Viral Video: ಸೆಲ್ಫಿಗಾಗಿ ಬಂದಾತನ ತಲೆಗೆ ಹೊಡೆದ ನಾನಾ ಪಾಟೇಕರ್.!
Team Udayavani, Nov 15, 2023, 2:10 PM IST
ಮುಂಬಯಿ: ಅಭಿಮಾನಿಗಳು ಸೆಲ್ಫಿ ಕೇಳಲು ಬರುವಾಗ ಕೆಲ ಸೆಲೆಬ್ರಿಟಿಗಳು ಉಡಾಫೆಯಾಗಿ ವರ್ತಿಸುತ್ತಾರೆ. ಇದಕ್ಕೆ ಹೊಸ ಉದಾಹರಣೆಯಾಗಿ ಹಿರಿಯ ನಾನಾ ಪಾಟೇಕರ್ ನಿಂತಿದ್ದಾರೆ. ಇತ್ತೀಚೆಗೆ ಅವರು ಅಭಿಮಾಯೊಂದಿಗೆ ವರ್ತಿಸಿದ ರೀತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾಲಿವುಡ್ ಸೇರಿದಂತೆ, ಮರಾಠಿ ಸಿನಿಮಾರಂಗದಲ್ಲೂ ತನ್ನ ನಟನೆ ಮೂಲಕ ಅಪಾರ ಮೆಚ್ಚುಗೆ ಹಾಗೂ ಗೌರವವನ್ನು ಪಡೆದುಕೊಂಡಿರುವ ನಾನಾ ಪಾಟೇಕರ್ ಇತ್ತೀಚೆಗೆ ಅಭಿಮಾನಿಯೊಬ್ಬರ ಜೊತೆ ನಡೆಸಿಕೊಂಡ ರೀತಿಗೆ ಅನೇಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
‘ದಿ ವ್ಯಾಕ್ಸಿನ್ ವಾರ್’ ನಂತರ ನಾನಾ ಪಾಟೇಕರ್ ತಮ್ಮ ಮುಂದಿನ ಚಿತ್ರದ ಚಿತ್ರೀಕರಣವನ್ನು ವಾರಣಾಸಿಯಲ್ಲಿ ನಡೆಸುತ್ತಿದ್ದಾರೆ. ಶೂಟಿಂಗ್ ವೇಳೆ ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ನೆರದಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬ ನಾನಾ ಪಾಟೇಕರ್ ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಬಂದಿದ್ದಾರೆ.
ನಾನಾ ಪಾಟೇಕರ್ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ ಅಭಿಮಾನಿಯ ತಲೆಗೆ ಹೊಡೆದು ದೂಡಿದ್ದಾರೆ. ಇದಾದ ಬಳಿಕ ಸಿಬ್ಬಂದಿ ಅಭಿಮಾನಿಯನ್ನು ಇಚೆ ಎಳೆದಿದ್ದಾರೆ. 10 ಸೆಕೆಂಡ್ ಗಳ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದೀಗ ಈ ಬಗ್ಗೆ ನಿರ್ದೇಶಕ ಅನಿಲ್ ಶರ್ಮ ಅವರು, ಸ್ಪಷ್ಟನೆ ನೀಡಿದ್ದು, ಅದು ಸಿನಿಮಾದ ಚಿತ್ರೀಕರಣ ಒಂದು ಶಾಟ್ ಅಷ್ಟೇ. ರಸ್ತೆ ಮಧ್ಯದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಇದರಲ್ಲಿ ಹುಡುಗನ ತಲೆಯೊಂದಕ್ಕೆ ಹೊಡೆಯಬೇಕಾದ ಸೀನ್ ಇತ್ತು. ಈ ಚಿತ್ರೀಕರಣ ನಡೆಯುವ ವೇಳೆ, ಯಾರೋ ಒಬ್ಬರು ಇದನ್ನು ಮೊಬೈಲ್ ನಲ್ಲಿ ಶೂಟ್ ಮಾಡಿ ವೈರಲ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಾನಾ ಪಾಟೇಕರ್ ಶೀಘ್ರದಲ್ಲೇ ಪ್ರಕಾಶ್ ಝಾ ನಿರ್ದೇಶನದ ರಾಜಕೀಯ ಥ್ರಿಲ್ಲರ್ ‘ಲಾಲ್ ಬಟ್ಟಿ’ ಮೂಲಕ ಓಟಿಟಿ ಪಾದಾರ್ಪಣೆ ಮಾಡಲಿದ್ದಾರೆ.
Stars won’t exist without fans….Fans should also avoid taking selfies with these egoistic stars…
What is this #Nanapatekar ji???#Prabhas never did like this in his entire career even after getting PAN Indian stardom with #Baahubali ….#Salaar pic.twitter.com/Mb6dIFkzzw— Tolly hub (@tolly_hub) November 15, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.