ಬುಡಕಟ್ಟು ಕುಟುಂಬಕ್ಕೆ ಥಿಯೇಟರ್ ಪ್ರವೇಶ ನಿರಾಕರಣೆ: ಥಿಯೇಟರ್ ವಿರುದ್ದ ನೆಟ್ಟಿಗರು ಗರಂ
ಆಕ್ರೋಶದ ಬಳಿಕ ಸ್ಪಷ್ಟನೆ ಕೊಟ್ಟ ಥಿಯೇಟರ್
Team Udayavani, Mar 30, 2023, 4:21 PM IST
ಚೆನ್ನೈ: ಕನ್ನಡದ ʼಮಫ್ತಿʼ ಸಿನಿಮಾದ ರಿಮೇಕ್ “ಪತ್ತುತಲಾ’ʼ ತಮಿಳಿನಲ್ಲಿ ಇಂದು ಅದ್ಧೂರಿಯಾಗಿ ರಿಲೀಸ್ ಆಗಿದೆ. ಬೆಳಗ್ಗಿನಿಂದಲೇ ಸಿಲಂಬರಸನ್ ಅಭಿಮಾನಿಗಳು ಸಿನಿಮಾ ನೋಡಲು ಟಿಕೆಟ್ ಖರೀದಿಸಿದ್ದಾರೆ. ಚೆನ್ನೈನ ಖ್ಯಾತ ಥಿಯೇಟರ್ ನಲ್ಲಿ ಒಂದಾಗಿರುವ ʼರೋಹಿಣಿ ಥಿಯೇಟರ್ʼ ನಲ್ಲಿ ಟಿಕೆಟ್ ವಿಚಾರವಾಗಿ ನಡೆದ ಘಟನೆಯೊಂದು ವೈರಲ್ ಆಗಿದೆ.
ಸಿಂಬು ಅಭಿಮಾನಿಯಾಗಿರುವ ಬುಡಕಟ್ಟು ಕುಟುಂಬವೊಂದು ಮಕ್ಕಳೊಂದಿಗೆ ಸಿನಿಮಾ ನೋಡಲು ಥಿಯೇಟರ್ ಗೆ ಬಂದಿದ್ದಾರೆ. ಟಿಕೆಟ್ ಖರೀದಿಸಿರುವ ಕುಟುಂಬ ಇನ್ನೇನು ಸಿನಿಮಾ ನೋಡಲು ಥಿಯೇಟರ್ ಗೆ ಹೋಗಬೇಕು ಎನ್ನುವಷ್ಟರಲ್ಲೇ ಥಿಯೇಟರ್ ನ ಸಿಬ್ಬಂದಿ ಕುಟುಂಬವನ್ನು ತಡೆದಿದೆ.
ನರಿಕುರವ ಬುಡಕಟ್ಟಿಗೆ ಸೇರಿದ ಕುಟುಂಬವನ್ನು ಥಿಯೇಟರ್ ಒಳಗೆ ಹೋಗಲು ತಡೆದ ಸಿಬ್ಬಂದಿಗಳನ್ನು ಇತರ ಜನರು ಯಾಕೆ ಅವರನ್ನು ತಡೆಯುತ್ತಿದ್ದೀರಾ ಎಂದಿದ್ದಾರೆ. ಈ ಬಗ್ಗೆ ಜನ ಥಿಯೇಟರ್ ಮ್ಯಾನೇಜ್ ಮೆಂಟ್ ಗೆ ಪ್ರಶ್ನೆ ಮಾಡಿದ್ದಾರೆ. ವಿಷಯ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದಂತೆ ಥಿಯೇಟರ್ ಸಿಬ್ಬಂದಿ ಬುಡಕಟ್ಟು ಕುಟುಂಬವನ್ನು ಥಿಯೇಟರ್ ಒಳಗೆ ಬಿಟ್ಟಿದ್ದಾರೆ.
ಇದನ್ನೂ ಓದಿ: ಅಧಿವೇಶನ ನಡೆಯುತ್ತಿರುವಾಗ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿದ ಬಿಜೆಪಿ ಶಾಸಕ
ಥಿಯೇಟರ್ ಸ್ಪಷ್ಟೀಕರಣ:
“ಇಂದು ಬೆಳಿಗ್ಗೆ “ಪತ್ತುತಲಾ’ʼ ಸಿನಿಮಾ ವೀಕ್ಷಿಸಲು ಕುಟುಂಬವೊಂದು ನಮ್ಮ ಥಿಯೇಟರ್ ಗೆ ಬಂದಿದೆ. ಅವರನ್ನು ನಮ್ಮ ಸಿಬ್ಬಂದಿಗಳು ತಡೆದಿದ್ದಾರೆ. ಚಲನಚಿತ್ರಕ್ಕೆ ಯು/ಎ ಸೆನ್ಸಾರ್ ಮಾಡಿದ್ದಾರೆ. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಾನೂನಿನ ಪ್ರಕಾರ ಯು/ಎಪ್ರಮಾಣೀಕರಿಸಿದ ಯಾವುದೇ ಚಲನಚಿತ್ರವನ್ನು ವೀಕ್ಷಿಸಲು ಅನುಮತಿಸಲಾಗುವುದಿಲ್ಲ. ಇದೇ ಕಾರಣದಿಂದ ಟಿಕೆಟ್ ತಪಾಸಣೆ ಸಿಬ್ಬಂದಿ ಅವರ ಪ್ರವೇಶವನ್ನು ನಿರಾಕರಿಸಿದ್ದಾರೆ ಎಂದು ಸ್ಪಷ್ಟೀಕರಣ ನೀಡಿದೆ.
ಆದರೆ ನೆಟ್ಟಿಗರು ಈ ಬಗ್ಗೆ ಟ್ವಟಿರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಕಾನೂನನ್ನು ಬದಿಗಿಟ್ಟು ಅದೇ ಶೋನಲ್ಲಿ ಕುಟುಂಬವನ್ನು ಸಿನಿಮಾ ನೋಡಲು ಪ್ರವೇಶ ಕೊಟ್ಟಿದ್ದಾರೆ. ಕುಟುಂಬ ಖುಷಿಯಿಂದ ಸಿನಿಮಾ ನೋಡುವ ಬಗ್ಗೆ ಥಿಯೇಟರ್ ಮ್ಯಾನೇಜ್ ಮೆಂಟ್ ವಿಡಿಯೋ ಹಂಚಿಕೊಂಡಿದೆ.
12 ವರ್ಷದೊಳಗಿನ ಮಕ್ಕಳು ತಮ್ಮ ಪೋಷಕರೊಂದಿಗೆ ಬಂದರೆ ಅವರಿಗೆ ಪ್ರವೇಶ ನೀಡಬಹುದು ಎಂದು ಯು/ಎ ಪ್ರಮಾಣೀಕೃತ ʼದರ್ಬಾರ್ʼ ವೀಕ್ಷಿಸಲು ಧನುಷ್ ಅವರ ಪುತ್ರರಾದ ಯಾತ್ರಾ ಮತ್ತು ಲಿಂಗ ಬಂದಿರುವ ಫೋಟೋವನ್ನು ನೆಟ್ಟಿಗರು ಹಂಚಿಕೊಂಡು ಥಿಯೇಟರ್ ಮ್ಯಾನೇಜ್ ಮೆಂಟ್ ಗೆ ಪ್ರಶ್ನೆ ಮಾಡಿದೆ.
டிக்கெட் இருந்தும் நரிக்குறவ மக்களை படம் பார்க்க அனுமதிக்காத @RohiniSilverScr திரையரங்கம் …
இவுங்களுக்கு நீ தனி ஷோ போட்டுக்காட்டத்தான் போற அத நான் பாக்கத்தான் போறேன் …#RohiniTheatre #PathuThala @SilambarasanTR_ @CMOTamilnadu @IamSellvah pic.twitter.com/1Pd3rE8CsV
— Viji Nambai (@vijinambai) March 30, 2023
— Rohini SilverScreens (@RohiniSilverScr) March 30, 2023
Let me come to your point @rhevanth95 brother . Dhanush sir 2nd son age was 9 or 10 during the release of #Darbar movie which is U/A certified. Then how you can allow them ? 🤔 #RohiniTheatre@RohiniSilverScr ? https://t.co/uYrGu62Hf8 pic.twitter.com/Z0RO2gSBZq
— Chennai Memes (@MemesChennai) March 30, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.