ಬಾಲಿವುಡ್ ವೀಕೆಂಡ್ ದಾಖಲೆ ಅಳಿಸಿ ಹಾಕಿದ ‘ಬ್ರಹ್ಮಾಸ್ತ್ರ’: 3 ದಿನದಲ್ಲಿ ಗಳಿಸಿದ್ದೆಷ್ಟು?
Team Udayavani, Sep 12, 2022, 5:03 PM IST
ಬಿಡುಗಡೆಗೆ ಮುನ್ನವೇ ಬಾಯ್ಕಾಟ್ ಬಿಸಿ ಅನುಭವಿಸಿದ್ದ, ಬಿಡುಗಡೆಯ ದಿನ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಋಣಾತ್ಮಕ ಪ್ರಚಾರ ಕಂಡಿದ್ದ ಅಯಾನ್ ಮುಖರ್ಜಿ ನಿರ್ದೇಶನದ ‘ಬ್ರಹ್ಮಾಸ್ತ್ರ’ ಸಿನಿಮಾ ಇದೀಗ ದೊಡ್ಡ ದಾಖಲೆ ಬರೆದಿದೆ. ಬಿಡುಗಡೆಯಾದ ಮೂರೇ ದಿನಕ್ಕೆ ಭಾರತದಲ್ಲಿ ನೂರು ಕೋಟಿ ರೂ ಸಂಪಾದಿಸಿರುವ ಬ್ರಹ್ಮಾಸ್ತ್ರ ಚಿತ್ರವು ಬಾಲಿವುಡ್ ನ ಹಳೆಯ ದಾಖಲೆಯನ್ನು ಮುರಿದಿದೆ.
ವಾರಾಂತ್ಯದಲ್ಲಿ ಅತೀ ಹೆಚ್ಚು ಸಂಪಾದನೆ ಮಾಡಿದ ಬಾಲಿವುಡ್ ಚಿತ್ರ ಎಂಬ ದಾಖಲೆಗೆ ಬ್ರಹ್ಮಾಸ್ತ್ರ ಪಾತ್ರವಾಗಿದೆ. ಮೂರು ದಿನದಲ್ಲಿ 125 ಕೋಟಿ ರೂ ಗಳಿಕೆ ಮಾಡಿರುವ ಈ ಚಿತ್ರವು, ಈ ಹಿಂದೆ ‘ಸಂಜು’ ಚಿತ್ರದ (120 ಕೋಟಿ) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದೆ.
ಇದನ್ನೂ ಓದಿ:ಗೇಟ್ ತೆರೆಯುವುದು ತಡವಾಗಿದ್ದಕ್ಕೆ ಸೆಕ್ಯುರಿಟಿ ಗಾರ್ಡ್ಗೆ ಕಪಾಳಮೋಕ್ಷ; ವಿಡಿಯೋ ವೈರಲ್
ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬ್ರಹ್ಮಾಸ್ತ್ರ ಚಿತ್ರವು ಭಾರತೀಯ ಮಾರುಕಟ್ಟೆಯಲ್ಲಿ ಮೊದಲ ದಿನ 37 ಕೊಟಿ ರೂ ಸಂಪಾದಿಸಿತ್ತು. ಎರಡನೇ ದಿನ 42 ಕೋಟಿ ರೂ ಮತ್ತು ಮೂರನೇ ದಿನ 45 ಕೋಟಿ ರೂ ಸಂಪಾದನೆ ಮಾಡಿದೆ. ಈ ಮೂಲಕ ಮೂರು ದಿನದಲ್ಲಿ 125 ಕೋಟಿ ರೂ ಗಳಿಸಿದೆ.
ಟ್ರೇಡ್ ಎನಲಿಸ್ಟ್ ಸುಮಿತ್ ಕಡೆಲ್ ನೀಡಿದ ಮಾಹಿತಿಯಂತೆ, ಬ್ರಹ್ಮಾಸ್ತ್ರ ಚಿತ್ರವು ವಿಶ್ವಾದ್ಯಂತ ಮೂರು ದಿನದಲ್ಲಿ 225 ಕೋಟಿ ರೂ ಗಳಿಕೆ ಮಾಡಿದೆ. ಶುಕ್ರವಾರ 75 ಕೋಟಿ ರೂ, ಶನಿವಾರ 85 ಕೋಟಿ ರೂ ಮತ್ತು ರವಿವಾರ ಚಿತ್ರವು 65 ಕೋಟಿ ರೂ ಗಳಿಸಿದೆ.
#Brahmastra scores BIGGEST WEEKEND OF ALL TIME FOR A HINDI FILM.
Fri – ₹ 37 cr
Sat- ₹ 42 cr
Sun- ₹ 45 crWeekend- ₹ 125 cr
ALL languages NBOCHindi Biz
Fri – ₹ 32 cr
Sat – ₹ 37 cr ( 15.80 % growth)
Sun – ₹ 41 cr ( 11 % growth )South Languages – ₹ 15 cr pic.twitter.com/0MHz4OeBx9
— Sumit Kadel (@SumitkadeI) September 12, 2022
‘ಬ್ರಹ್ಮಾಸ್ತ್ರ’ ಚಿತ್ರವು ಎರಡು ಭಾಗಗಳಲ್ಲಿ ತಯಾರಾಗುತ್ತಿದೆ. ಮೊದಲ ಭಾಗ ಶಿವದಲ್ಲಿ ರಣಬೀರ್, ಆಲಿಯಾ ಭಟ್ ಜೊತೆಗೆ ಅಮಿತಾಭ್ ಬಚ್ಚನ್, ನಾಗಾರ್ಜುನ, ಮೌನಿ ರಾಯ್, ಸೌರವ್ ಗುರ್ಜಾರ್ ಮುಂತಾದವರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.