Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Team Udayavani, Apr 20, 2024, 11:50 AM IST
ಮುಂಬಯಿ: ಈ ವಾರ ಬಾಲಿವುಡ್ ನಲ್ಲಿ ಎರಡು ಸಿನಿಮಾಗಳು ತೆರೆಕಂಡಿವೆ. ಮೊದಲ ದಿನ ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ತಕ್ಕಮಟ್ಟಿಗೆ ಸದ್ದು ಮಾಡಿದೆ.
ದಿಬಾಕರ್ ಬ್ಯಾನರ್ಜಿ ನಿರ್ದೇಶನದ ʼ ಲವ್ ಸೆಕ್ಸ್ ಔರ್ ಧೋಖಾ 2ʼ ಹಾಗೂ ವಿದ್ಯಾ ಬಾಲನ್ ಮತ್ತು ಪ್ರತೀಕ್ ಗಾಂಧಿ ಅಭಿನಯದ ‘ದೋ ಔರ್ ದೋ ಪ್ಯಾರ್’ ಸಿನಿಮಾಗಳು ಈ ವಾರ ರಿಲೀಸ್ ಆಗಿದೆ. ಎರಡು ಭಿನ್ನ ಕಥೆಯನ್ನೊಳಗೊಂಡಿರುವ ಸಿನಿಮಾಗಳಾಗಿದ್ದು, ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ ತಕ್ಕಮಟ್ಟಿಗಿನ ಆರಂಭವನ್ನು ಪಡೆದುಕೊಂಡಿದೆ.
ಡಿಜಿಟಲ್ ಜಗತ್ತಿನ ಕರಾಳ ವಾಸ್ತವವನ್ನು ತೆರೆದಿಡುವ ʼಲವ್ ಸೆಕ್ಟ್ ಔರ್ ಧೋಖಾ -2ʼ ಸಿನಿಮಾದಲ್ಲಿ ಟೈಟಲ್ ನಲ್ಲೇ ಹೇಳಿರುವಂತೆ ಪ್ರೇಮ ಹಾಗೂ ಕಾಮದ ನಡುವಿನ ಕಥೆಯನ್ನು ಡಿಜಿಟಲ್ ಯುಗದ ವಾಸ್ತವದೊಂದಿಗೆ ಹೇಳುವ ಸಿನಿಮಾವಾಗಿದೆ.
ಸಿನಿಮಾದಲ್ಲಿ ಒಂದಷ್ಟು ಹಸಿಬಿಸಿ ದೃಶ್ಯಗಳನ್ನು ಕಥೆಗೆ ತಕ್ಕ ಹಾಗೆ ತೋರಿಸಲಾಗಿದೆ. ಮೊದಲ ದಿನ ಸಿನಿಮಾ 15 ಲಕ್ಷ ರೂಪಾಯಿ ಗಳಿಕೆಯನ್ನು ಕಂಡಿದೆ.
ಪರಿತೋಷ್ ತಿವಾರಿ, ಬೋನಿತಾ ರಾಜಪುರೋಹಿತ್ ಮತ್ತು ಅಭಿನವ್ ಸಿಂಗ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ನಿರೀಕ್ಷೆಗೆ ತಕ್ಕ ಸಿನಿಮಾಕ್ಕೆ ಪಾಸಿಟಿವ್ ಆರಂಭ ಸಿಕ್ಕಿಲ್ಲ.
ಇನ್ನು ವಿದ್ಯಾ ಬಾಲನ್ ಹಾಗೂ ಪ್ರತೀಕ್ ಗಾಂಧಿ ಅಭಿನಯದ ‘ದೋ ಔರ್ ದೋ ಪ್ಯಾರ್’ ಮೊದಲ ದಿನ ಉತ್ತಮ ಆರಂಭವನ್ನು ಪಡೆದುಕೊಂಡಿದೆ.
ಶಿರ್ಷಾ ಗುಹಾ ಠಾಕುರ್ತಾ ನಿರ್ದೇಶನದ ಈ ಸಿನಿಮಾ ಆಧುನಿಕ ದಿನದ ಸಂಬಂಧಗಳ ಸುತ್ತ ಸಾಗುವ ಕಥೆಯನ್ನೊಳಗೊಂಡಿದೆ. ವಿಮರ್ಶಕರಿರಂದ ಸಿನಿಮಾದ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿ ಬಂದಿದೆ.
ಮೊದಲ ದಿನ ಈ ಸಿನಿಮಾ 50 ಲಕ್ಷ ರೂಪಾಯಿಯ ಗಳಿಕೆಯನ್ನು ಪಡೆದುಕೊಂಡಿದೆ. ವಿದ್ಯಾ ಬಾಲನ್, ಪ್ರತೀಕ್ ಗಾಂಧಿ, ಇಲಿಯಾನಾ ಡಿಕ್ರೂಜ್ ಮತ್ತು ಸೆಂಧಿಲ್ ರಾಮಮೂರ್ತಿ ಈ ಸಿನಿಮಾದ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ವೀಕೆಂಡ್ ನಲ್ಲಿ ‘ದೋ ಔರ್ ದೋ ಪ್ಯಾರ್’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
MUST WATCH
ಹೊಸ ಸೇರ್ಪಡೆ
Theft Case: ರಾಮಭಜನೆ ಮಾಡುತ್ತಿದ್ದಾಗ ಮನೆಗೆ ನುಗ್ಗಿ ಕಳ್ಳತನ
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
Bengaluru: ಎಸ್‌ಎಸ್‌ಎಲ್‌ಸಿ ಫೇಲ್ ಆಗಿದ್ದಕ್ಕೆ ಭುವನೇಶ್ವರಿ ವಿಗ್ರಹ ವಿರೂಪಗೊಳಿಸಿದ ಯುವಕ
Fraud: ಡ್ರಗ್ಸ್ ಕೇಸ್ ಹೆಸರಲ್ಲಿ ಟೆಕಿಗೆ ಬೆದರಿಸಿ 40 ಲಕ್ಷ ವಂಚನೆ
Bengaluru Krishi Mela: ಜಿಕೆವಿಕೆ ಕೃಷಿ ಮೇಳಕ್ಕೆ 34.13 ಲಕ್ಷ ಜನರ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.