸಿನಿಮಾದ ನಿಧಾನಗತಿಯ ಕಥೆ ಹಾಗೂ ವಿಶಿಷ್ಟವಾದ ಚಿತ್ರಕಥೆ ಪ್ರೇಕ್ಷಕರ ಗಮನ ಸೆಳೆಯಲು ವಿಫಲವಾಯಿತು. ಆ ಸಮಯದಲ್ಲಿ ಸಿನಿಮಾ 22 ಕೋಟಿ ರೂಪಾಯಿಯನ್ನಷ್ಟೇ ಗಳಿಸಿತು.

ಬ್ಲೂ: Blue (2009)

ಅಕ್ಷಯ್‌ ಕುಮಾರ್‌ (Akshay Kumar), ಸಂಜಯ್‌ ದತ್ (Sanjay Dutt), ಲಾರಾ ದತ್ತಾ (Lara Dutta) ರಂತಹ ಜನಪ್ರಿಯ ಸ್ಟಾರ್‌ ನಟರು ನಟಿಸಿದ್ದ ಈ ಸಿನಿಮಾ 2009ರ ದೀಪಾವಳಿ ಹಬ್ಬಕ್ಕೆ ರಿಲೀಸ್‌ ಆಗಿತ್ತು.  75 ಕೋಟಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ 68 ಕೋಟಿ ರೂ.ಗಳಿಸಿ ಫ್ಲಾಪ್  ಆಯಿತು.

ಮೇನ್ ಔರ್ ಮಿಸೆಸ್ ಖನ್ನಾ: Main Aur Mrs. Khanna (2009) 

2009ರ ದೀಪಾವಳಿ ಹಬ್ಬಕ್ಕೆ ರಿಲೀಸ್‌ ಆದ ಈ ಸಿನಿಮಾದಲ್ಲಿ ಸಲ್ಮಾನ್‌ ಖಾನ್‌, ಕರೀನಾ ಕಪೂರ್‌ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ಇವರ ಜತೆ ಸೊಹೈಲ್ ಖಾನ್ ನಟಿಸಿದ್ದರು. ಸ್ಟಾರ್‌ ಕಾಸ್ಟ್‌ ಇದ್ದರೂ ಸಿನಿಮಾ ಗಳಿಸಿದ್ದು ಕೇವಲ 7 ಕೋಟಿ ರೂ.ವನ್ನಷ್ಟೇ. ನೆಗೆಟಿವ್ ವಿಮರ್ಶೆಗಳು ಮತ್ತು ಕಳಪೆ ಕಥಾಹಂದರದಿಂದ ಸಿನಿಮಾ ಹೀನಾಯವಾಗಿ ಸೋತಿತು.

ಆಕ್ಷನ್‌ ರಿಪ್ಲೈ: Action Replayy (2010)

2010ರ ದೀಪಾವಳಿ ಹಬ್ಬಕ್ಕೆ ತೆರೆಕಂಡ ಬಾಲಿವುಡ್‌ನ ಸಿನಿಮಾದಲ್ಲಿ ಅಕ್ಷಯ್‌ ಕುಮಾರ್‌, ಐಶ್ವರ್ಯಾ ರೈ ನಟಿಸಿದ್ದರು. ಟೈಮ್‌ ಟ್ರಾವೆಲ್‌ ,ಕಾಮಿಡಿ ಕಥಾಹಂದರದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 40.36 ಕೋಟಿ ರೂಪಾಯಿ ಗಳಿಸಿತು. ಬಹುತೇಕ ಪ್ರೇಕ್ಷಕರಿಗೆ ಸಿನಿಮಾದ ಪ್ಲಾಟ್‌ ಗೊಂದಲಮಯವಾಗಿ ಕಂಡಿತು.

ಥಗ್ಸ್ ಆಫ್ ಹಿಂದೂಸ್ತಾನ್: Thugs of Hindostan (2018)

ಆಮೀರ್‌ ಖಾನ್‌ (Aamir Khan), ಅಮಿತಾಭ್‌ ಬಚ್ಚನ್(Amitabh Bachchan) ಬಹುದೊಡ್ಡ ಫ್ಲಾಪ್‌ ಸಿನಿಮಾಗಳಲ್ಲಿ ಒಂದು. ಸಿಕ್ಕಾಪಟ್ಟೆ ನಿರೀಕ್ಷೆಯನ್ನಿಟ್ಟುಕೊಂಡು ತೆರೆಗೆ ಬಂದಿದ್ದ ಈ ಸಿನಿಮಾಕ್ಕೆ ಕಳಪೆ ರಿವ್ಯೂ ಬಂದಿತ್ತು. ಭಾರತದಲ್ಲಿ 151 ಕೋಟಿ ರೂಪಾಯಿಯನ್ನಷ್ಟೇ ಸಿನಿಮಾ ಗಳಿಸಿತು.

ಟಾಪ್ ನ್ಯೂಸ್

Air-bus-295

Military Aircraft Unit: ಗುಜರಾತಲ್ಲಿ ತಯಾರಾಗಲಿದೆ ದೇಸಿ ಏರ್‌ಬಸ್‌

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಸೂಚನೆ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಸೂಚನೆ

Hunasuru-Women

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು

Kottigehara: ಔಷಧಿ ಸಿಂಪಡಣೆ ವೇಳೆ ದೋಟಿಗೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಮೃತ್ಯು

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು

Paris Masters: ರೋಹನ್‌ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ

Paris Masters: ರೋಹನ್‌ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

salman-khan

Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ

Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್‌ ಅರ್ಜುನ್‌ʼ

Bollywood: 30 ವರ್ಷದ ಬಳಿಕ ಮತ್ತೆ ಥಿಯೇಟರ್‌ಗೆ ಬರಲಿದ್ದಾರೆ ʼಕರಣ್‌ ಅರ್ಜುನ್‌ʼ

Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್‌ ಹಿಟ್‌ ʼಮಿರ್ಜಾಪುರ್‌ʼ ಸರಣಿ

Mirzapur The Film : ಸಿನಿಮಾವಾಗಿ ಬರಲಿದೆ ಸೂಪರ್‌ ಹಿಟ್‌ ʼಮಿರ್ಜಾಪುರ್‌ʼ ಸರಣಿ

15

Movie: 45 ಕೋಟಿ ಬಜೆಟ್‌, 60 ಸಾವಿರ ಗಳಿಕೆ; ಇದು ಭಾರತದ ಬಿಗೆಸ್ಟ್ ಫ್ಲಾಪ್ ಸಿನಿಮಾ

ಮದುವೆ,ಪಾರ್ಟಿಗಳ ಡ್ಯಾನ್ಸ್ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?

B’town: ಮದುವೆ, ಪಾರ್ಟಿಗಳ ಪರ್ಫಾರ್ಮೆನ್ಸ್‌ಗೆ ಬಿಟೌನ್ ಸ್ಟಾರ್ಸ್‌ ಪಡೆಯುವ ಸಂಭಾವನೆ ಎಷ್ಟು?

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Air-bus-295

Military Aircraft Unit: ಗುಜರಾತಲ್ಲಿ ತಯಾರಾಗಲಿದೆ ದೇಸಿ ಏರ್‌ಬಸ್‌

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

Chikkamagaluru: ಹೆಣ ಹೂಳಲು ಜಾಗವಿಲ್ಲದೆ ಪಂಚಾಯಿತಿ ಮುಂದೆ ಮೃತದೇಹವಿಟ್ಟು ಪ್ರತಿಭಟನೆ

road-mishap-11

Karkala: ಕಾರ್‌ ಡೋರ್‌ಗೆ ಢಿಕ್ಕಿ ವ್ಯಕ್ತಿಗೆ ಗಾಯ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಸೂಚನೆ

Udupi: ಹೆದ್ದಾರಿ ಕಾಮಗಾರಿ ಶೀಘ್ರ ನಡೆಸಲು ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಸೂಚನೆ

11

Gangolli: ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.