Border 2: ಸನ್ನಿ ಡಿಯೋಲ್ ʼಬಾರ್ಡರ್-2ʼಗೆ ʼಫೌಜಿʼಯಾಗಿ ಬಂದ ಸುನಿಲ್ ಶೆಟ್ಟಿ ಪುತ್ರ
Team Udayavani, Oct 3, 2024, 5:54 PM IST
ಬೆಂಗಳೂರು: ನಟ ಸನ್ನಿ ಡಿಯೋಲ್ (Sunny Deol) ವೃತ್ತಿ ಬದುಕಿನ ವಿಶೇಷ ಸಿನಿಮಾಗಳಲ್ಲಿ ʼಬಾರ್ಡರ್ʼ ಕೂಡ ಒಂದು. ದೇಶ ಪ್ರೇಮವನ್ನು ಸಾರಿದ ʼಬಾರ್ಡರ್ʼ ಸಿನಿಮಾದ ಸೀಕ್ವೆಲ್ ಬಗ್ಗೆ ಸುದ್ದಿ ಬಿಟೌನ್ ವಲಯದಲ್ಲಿ ಕಳೆದ ಕೆಲ ಸಮಯದಿಂದ ಹರಿದಾಡುತ್ತಿದೆ.
1971 ರ ಇಂಡೋ – ಪಾಕ್ ಕದನದ ಕಥೆಯನ್ನು ಆಧಾರಿಸಿ 1997 ರಲ್ಲಿ ತೆರೆಗೆ ಬಂದ ʼಬಾರ್ಡರ್ʼ ಸಿನಮಾ ಬಾಲಿವುಡ್ ನಲ್ಲಿ ದೊಡ್ಡ ಹಿಟ್ ಆಗಿತ್ತು. ಈ ಸಿನಿಮಾದ ಸೀಕ್ವೆಲ್ ಬರುವುದು ಅಧಿಕೃತವಾಗಿದ್ದು, ಇದನ್ನು ಸ್ವತಃ ಸನ್ನಿ ಡಿಯೋಲ್ ಅವರೇ ಕೆಲ ಸಮಯದ ಹಿಂದಷ್ಟೇ ಟೀಸರ್ ತುಣುಕುವೊಂದನ್ನು ಹಂಚಿಕೊಂಡು ಹೇಳಿದ್ದರು.
ʼಬಾರ್ಡರ್-2ʼ ಸಿನಿಮಾದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವುದರ ಬಗ್ಗೆ ಒಂದೊಂದೇ ಅಪ್ಡೇಟ್ ಗಳು ಹೊರ ಬೀಳುತ್ತಿದೆ.
ಇದನ್ನೂ ಓದಿ: BBK11:ಬಿಗ್‌ಬಾಸ್ ಸ್ಪರ್ಧಿ ಜಗದೀಶ್ ಬಗ್ಗೆ ಸ್ಫೋಟಕ ವಿಚಾರ ಬಯಲು ಮಾಡಿದ ಪ್ರಶಾಂತ್ ಸಂಬರಗಿ
ಆಯುಷ್ಮಾನ್ ಖುರಾನಾ (Ayushmann Khurrana) ಇರಲಿದ್ದಾರೆ ಎನ್ನುವ ಮಾತು ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ ಈ ಕುರಿತು ಚಿತ್ರತಂಡ ಅಧಿಕೃತವಾಗಿ ಎಲ್ಲೂ ಬಹಿರಂಗವಾಗಿ ಹೇಳಿಲ್ಲ. ಇನ್ನುಳಿದಂತೆ ವರುಣ್ ಧವನ್ (Varun Dhawan) ಮತ್ತು ದಿಲ್ಜಿತ್ ದೋಸಾಂಜ್ (Diljit Dosanjh) ಇರುವುದು ಅಧಿಕೃತವಾಗಿದೆ.
ಇದೀಗ ಸಿನಿಮಾಕ್ಕೆ ಮತ್ತೊಬ್ಬ ʼಫೌಜಿʼಯ ಎಂಟ್ರಿ ಆಗಿದೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ (Suniel Shetty) ಅವರ ಪುತ್ರ ಅಹಾನ್ ಶೆಟ್ಟಿ (Ahan Shetty) ʼಬಾರ್ಡರ್-2ʼಗೆ ʼಫೌಜಿʼಯಾಗಿ ಎಂಟ್ರಿ ಕೊಟ್ಟಿದ್ದಾರೆ.
View this post on Instagram
“ಯಾವುದನ್ನೂ ಶತ್ರು ದಾಟುದಿಲ್ಲವೂ ಅದ್ಯಾವುದೋ ಗೆರೆಯೂ ಅಲ್ಲ, ಗೋಡೆಯೂ ಅಲ್ಲ, ಹಳ್ಳವು ಅಲ್ಲ. ಹಾಗಾದರೆ ಈ ಬಾರ್ಡರ್ ಯಾವುದು? ಒಬ್ಬ ಫೌಜಿ ಹಾಗೂ ಅವನ ಸಹೋದರರು” ಎಂದು ಅಹಾನ್ ಅವರ ಪವರ್ ಫುಲ್ ಡೈಲಾಗ್ಸ್ ಮೂಲಕ ಅವರ ಪಾತ್ರದ ಪರಿಚಯವನ್ನು ಮಾಡಲಾಗಿದೆ.
ʼಕೇಸರಿʼ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಅನುರಾಗ್ ಸಿಂಗ್ ʼಬಾರ್ಡರ್ -2ʼ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. 2026ರ ಜನವರಿ 23, 2026 ರಂದು ಸಿನಿಮಾ ತೆರೆಗೆ ಬರಲಿದೆ.
1997ರಲ್ಲಿ ತೆರೆಕಂಡಿದ್ದʼಬಾರ್ಡರ್ʼ ಸಿನಿಮಾದಲ್ಲಿ ಸನ್ನಿ ಡಿಯೋಲ್, ಸುನಿಲ್ ಶೆಟ್ಟಿ, ಅಕ್ಷಯ್ ಖನ್ನಾ, ಜಾಕಿ ಶ್ರಾಫ್, ಪುನೀತ್ ಇಸ್ಸಾರ್ ಮುಂತಾದವರು ನಟಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.