ಸುಧೀರ್ ಗುಪ್ತಾಗೆ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆಯ ಹೊಣೆ
ಸುನಂದಾ ಪ್ರಕರಣದ ತನಿಖೆ ನಡೆಸಿದ್ದ ವಿಧಿ ವಿಜ್ಞಾನ ತಜ್ಞ
Team Udayavani, Aug 21, 2020, 6:08 AM IST
ಮುಂಬಯಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಸಿಬಿಐನ ವಿಧಿವಿಜ್ಞಾನ ತಜ್ಞ ಸುಧೀರ್ ಗುಪ್ತಾ ಅವರೇ ಈಗ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ನಡೆಸಲಿದ್ದಾರೆ.
ಏಮ್ಸ್‌ನ ವಿಧಿವಿಜ್ಞಾನ ತಂಡವು ಸದ್ಯದಲ್ಲೇ ಸುಶಾಂತ್‌ರ ಬಾಂದ್ರಾದ ನಿವಾಸಕ್ಕೆ ಭೇಟಿ ನೀಡಲಿದೆ. ಜತೆಗೆ, ಪ್ರಕರಣ ಸಂಬಂಧ ಹೇಳಿಕೆಗಳನ್ನು ಪಡೆಯಲು 5-6 ತಂಡವನ್ನು ಸಿಬಿಐ ರಚಿಸಲಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಸಿಬಿಐ ತನಿಖೆಗೆ ಸುಪ್ರೀಂ ಕೋರ್ಟ್‌ನ ಒಪ್ಪಿಗೆ ಸಿಕ್ಕ ಬೆನ್ನಲ್ಲೇ ಗುರುವಾರ ಕೇಂದ್ರ ತನಿಖಾ ಸಂಸ್ಥೆಯ ತಂಡ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳಿಗಾಗಿ ಮುಂಬಯಿ ಪೊಲೀಸರನ್ನು ಸಂಪ ರ್ಕಿ ಸಿದೆ. ಅಲ್ಲದೆ, ಸುಶಾಂತ್ ಕುಟುಂಬ ಸದಸ್ಯ ರೊಂದಿಗೆ ವಾಟ್ಸ್‌ಆ್ಯಪ್‌ನಲ್ಲಿ ಚಾಟ್ ಮಾಡಿದ್ದ ಡಿಸಿಪಿಯನ್ನು ಹಾಗೂ ಸುಶಾಂತ್ ಸಹೋದರಿ ಯನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಜತೆಗೆ, ತನಿಖೆಯಲ್ಲಿ ಮುಂಬಯಿ ಪೊಲೀಸರು ಮಾಡಿರುವ ಸಂಭಾವ್ಯ ಲೋಪಗಳ ಕುರಿತೂ ಸಿಬಿಐ ತನಿಖೆ ನಡೆಸಲಿದೆ ಎಂದು ಹೇಳಲಾಗಿದೆ. ಈ ನಡುವೆ, ಪ್ರಕರಣದ ತನಿಖೆಗೆ ಸಂಬಂಧಿಸಿ ಸಿಬಿಐಗೆ ಮಹಾರಾಷ್ಟ್ರ ಸರಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಗುರುವಾರ ಹೇಳಿದ್ದಾರೆ.
ಅಂಡರ್‌ವರ್ಲ್ಡ್ ನಂಟು ಸಾಧ್ಯತೆ
ಭೂಗತ ಜಗತ್ತಿನ ಅಪರಾಧಿಗಳಿಗೂ ಸುಶಾಂತ್ ಸಾವಿಗೂ ನಂಟು ಇರುವ ಸಾಧ್ಯತೆಯಿದೆ ಎಂದು ಮಾಜಿ ರಾ ಅಧಿಕಾರಿ ಎನ್.ಕೆ. ಸೂದ್ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣದಲ್ಲಿ ಅವರು ಹಣಕಾಸಿನ ತೊಂದರೆಗೆ ಸಿಲುಕಿದ್ದರು ಎಂಬುವುದು ಯಾರನ್ನೋ ರಕ್ಷಿಸಲು ಮಾಡುತ್ತಿರುವ ಯತ್ನ ಎಂದು ನನಗನಿಸುತ್ತಿದೆ. ಈ ಸಾವಿನಲ್ಲಿ ಸುಶಾಂತ್ ಮನೆಯಲ್ಲಿ ಕೆಲಸಕ್ಕಿದ್ದವರ ಕೈವಾಡವೂ ಇರಬಹುದು. ಅವರಿಗೆ ಹಣದಾಸೆ ತೋರಿಸಿ ಅಂಡರ್‌ವರ್ಲ್ಡ್ ಕ್ರಿಮಿನಲ್‌ಗಳು ಈ ಕೃತ್ಯ ಮಾಡಿಸಿರಬಹುದು ಎಂದು ಸೂದ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Armaan Malik: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್; ಇಲ್ಲಿದೆ ಫೋಟೋಸ್
ಹಲವು ಬಾರಿ ಸಾಯುವ ಬಗ್ಗೆ ಯೋಚಿಸಿದ್ದೆ.. #MeToo ಆರೋಪದ ಬಗ್ಗೆ ನಿರ್ದೇಶಕ ಸಾಜಿದ್ ಮಾತು
Transformation; ಕೇವಲ 18 ತಿಂಗಳಲ್ಲಿ 55 ಕೆ.ಜಿ. ತೂಕ ಕಳೆದುಕೊಂಡ ಖ್ಯಾತ ನಟ ರಾಮ್ ಕಪೂರ್
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.