![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Feb 20, 2019, 6:01 AM IST
ಹೊಸದಿಲ್ಲಿ : ರಾಜಕೀಯ ಪಕ್ಷಗಳಿಂದ ಅಪಾರ ಮೊತ್ತದ ಹಣ ಪಡೆದು ಅವುಗಳ ಪರವಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಚುನಾವಣಾ ಪ್ರಚಾರಾಭಿಯಾನ ಕೈಗೊಳ್ಳುವ ಡೀಲ್ ಗೆ 30ಕ್ಕೂ ಅಧಿಕ ಭಾರತೀಯ ಸಿನೆಮಾ ಮತ್ತು ಟಿವಿ ನಟ-ನಟಿಯರು ಒಪ್ಪಿಕೊಂಡಿರುವುದು ಇದೀಗ ಕುಟುಕು ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.
ರಾಜಕೀಯ ಪಕ್ಷಗಳು ತೆರಿಗೆ ಒಳಪಡದಂತೆ ನಗದು ರೂಪದಲ್ಲಿ ತಮಗೆ ಹಣ ಪಾವತಿಸಬೇಕು ಎಂದು ಈ ನಟ-ನಟಿಯರು ಕೇಳಿಕೊಂಡಿದ್ದು ಈ ಮೂಲಕ ಅವರ ಈ ಅಕ್ರಮ ಸಂಭಾವನೆ ಕಾಳಧನವಾಗಲಿದೆ.
ಈ ರೀತಿಯ ಒಪ್ಪಂದವನ್ನು ರಾಜಕೀಯ ಪಕ್ಷಗಳೊಂದಿಗೆ ಮಾಡಿಕೊಂಡಿರುವ ಮತ್ತು ಕುಟುಕು ಕಾರ್ಯಾಚರಣೆಯ ಕ್ಯಾಮೆರಾದಲ್ಲಿ ಸೆರೆ ಸಿಕ್ಕ ನಟ-ನಟಿಯರೆಂದರೆ ವಿವೇಕ್ ಒಬೆರಾಯ್, ಶಕ್ತಿ ಕಪೂರ್, ಜಾಕಿ ಶ್ರಾಫ್, ಆಮಿಷಾ ಪಟೇಲ್, ಮಹಿಮಾ ಚೌಧರಿ ಮತ್ತು ಸೋನು ಸೂದ್; ಗಾಯಕರ ಪೈಕಿ ಕೈಲಾಶ್ ಖೇರ್, ಅಭಿಜಿತ್ ಮತ್ತು ಮಿಕಾ ಅವರ ಹೆಸರು ಕೂಡ ಬಹಿರಂಗವಾಗಿದೆ.
ಸುದ್ದಿ ವೆಬ್ ಸೈಟ್ ಕೋಬ್ರಾ ಪೋಸ್ಟ್ ಕಳೆದ ವರ್ಷ ಮೂರು – ನಾಲ್ಕು ತಿಂಗಳ ಅವಧಿಯಲ್ಲಿ ನಡೆಸಿದ್ದ ಕ್ಯಾಮೆರಾ ಕುಟುಕು ಕಾರ್ಯಾಚರಣೆಯಲ್ಲಿ ಈ ನಟ-ನಟಿಯರು ಕ್ಯಾಶ್ ಫಾರ್ ಟ್ವೀಟ್ ಕೊಡುಗೆಯನ್ನು ಸ್ವೀಕರಿಸಿರುವುದು ದಾಖಲಾಗಿದೆ.
ಕೋಬ್ರಾ ಪೋಸ್ಟ್ ನಿನ್ನೆ ಮಂಗಳವಾರ ಬಿಡುಗಡೆ ಮಾಡಿದ್ದ ‘ಆಪರೇಶನ್ ಕರೋಕೆ’ ಶೀರ್ಷಿಕೆಯ ಕುಟುಕು ಕಾರ್ಯಾಚರಣೆಯ ವಿಡಿಯೋ ಡಾಕ್ಯುಮೆಂಟರಿ ಇದೀಗ ರಾಜಕೀಯ ವಲಯಗಳಲ್ಲಿ ಸಂಚಲನ ಉಂಟುಮಾಡಿದೆ.
ನಟ – ನಟಿಯರು ಮಾತ್ರವಲ್ಲದೆ ಡ್ಯಾನ್ಸರ್‌ಗಳು, ಸಿಂಗರ್ ಗಳು, ಮಾಡೆಲ್‌ಗಳು ಮುಂತಾಗಿ ಹಲವು ಬಗೆಯ ಕಲಾವಿದರು ಈ ಕುಟುಕು ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುವುದನ್ನು ವಿಡಿಯೋ ಡಾಕ್ಯುಮೆಂಟರಿಯಲ್ಲಿ ದಾಖಲಿಸಲಾಗಿದೆ.
ಕಾಂಗ್ರೆಸ್, ಬಿಜೆಪಿ, ಆಮ್ ಆದ್ಮಿ ಪಾರ್ಟಿಯ ಏಜಂಟರುಗಳು ಈ ಕಲಾವಿದರಿಗೆ ಶೇ.10ರಿಂದ 20ರಷ್ಟು ಮುಂಗಡ ಹಣವನ್ನು ಚೆಕ್ ಅಥವಾ ಬ್ಯಾಂಕ್ ವರ್ಗಾವಣೆ ಮೂಲಕ ಮತ್ತು ಉಳಿದ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸುವ ಕೊಡುಗೆಯನ್ನು ನೀಡಲಾಗಿದ್ದು ಅವರದನ್ನು ಸ್ವೀಕರಿಸಿರುವುದು ದಾಖಲಾಗಿದೆ.
ವಿಶೇಷವೆಂದರೆ ರಾಜಕೀಯ ಪಕ್ಷಗಳ ಏಜಂಟರುಗಳ ಈ ಕೊಡುಗೆಯನ್ನು ತಿರಸ್ಕರಿಸಿದವರೆಂದರೆ ವಿದ್ಯಾ ಬಾಲನ್, ರಜಾ ಮುರಾದ್, ಅರ್ಷದ್ ವಾರ್ಸಿ, ಮತ್ತು ಟಿವಿ ನಟ ಸೌಮ್ಯ ಟಂಡನ್.
ನಟ – ನಟಿಯರ ಬ್ರ್ಯಾಂಡ್ ವ್ಯಾಲ್ಯೂಗೆ ಅನುಗುಣವಾಗಿ ತಲಾ ಮೆಸೇಜ್‌ಗೆ 2 ಲಕ್ಷ ದಿಂದ 20 ಲಕ್ಷ ರೂ. ವರೆಗೆ ಹಣ ನೀಡುವ ಕೊಡುಗೆಯನ್ನು ಏಜಂಟರು ನೀಡಿದ್ದರು. ಟ್ಟಿಟರ್ ನಲ್ಲಿ ಅಪಾರ ಸಂಖ್ಯೆ ಹಿಂಬಾಲಕರನ್ನು ಹೊಂದಿರುವ ಕೆಲವು ಸೆಲೆಬ್ರಿಟಿಗಳಿಗೆ 20 ಕೋಟಿ ರೂ. ಕೊಡುಗೆಯನ್ನೂ ನೀಡಲಾಗಿತ್ತು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.