BRO: ಶೀಘ್ರದಲ್ಲಿ ಥಿಯೇಟರ್ ಆಟ ಮುಗಿಸಲಿದೆ ‘ಬ್ರೋ’?: ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹಿನ್ನೆಡೆ
Team Udayavani, Aug 5, 2023, 11:11 AM IST
ಹೈದರಾಬಾದ್: ಪವರ್ ಸ್ಟಾರ್ ಪವನ್ ಕಲ್ಯಾಣ್ – ಸಾಯಿ ಧರಮ್ ತೇಜ್ ಅಭಿನಯದ ʼಬ್ರೋʼ ಸಿನಿಮಾದ ಕಲೆಕ್ಷನ್ ದಿನಕಳೆದಂತೆ ಕಡಿಮೆ ಆಗುತ್ತಿದೆ. ಸಿನಿಮಾ ಶೀಘ್ರದಲ್ಲಿ ಚಿತ್ರಮಂದಿರದಿಂದ ಹೊರ ಹೋಗುವ ಸಾಧ್ಯತೆಯಿದೆ ಎನ್ನುವ ಮಾತು ಟಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿದೆ.
ಟಾಲಿವುಡ್ ನ ಎರಡು ಬಿಗ್ ಸ್ಟಾರ್ ಗಳ ಸಿನಿಮಾವಾಗಿರುವುದರಿಂದ ʼಬ್ರೋʼ ಮೇಲೆ ನಿರೀಕ್ಷೆಗಳಿತ್ತು. ಅದರಂತೆ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ 30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ಮೂಲಕ ಸಿನಿಮಾ ಟಾಲಿವುಡ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವ ನಿರೀಕ್ಷೆ ಹುಟ್ಟಿಸಿತು.
ಸಮುದ್ರಕಣಿ ನಿರ್ದೇಶನ “ಬ್ರೋ” ಚಿತ್ರದ ಬಾಕ್ಸ್ ಆಫೀಸ್ ಗಳಿಕೆ ದಿನಕಳೆದಂತೆ ಕಡಿಮೆ ಆಗುತ್ತಾ ಬಂದಿದೆ. ಸಿನಿಮಾ ಬಿಡುಗಡೆಯಾದ 8 ದಿನಕ್ಕೆ ಅಂದರೆ ಆಗಸ್ಟ್ 4 ರಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ವಿಚಾರದಲ್ಲಿ ಹಿಂದೆ ಬಿದ್ದಿದೆ. ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ 8ನೇ ದಿನ ಸಿನಿಮಾ ಕೇವಲ 1 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇದುವರೆಗೆ 75.20 ಕೋಟಿ ರೂಪಾಯಿಯನ್ನು ಸಿನಿಮಾ ಗಳಿಸಿದೆ. ಆಗಸ್ಟ್ 4 ರಂದು ಚಿತ್ರದ ಆಕ್ಯುಪೆನ್ಸಿ ರೇಟ್ 17.63 ಶೇಕಡಾರಷ್ಟಿದೆ.
ಸಿನಿಮಾ ಶೀಘ್ರದಲ್ಲಿ ಥಿಯೇಟರ್ ಗಳಿಂದ ಹೊರಹೋಗುವ ಸಾಧ್ಯತೆಗಳಿವೆ ಎನ್ನವುದು ಟಾಲಿವುಡ್ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಜುಲೈ 28 ರಂದು ಸಿನಿಮಾ ತೆರೆಗೆ ಬಂದಿತ್ತು.
ಈ ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಚಿತ್ರಕಥೆ ಬರೆದಿದ್ದಾರೆ. ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್, ಕೇತಿಕಾ ಶರ್ಮಾ, ರೋಹಿಣಿ, ಬ್ರಹ್ಮಾನಂದಂ ಮತ್ತು ಸುಬ್ಬರಾಜು ಪ್ರಮುಖ ಪಾತ್ರಗಳಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Suniel Shetty: ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಅವಘಡ; ಸುನಿಲ್ ಶೆಟ್ಟಿಗೆ ಗಂಭೀರ ಗಾಯ
Threat Call: ಸಲ್ಮಾನ್ ಖಾನ್ ಬಳಿಕ ಬಾಲಿವುಡ್ ನಟ ಶಾರುಖ್ ಖಾನ್ ಗೂ ಜೀವ ಬೆದರಿಕೆ
SRK: ಶಾರುಖ್ ಭೇಟಿಗೆ 95 ದಿನ ಮನೆ ಹೊರಗೆ ಕಾದು ಕೂತ ಅಭಿಮಾನಿ; ನಟ ಕೊಟ್ಟ ಉಡುಗೊರೆ ಏನು?
BʼTown: ʼಪುಷ್ಪ-2ʼಗೆ ದಾರಿ ಬಿಟ್ಟ ವಿಕ್ಕಿ ಕೌಶಲ್ ʼಛಾವಾʼ; ರಿಲೀಸ್ ಡೇಟ್ ಮುಂದೂಡಿಕೆ?
Ramayana: ಎರಡು ಭಾಗಗಳಾಗಿ ಬರಲಿದೆ ಬಿಗ್ ಬಜೆಟ್ ʼರಾಮಾಯಣʼ; ರಿಲೀಸ್ ಡೇಟ್ ಅನೌನ್ಸ್
MUST WATCH
ಹೊಸ ಸೇರ್ಪಡೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ
Siddapura: ಅದೃಷ್ಟ ತಂದ ಲಾರಿ ಧರ್ಮಸ್ಥಳ ಕ್ಷೇತ್ರಕ್ಕೆ ಸಮರ್ಪಣೆ
Bengaluru: ಮಾದಾವರ ವಿಸ್ತರಿತ ಮೆಟ್ರೊದಲ್ಲಿ ಮೊದಲ ದಿನ 16000 ಜನ ಪ್ರಯಾಣ
Balaganur: ಕಾಲುವೆಯಲ್ಲಿ ನವಜಾತ ಶಿಶು ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.