![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 25, 2022, 5:32 PM IST
ಮುಂಬಯಿ: ಬಣ್ಣದ ಲೋಕದಲ್ಲಿ ಕಾಸ್ಟಿಂಗ್ ಕೌಚ್ ಬಗೆಗಿನ ಕರಾಳ ಅನುಭವವನ್ನು ಅನೇಕ ಕಲಾವಿದರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈಗ ಖ್ಯಾತ ಕಿರುತೆರೆ ನಟಿಯೊಬ್ಬರು ತಮಗಾದ ಕೆಟ್ಟ ಅನುಭವದ ಬಗ್ಗೆ ಮಾತಾನಾಡಿದ್ದಾರೆ.
ಹಿಂದಿ ಕಿರುತೆರೆಯಲ್ಲಿ ʼಜನಂ ಮೋಹೇ ಬಿತಿಯ ಹಿ ಕಿಜೋʼ ಧಾರಾವಹಿಯಲ್ಲಿ ಲಾಲಿ ಎಂಬ ಪಾತ್ರದ ಮೂಲಕ ಜನಮನ್ನಣೆಯನ್ನು ಪಡೆದ ರತನ್ ರಜಪೂತ್, ʼಸಂತೋಷಿ ಮಾʼ ಧಾರಾವಾಹಿಯಲ್ಲಿ ಸಂತೋಷಿ ಎನ್ನುವ ಪಾತ್ರ ಹಾಗೂ ಯೂಟ್ಯೂಬ್ ನಲ್ಲಿ ತಮ್ಮದೇ ಚಾನೆಲ್ ವೊಂದನ್ನು ಹೊಂದಿದ್ದಾರೆ.
ಕಿರುತೆರೆಯಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿರುವ ರತನ್ ಈ ಹಿಂದೆ ತಮ್ಮ ವೃತ್ತಿ ಬದುಕಿನಲ್ಲಾದ ಕರಾಳ ಅನುಭವದ ಬಗ್ಗೆ ಇತ್ತೀಚಿಗೆ ಮಾಧ್ಯಮವೊಂದರಲ್ಲಿ ಮಾತಾನಾಡಿದ್ದಾರೆ.
“14 ವರ್ಷದ ಹಿಂದೆ ನಾನು ಮುಂಬಯಿ ಹೋಗಿದ್ದೆ. ಅಲ್ಲಿ 60-65 ರ ವಯಸ್ಸಿನ ನಿರ್ಮಾಪಕರೊಬ್ಬರನ್ನು ಭೇಟಿಯಾಗಿದ್ದೆ. ಆ ವೇಳೆ ಅವರು ನನ್ನನು ನೋಡಿ, ನಿನ್ನ ಕೂದಲು, ಚರ್ಮ ನೋಡು ನೀನು ಹೇಗೆ ಕಾಣ್ತಾ ಇದ್ದೀಯಾ, ನಿನ್ನ ಸಂಪೂರ್ಣ ಲುಕ್ ಬದಲಾಗಬೇಕು. ಅದಕ್ಕಾಗಿ 2 ರಿಂದ 2.5 ಲಕ್ಷ ರೂ. ಖರ್ಚು ಆಗುತ್ತದೆ. ಅದಕ್ಕಾಗಿ ನಾನು ಹಣ ಖರ್ಚು ಮಾಡಬಲ್ಲೆ ಆದರೆ ನೀನು ನನ್ನೊಂದಿಗೆ ಸ್ನೇಹಿತೆ ಆಗಬೇಕು ಎಂದು ಹೇಳಿದ್ದರು. ಇದನ್ನು ಕೇಳಿ ರತನ್ ಆ ನಿರ್ಮಾಪಕರಿಗೆ “ನೀವು ನನಗೆ ತಂದೆ ಸಮಾನರು, ನಾನು ನಿಮ್ಮೊಂದಿಗೆ ಸ್ನೇಹಿತೆ ಆಗಲು ಹೇಗೆ ಸಾಧ್ಯ? ಎನ್ನುತ್ತಾರೆ. ಇದನ್ನು ಕೇಳಿದ ಆ ನಿರ್ಮಾಪಕ ಸಿಟ್ಟಾಗಿ, ಸಿನಿಮಾ ಇಂಡಸ್ಟ್ರಿಯಲ್ಲಿ ಮಾತ್ರ ಈ ರೀತಿ ಸ್ನೇಹಿತರಾಗಲು ಸಾಧ್ಯ. ಒಂದು ವೇಳೆ ನನ್ನ ಮಗಳು ನಟಿಯಾಗಲು ಬಯಸಿದರೆ ಅವಳೊಂದಿಗೂ ನಾನು ಮಲಗುತ್ತಿದ್ದೆ ಎಂದಿದ್ದಾರೆ. ಇದನ್ನು ಕೇಳಿದ ರತನ್ ಆಘಾತಕ್ಕೊಳಗಾಗಿ ಆ ಕ್ಷಣದಿಂದಲೇ ಅಲ್ಲಿಂದ ಹೊರ ಬರುತ್ತಾರೆ.
ಕೊನೆಯಲ್ಲಿ ರತನ್, ಈ ಘಟನೆ ಆದ ಬಳಿಕ ನಾನು ಮತ್ತೆಂದೂ ಸಿನಿಮಾ ಇಂಡಸ್ಟ್ರಿಗೆ ಹೋಗಿ ನಟಿಯಾಗುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.