Bollywood: ʼಚಂದು ಚಾಂಪಿಯನ್ʼಗೆ ಪಾಸಿಟಿವ್ ರೆಸ್ಪಾನ್ಸ್: ಮೊದಲ ದಿನ ಗಳಿಸಿದ್ದೆಷ್ಟು?
Team Udayavani, Jun 15, 2024, 12:22 PM IST
ಮುಂಬಯಿ: ಕಾರ್ತಿಕ್ ಆರ್ಯನ್ ಅವರ ಬಹು ನಿರೀಕ್ಷಿತ ʼಚಂದು ಚಾಂಪಿಯನ್ʼ ವರ್ಲ್ಡ್ ವೈಡ್ ರಿಲೀಸ್ ಆಗಿದೆ.
ಕಾರ್ತಿಕ್ ಆರ್ಯನ್ ಪಾತ್ರಕ್ಕಾಗಿ ಸಾಕಷ್ಟು ಶ್ರಮವಹಿಸಿದ್ದು, ಸ್ಪೋರ್ಟ್ಸ್ ಬಯೋಪಿಕ್ ಇದೇ ಕಾರಣಕ್ಕಾಗಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಭಾರತದ ಮೊದಲ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮುರಳಿಕಾಂತ್ ಪೇಟ್ಕರ್ ಜೀವನದ ಕಥೆಯನ್ನೊಳಗೊಂಡಿರುವ ʼಚಂದು ಚಾಂಪಿಯನ್ʼ ಗೆ ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಚಿತ್ರದ ಬಗ್ಗೆ ಎಲ್ಲೆಡೆ ಪಾಸಿಟಿವ್ ರಿವ್ಯೂ ಕೇಳಿ ಬರುತ್ತಿದೆ. ವಿಮರ್ಶಕರು ಕಾರ್ತಿಕ್ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ರೇಲರ್ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಿದ್ದ ʼಚಂದು ಚಾಂಪಿಯನ್ʼ ಈ ವಾರ ಥಿಯೇಟರ್ ಗೆ ಲಗ್ಗೆಯಿಟ್ಟಿದೆ. ಆದರೆ ಬಾಕ್ಸ್ ಆಫೀಸ್ ನಲ್ಲಿ ದೊಡ್ಡಮಟ್ಟದ ಆರಂಭವನ್ನು ಪಡೆದುಕೊಳ್ಳುವ ನಿರೀಕ್ಷೆ ಮಾತ್ರ ಸುಳ್ಳಾಗಿದೆ.
‘ಚಂದು ಚಾಂಪಿಯನ್’ ಮೊದಲ ದಿನ 4.75 ಕೋಟಿ ರೂ.ಗಳಿಸಿರುವುದಾಗಿ ವರದಿಯಾಗಿದೆ. ಇದು ಕಾರ್ತಿಕ್ ವೃತ್ತಿ ಬದುಕಿನ ಅತ್ಯಂತ ಕಡಿಮೆ ಓಪನಿಂಗ್ ಪಡೆದ ಚಿತ್ರವಾಗಿದೆ. ಈ ಹಿಂದೆ 2015 ರಲ್ಲಿ ‘ಪ್ಯಾರ್ ಕಾ ಪಂಚ್ ನಾಮಾ 2’ ಅತ್ಯಂತ ಕಡಿಮೆ ಓಪನಿಂಗ್ ಪಡೆದುಕೊಂಡಿತ್ತು.
ಇದಲ್ಲದೆ ‘ಸತ್ಯಪ್ರೇಮ್ ಕಿ ಕಥಾ’ಮೊದಲ ದಿನ 8.25 ಕೋಟಿ ಗಳಿಸಿತ್ತು. ಕಾರ್ತಿಕ್ ಅವರ ‘ಭೂಲ್ ಭುಲೈಯಾ 2’ ಮೊದಲ ದಿನ 14.11 ಕೋಟಿ ರೂ.ಗಳಿಸಿತ್ತು. ಈ ಎಲ್ಲಾ ಚಿತ್ರಗಳನ್ನು ಹೋಲಿಸಿದರೆ ʼಚಂದು ಚಾಂಪಿಯನ್ʼ ಆರಂಭಿಕವಾಗಿ ಕಡಿಮೆ ಗಳಿಕೆ ಕಂಡಿದೆ.
ವಾರಾಂತ್ಯದಲ್ಲಿ ಚಿತ್ರ ಹೆಚ್ಚು ಗಳಿಕೆ ಕಾಣುವ ಸಾಧ್ಯತೆಯಿದೆ ಎನ್ನಲಾಗಿದೆ.
‘ಚಂದು ಚಾಂಪಿಯನ್’ ಗೆ ಸಾಜಿದ್ ನಾಡಿಯಾಡ್ವಾಲಾ ಮತ್ತು ಕಬೀರ್ ಖಾನ್ ಜಂಟಿಯಾಗಿ ಬಂಡವಾಳ ಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.